1 ವರ್ಷ ಮುಂಚೆ ಅಭ್ಯರ್ಥಿ ಆಯ್ಕೆ ಮಾಡಿದ್ರೂ ವರ್ಕೌಟ್ ಆಗ್ಲಿಲ್ಲ: ಪರಿಷತ್​​​​​ನಲ್ಲಿ ಕೈ ಸೋಲಿಗೆ ಕಾರಣಗಳು ಹೀಗಿವೆ

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಕೂಟ ಕ್ಲೀನ್ ಸ್ವೀಪ್ ಗೆಲುವು ದಾಖಲಿಸಿದೆ. ಇವಿಎಂ ಬೇಡ ಬ್ಯಾಲೆಟ್ ಪೇಪರ್ ಬೇಕೆಂದು ಅದರಲ್ಲೇ ಎಲೆಕ್ಷನ್ ನಡೆದರೂ ಸಹ ಆಡಳಿತರೂಢ ಕಾಂಗ್ರೆಸ್ ನಾಲ್ಕಕ್ಕೆ ನಾಲ್ಕು ಸ್ಥಾನಗಳಲ್ಲಿ ಸೋತು ಸುಣ್ಣವಾಗಿದೆ. ಇನ್ನು ಈ ಚುನಾವಣೆಗೆ ಒಂದು ವರ್ಷಕ್ಕೂ ಮೊದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ರೂ ಸಹ ಕಾಂಗ್ರೆಸ್​​ನ ಪ್ಲ್ಯಾನ್​​ಗಳು ವರ್ಕೌಟ್ ಆಗಿಲ್ಲ. ಹಾಗಾದ್ರೆ, ಕಾಂಗ್ರೆಸ್ ಸೋಲಿಗೆ ಕಾರಣಗಳೇನು ಎನ್ನುವುದನ್ನು ನೋಡಿ.

1 ವರ್ಷ ಮುಂಚೆ ಅಭ್ಯರ್ಥಿ ಆಯ್ಕೆ ಮಾಡಿದ್ರೂ ವರ್ಕೌಟ್ ಆಗ್ಲಿಲ್ಲ: ಪರಿಷತ್​​​​​ನಲ್ಲಿ ಕೈ ಸೋಲಿಗೆ ಕಾರಣಗಳು ಹೀಗಿವೆ
Congress Leaders
Edited By:

Updated on: Oct 28, 2026 | 4:18 PM

ಬೆಂಗಳೂರು, (ಅಕ್ಟೋಬರ್ 28): ಕರ್ನಾಟಕ ವಿಧಾನ ಪರಿಷತ್ (MLC) ಚುನಾವಣೆ ಫಲಿತಾಂಶ ಆಡಳಿತರೂಢ ಕಾಂಗ್ರೆಸ್​ಗೆ ಮುಖಭಂಗವಾಗಿದೆ. ಸ್ಟಿಂಗ್ ಆಪರೇಶನ್, ಪಕ್ಷದೊಳಗಿನ ಅಸಮಧಾನ, ಗುಂಪುಗಾರಿಕೆಯಿಂದ ಹೈರಾಣಾಗಿರುವ ಕಾಂಗ್ರೆಸ್ ಇದೀಗ ವಿಧಾನ ಪರಿಷತ್ ಚುನಾವಣೆಯ ನಾಲ್ಕೂ ಸ್ಥಾನಗಳಲ್ಲೂ ಸೋಲುಕಂಡಿದೆ. ವಿಶೇಷ ಅಂದ್ರೆ, ನಾಲ್ಕು ಸ್ಥಾನ ಗೆಲ್ಲಲೇಬೇಕೆಂದು ಕಾಂಗ್ರೆಸ್ ಒಂದು ವರ್ಷದ ಮೊದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿತ್ತು. ಆದರೆ, ದೋಸ್ತಿಗಳ ಗಟ್ಟಿ ಹುರಿಯಾಳುಗಳೇ ಆಡಳಿತದ ಪಕ್ಷಕ್ಕೆ ಮರ್ಮಘಾತ ಕೊಟ್ಟಿದ್ದಾರೆ. 2 ಪದವೀಧರ, 2 ಶಿಕ್ಷಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್​​ಗೆ ಭಾರೀ ಮುಖಭಂಗ ಆಗುವಂತೆ ಮಾಡಿದ್ದಾರೆ.

1 ತಿಂಗಳು ಮೊದಲೇ ಕೈ ಅಭ್ಯರ್ಥಿಗಳ ಆಯ್ಕೆ

2 ಪದವೀಧರ, 2 ಶಿಕ್ಷಕರ ಕ್ಷೇತ್ರ ಒಟ್ಟು ನಾಲ್ಕು ಪರಿಷತ್ ಸ್ಥಾನಗಳಿಗೆ ಕಾಂಗ್ರೆಸ್ ಚುನಾವಣೆಗೆ ಒಂದು ತಿಂಗಳು ಇರುವಾಗಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು.ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಶರಣಪ್ಪ‌ ಮಟ್ಟೂರ್, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಪುಟ್ಟಣ್ಣ, ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಮೋಹನ್ ಲಿಂಬಿಕಾಯಿ, ಆಗ್ನೇಯ ಪದವೀಧರರ ಕ್ಷೇತ್ರದಿಂದ ಶಶಿ ಹುಲಿಕುಂಟೆಮಠ ಅವರಿಗೆ ಟಿಕಟ್ ನೀಡಿತ್ತು. ಪ್ರಚಾರಕ್ಕೆ ಸಾಕಷ್ಟು ಸಮಯವಕಾಶ ಸಹ ಇತ್ತು. ಆದ್ರೆ, ಫಲಿತಾಂಶ ಮಾತ್ರ ಉಲ್ಟಾ ಹೊಡೆದಿರುವು ಅಚ್ಚರಿಕೆ ಕಾರಣವಾಗಿದೆ.

ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆಯಲ್ಲಿ ಎನ್‌ಡಿಎಗೆ ಜಯಭೇರಿ: ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಗೆಲುವು

ಎನ್​​ಡಿಎ ನಾಯಕರಿಗೆ ದೊಡ್ಡ ಶಕ್ತಿ, ಹುಮ್ಮಸ್ಸು ಕೊಟ್ಟ ಈ ಗೆಲುವು

ವಿಧಾನಪರಿಷತ್​​ ಚುನಾವಣೆಯಲ್ಲಿ ಅಡ್ಡ ಮತದಾನದಿಂದ ಬಳಲಿ ಬೆಂಡಾಗಿದ್ದ ದೋಸ್ತಿಗೆ ಈ ಚುನಾವಣೆ ಫಲಿತಾಂಶ ಒಂದೊಳ್ಳೆ ಬೂಸ್ಟ್​ ಕೊಟ್ಟಿದೆ. ಅಡ್ಡಮತದಾನದಿಂದ ಮೂಡಿದ್ದ ಅಪನಂಬಿಕೆ, ಒಗ್ಗಟ್ಟಿನ ಪ್ರಶ್ನೆಗೆ ಈ ಪರಿಷತ್ ಚುನಾವಣೆ ಫಲಿತಾಂಶ ಉತ್ತರ ಕೊಟ್ಟಿದೆ. ಪರಿಷತ್​​ನ ನಾಲ್ಕು ಕ್ಷೇತ್ರಗಳಲ್ಲಿನ ಗೆಲುವು ಎನ್​​ಡಿಎ ನಾಯಕರಿಗೆ ದೊಡ್ಡ ಶಕ್ತಿ, ಹುಮ್ಮಸ್ಸು ಕೊಟ್ಟಿದೆ. 2028ರಲ್ಲಿ ದೋಸ್ತಿ ಸರ್ಕಾರವೇ ಆಡಳಿತಕ್ಕೆ ಬರಲಿದೆ ಅಂತ ಬಿಜೆಪಿ, ಜೆಡಿಎಸ್​ ನಾಯಕರು ಭವಿಷ್ಯ ನುಡಿಯುತ್ತಿದ್ರೆ, ಕಾಂಗ್ರೆಸ್​ ಸೋಲಿನ ಪರಾಮರ್ಶೆಗೆ ಮುಂದಾಗಿದೆ.

ಕಾಂಗ್ರೆಸ್​​​ಗೆ ಹೆಚ್ಚಿಸಿದ ತಲೆನೋವು

ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ನಾಲ್ಕು ಸ್ಥಾನ ಗೆದ್ದುಕೊಂಡಿದೆ. ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟಕ್ಕೆ ಕ್ಲೀನ್ ಸ್ವೀಪ್ ಗೆಲುವು ಸಿಕ್ಕಿದೆ.  ಇದು ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿ ಎಂದು ಬಿಜೆಪಿ ಹೇಳಿಕೊಂಡರೆ, ಈ ಫಲಿತಾಂಶ ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಮುಂಬರುವ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಕಾಂಗ್ರೆಸ್ ಡಿಫೆಂಡ್ ಮಾಡಿಕೊಳ್ಳುತ್ತಿದೆ. ಆದ್ರೂ ಸ್ಟಿಂಗ್ ಆಪರೇಶನ್, ಪಕ್ಷದೊಳಗಿನ ಅಸಮಧಾನ, ಗುಂಪುಗಾರಿಕೆಯಿಂದ ಹೈರಾಣಾಗಿರುವ ಕಾಂಗ್ರೆಸ್​​​ಗೆ ಈ ಚುನಾವಣೆಯಲ್ಲಿನ ಮುಖಭಂಗ ತಲೆನೋವು ಹೆಚ್ಚಿಸಿದೆ.

ಕಾಂಗ್ರೆಸ್​ಗೆ ಸೋಲಿಗೆ ಕಾರಣಗಳೇನು?

  • ಪಕ್ಷ ಅಧಿಕಾರದಲ್ಲಿದ್ದರೂ ಫಲ ಕೊಡದ ಚುನಾವಣೆ
  •  ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಗ್ಗೆ ಅತಿಯಾದ ಆತ್ಮ ವಿಶ್ವಾಸ
  •  ಅಭ್ಯರ್ಥಿಗಳು ಸರಿಯಾಗಿ ಶಾಸಕ ರನ್ನು ವಿಶ್ವಾಸಕ್ಕೆ ಪಡೆಯದೇ ಇರುವುದು
  •  ಪರಿಷತ್ ಚುನಾವಣೆ ಬಗ್ಗೆ ಶಾಸಕರ ನಿರಾಸಕ್ತಿ
  • ಸಚಿವರಿಂದಲೂ ಕೊನೆ ಕ್ಷಣದ ತ‌ನಕ ಚುನಾವಣಾ ಕೆಲಸದ ಬಗ್ಗೆ ನಿರ್ಲಕ್ಷ್ಯ
  • ಪರಿಷತ್ ಚುನಾವಣೆ ಮೇಲೆ ಪರಿಣಾಮ ಬೀರಿದ ಸ್ಟಿಂಗ್, ನಾಯಕತ್ವ ಬದಲಾವಣೆಯಂತ ವಿಚಾರಗಳು
  • ಸುಶಿಕ್ಷಿತ ಮತದಾರರಲ್ಲಿ ಕಾಂಗ್ರೆಸ್ ಬಗ್ಗೆ ಮೂಡಿದ ಅಸಮಾಧಾನ
  •  ಮತದಾರರನ್ನು ನೋಂದಣಿ ಮಾಡಿಸುವಲ್ಲೂ ಕೈ ಪಡೆಯ ಕಡೆಗಣನೆ
  • ಅಲ್ಲದೆ ಎಐಸಿಸಿ ಟಾಸ್ಕ್ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲಸ ಮಾಡದ ಕಾರ್ಯಕರ್ತರು
  • ಸರ್ಕಾರ ಹಾಗೂ ಪಕ್ಷದ ನಡುವೆ ಸಮನ್ವಯದ ಕೊರತೆ
  • ಜೆಡಿಎಸ್ ಬಿಜೆಪಿ ಮೈತ್ರಿಯ ಕಾರಣದಿಂದ ಮತ ಕ್ರೋಢೀಕರಣಕ್ಕೆ ಅನುಕೂಲ

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us