“ಬೆಂಗಳೂರಿಗರ ತಲೆಯಲ್ಲಿ ಬುದ್ದಿ ಇಲ್ಲ” ನಾಲಿಗೆ ಹರಿಬಿಟ್ಟ ಉತ್ತರ ಭಾರತದ ಯುವತಿ ನೇಹಾ
ಒಡಿಶಾದ ನೇಹಾ ಬಿಸ್ವಾಲ್ ಬೆಂಗಳೂರಿನ ಜನರನ್ನು ಅವಮಾನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನಲ್ಲಿ ವಾಹನ ಚಾಲನೆಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾಳೆ. ಇದರಿಂದ ಕನ್ನಡಿಗರಲ್ಲಿ ಆಕ್ರೋಶ ಉಂಟಾಗಿದೆ. ನೇಹಾ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗುತ್ತಿದೆ.

ಬೆಂಗಳೂರು, ಜುಲೈ 26: ಇತ್ತೀಚಿಗೆ ಅನ್ಯ ರಾಜ್ಯದ ಯುವಕ-ಯುವತಿಯರು ಬೆಂಗಳೂರು (Bengaluru) ಮತ್ತು ಬೆಂಗಳೂರಿನ ಜನರ ಹಾಗೂ ಕನ್ನಡದ (Kannada) ಬಗ್ಗೆ ಅವಹೇಳಕಾರಿಯಾಗಿ ಮಾತನಾಡುವುದು ಹೆಚ್ಚಾಗಿದೆ. ಈ ಹಿಂದೆ ಬ್ಯಾಂಕ್ವೊಂದರ ಮಹಿಳಾ ಸಿಬ್ಬಂದಿ ಕನ್ನಡ ಮಾತನಾಡುವುದಿಲ್ಲ ಅಂತ ದುರಹಂಕಾರವಾಗಿ ವರ್ತಿಸಿದ್ದಳು. ಓಲಾ ಬುಕ್ಕಿಂಗ್ ಸಂಬಂಧ ಆಟೋ ಚಾಲಕ ಮತ್ತು ಯುವತಿ ನಡುವೆ ವಾಗ್ವಾದ ನಡೆದಿತ್ತು. ಇಷ್ಟೇ ಅಲ್ಲದೇ ಉತ್ತರ ಭಾರತದ ಟೆಕ್ಕಿ ಮಹಿಳೆ ಆಟೋ ಚಾಲಕನಿಗೆ ಸಾರ್ವಜನಿಕ ಸ್ಥಳದಲ್ಲಿ ಚಪ್ಪಲಿಯಲ್ಲಿ ಹೊಡೆದಿದ್ದಳು. ಇದೀಗ ಮತ್ತೊಬ್ಬ ಉತ್ತರ ಭಾರತದ ಯುವತಿ ಬೆಂಗಳೂರಿನ ಜನರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾಳೆ. ಬೆಂಗಳೂರಿಗರ ತಲೆಯಲ್ಲಿ ಬುದ್ದಿ ಇಲ್ಲ ಎಂದು ಒಡಿಶಾ ಮೂಲದ ಯುವತಿ ನೇಹಾ ಬಿಸ್ವಾಲ್ ದುರಹಂಕಾರದ ಮಾತಗಳನ್ನು ಆಡಿದ್ದಾಳೆ.
ನೇಹಾ ಬಿಸ್ವಾಲ್ ಬೆಂಗಳೂರಿನಲ್ಲಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು, ಪಿಜಿಯಲ್ಲಿ ವಾಸವಾಗಿದ್ದಾಳೆ. ಈಕೆ ಬೆಂಗಳೂರು ಜನರ ಬಗ್ಗೆ ಕೆಟ್ಟದಾಗಿ ಮಾತನಾಡಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಯುವತಿ ನೇಹಾ ಬಿಸ್ವಾಲ್ ವಿಡಿಯೋದಲ್ಲಿ ಹೇಳಿರುವಂತೆ, “ಈಕೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನನ್ನ ಪಕ್ಕದಲ್ಲೇ ಕಾರುವೊಂದು ಪಾಸ್ ಆಗಿದೆ. ಆಗ, ರಸ್ತೆ ಮೇಲೆ ನಿಂತಿದ್ದ ನೀರು ನನ್ನ ಮೈಮೇಲೆ ಹಾರಿದೆ. ಮುಖಕ್ಕೆ ಸಿಡಿದಿದೆ” ಎಂದು ಹೇಳಿದ್ದಾಳೆ.
ಇದನ್ನೂ ನೋಡಿ: ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಮುಂದುವರೆದು ನೇಹಾ ಬಿಸ್ವಾಲ್ ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ದಿ ಇಲ್ಲ. ಜೋರು ಮಳೆ ಬರುತ್ತಿದ್ದರೂ, ವಾಹನವನ್ನು ಜೋರಾಗಿ ಓಡಿಸುತ್ತಾರೆ. ಬೆಂಗಳೂರಿಗರು ಅನಕ್ಷರಸ್ಥರು. ಚೂ*** ಥೂ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಕೋಪದಲ್ಲಿ ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟಿ ನೇಹಾ ಬಿಸ್ವಾಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರು ಕಾಮೆಂಟ್ ಮೂಲಕ ನೇಹಾ ಬಿಸ್ವಾಲ್ಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:29 pm, Sat, 26 July 25



