ನೆಲಮಂಗಲ: ಗನ್ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ನೆಲಮಂಗಲದ ಮಾಚೋಹಳ್ಳಿ ಗೇಟ್ ಬಳಿ ಇರುವ ರಾಮ್ ಜ್ಯುವೆಲ್ಲರ್ಸ್‌ನಲ್ಲಿ ಬಂದೂಕುಧಾರಿಗಳು ಚಿನ್ನದ ದರೋಡೆ ಮಾಡಿದ್ದಾರೆ. ಮುಖಮಾಸ್ಕ್ ಧರಿಸಿದ ದರೋಡೆಕೋರರು ಅಂಗಡಿ ಮಾಲೀಕರನ್ನು ಬೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಸಿಕ್ಕಿವೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ನೆಲಮಂಗಲ: ಗನ್ ಹಿಡಿದು ಚಿನ್ನದ ಅಂಗಡಿಗೆ ಬಂದ ದರೋಡೆಕೋರರು ಮಾಲೀಕನಿಗೆ ಹೆದರಿ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಮಾಗಡಿರಸ್ತೆಯ ಮಾಚೋಹಳ್ಳಿ ಗೇಟ್ ಬಳಿ ಇರುವ ಭೈರವೇಶ್ವರ ಕಾಂಪ್ಲೆಕ್ಸ್ನಲ್ಲಿರುವ ರಾಮ್ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ನಡೆದಿದೆ. ಮುಸುಕು ಧರಿಸಿಕೊಂಡು, ಕೈಯಲ್ಲಿ ಬಂದೂಕು ಹಿಡಿದು ಬಂದ ಆರೋಪಿಗಳು ಅಂಗಡಿಯಲ್ಲಿದ್ದ ಮಾಲೀಕ ಮತ್ತು ಸಿಬ್ಬಂದಿಯನ್ನು ಹೆದರಿಸಿದ್ದಾರೆ. ನಂತರ ಕೈಗೆ ಸಿಕ್ಕ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ಚಿನ್ನಾಭರಣ ಖದೀಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಮಂಜುನಾಥ್ ಟಿವಿ9
Published on: Jul 26, 2025 04:01 PM