ಪ್ರವಾಹದಲ್ಲಿ ಕೊಚ್ಚಿಹೋದ ಸಹೋದರರಿಗಾಗಿ NDRF ಶೋಧ
ಗದಗ: ಮಳೆಯಿಂದ ಮತ್ತೆ ಅಬ್ಬರಿಸಿ ಬೊಬ್ಬಿರಿದ ಬೆಣ್ಣೆಹಳ್ಳ ಪ್ರವಾಹಕ್ಕೆ ಇಬ್ಬರು ಸಹೋದರರು ಕೊಚ್ಚಿಹೋಗಿರುವ ಘಟನೆ ರೋಣ ತಾಲೂಕಿನ ಮಾಳವಾಡ ಬಳಿ ನಡೆದಿದೆ. ನಿನ್ನೆ ಸಾಯಂಕಾಲ ಬೆಣ್ಣೆಹಳ್ಳ ದಾಟುವಾಗ ಹದ್ಲಿ ಗ್ರಾಮದ ನಾಲ್ಕು ಜನ ಯುವಕರು ನೀರುಪಾಲಾಗಿದ್ದರು. ಅದರಲ್ಲಿ ಇಬ್ಬರನ್ನು ರಕ್ಷಣೆ ಮಾಡಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ನರಗುಂದ ತಾಲೂಕಿನ ಹದ್ಲಿಗ್ರಾಮದ ಈರಪ್ಪ ಹಾಗೂ ಅಮೃತ್ ಇಬ್ಬರು ಈಜಿ ದಡಸೇರಿದ್ದಾರೆ. ಆದ್ರೆ 30 ವರ್ಷದ ಕಳಸಪ್ಪ ಹಾಗೂ 15 ವರ್ಷದ ಬಾಲಕ ಈರಣ್ಣ ನೀರು ಪಾಲಾಗಿದ್ದಾರೆ. ಅಮಾವಾಸ್ಯೆಗೆ ದೇವರ ಪೂಜೆಗೆ […]
ಗದಗ: ಮಳೆಯಿಂದ ಮತ್ತೆ ಅಬ್ಬರಿಸಿ ಬೊಬ್ಬಿರಿದ ಬೆಣ್ಣೆಹಳ್ಳ ಪ್ರವಾಹಕ್ಕೆ ಇಬ್ಬರು ಸಹೋದರರು ಕೊಚ್ಚಿಹೋಗಿರುವ ಘಟನೆ ರೋಣ ತಾಲೂಕಿನ ಮಾಳವಾಡ ಬಳಿ ನಡೆದಿದೆ. ನಿನ್ನೆ ಸಾಯಂಕಾಲ ಬೆಣ್ಣೆಹಳ್ಳ ದಾಟುವಾಗ ಹದ್ಲಿ ಗ್ರಾಮದ ನಾಲ್ಕು ಜನ ಯುವಕರು ನೀರುಪಾಲಾಗಿದ್ದರು. ಅದರಲ್ಲಿ ಇಬ್ಬರನ್ನು ರಕ್ಷಣೆ ಮಾಡಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ.
ನರಗುಂದ ತಾಲೂಕಿನ ಹದ್ಲಿಗ್ರಾಮದ ಈರಪ್ಪ ಹಾಗೂ ಅಮೃತ್ ಇಬ್ಬರು ಈಜಿ ದಡಸೇರಿದ್ದಾರೆ. ಆದ್ರೆ 30 ವರ್ಷದ ಕಳಸಪ್ಪ ಹಾಗೂ 15 ವರ್ಷದ ಬಾಲಕ ಈರಣ್ಣ ನೀರು ಪಾಲಾಗಿದ್ದಾರೆ. ಅಮಾವಾಸ್ಯೆಗೆ ದೇವರ ಪೂಜೆಗೆ ನದಿ ನೀರು ತರಲು ಹೋದ ವೇಳೆ ಈ ದುರ್ಘಟನೆ ನಡೆದಿದೆ. ಸದ್ಯ ನೀರುಪಾಲಾದ ಯುವಕರಿಗಾಗಿ ರೋಣ ತಾಲೂಕಿನ ಮೆಣಸಗಿ ಬಳಿಯ ಬೆಣ್ಣೆಹಳ್ಳದಲ್ಲಿ ಎನ್ಡಿಆರ್ಎಫ್, ಅಗ್ನಿಶಾಮಕದಳ, ಪೊಲೀಸರು ಹಾಗೂ ಸ್ಥಳೀಯರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದ್ರೆ ಬೆಣ್ಣೆಹಳ್ಳ ಪ್ರವಾಹ ಕ್ಷಣ ಕ್ಷಣವೂ ಏರುತ್ತಿದ್ದು, ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.
ಕಾರ್ಯಾಚರಣೆ: ನಿನ್ನೆ ಕೊಚ್ಚಿ ಹೋದ ಸ್ಥಳದಲ್ಲಿ ಪೊಲೀಸರಿಂದ ಶೋಧ ಕಾರ್ಯ ನಡೆದಿತ್ತು. ಇಂದು NDRF ತಂಡದಿಂದ ಕಾರ್ಯಚರಣೆ ನಡೆಯುತ್ತಿದೆ. ಎರಡು ಬೋಟ್ಗಳಲ್ಲಿ 12 NDRF ಸದಸ್ಯರು ತೆರಳಿ, ನೀರಿಗಿಳಿದು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದಾರೆ.
Published On - 6:13 pm, Sun, 27 October 19