ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶವನ್ನು ಅದ್ದೂರಿಯಾಗಿ ಏರ್ಪಡಿಸಿದ ಶಾಸಕ ಶಿವಲಿಂಗೇಗೌಡ
ಮಂತ್ರಿಯಾಗುವ ಆಸೆಯನ್ನು ಬಹಿರಂಗವಾಗೇ ವ್ಯಕ್ತಪಡಿಸುತ್ತಿರುವ ಶಿವಲಿಂಗೇಗೌಡರು, ವೇದಿಕೆಯ ಮೇಲೆ ಸಿದ್ದರಾಮಯ್ಯ, ಶಿವಕಮಾರ್, ರಾಜಣ್ಣ, ಜಮೀರ್ ಅಹ್ಮದ್ ಮತ್ತು ಶ್ರೇಯಸ್ ಪಟೇಲ್ ಅವರನ್ನು ಶಾಲು, ಹೂವಿನ ಹಾರ ಮತ್ತು ನೆನಪಿನ ಕಾಣಿಕೆಯೊಂದಿಗೆ ಸತ್ಕರಿಸಿದರು. ಅವರು ಆಯೋಜಿಸಿದ ಸಮಾರಂಭ ಮತ್ತು ಸತ್ಕರಿಸಿದ ವಿಧಾನ ಸಿಎಂ ಮತ್ತು ಡಿಸಿಎಂರನ್ನು ನಿಸ್ಸಂದೇಹವಾಗಿ ಇಂಪ್ರೆಸ್ ಮಾಡಿರುತ್ತದೆ.
ಹಾಸನ, ಜುಲೈ 26: ಜನ ಬೆರಗಾಗುವಂಥ ಸಮಾವೇಶವನ್ನು ಅರಸೀಕೆರೆಯಲ್ಲಿ ಮಾಡ್ತೀನಿ ಅಂತ ಗೌಡ್ರು ಯಾವಾಗಲೂ ಹೇಳುತ್ತಿದ್ದರು. ಗೌಡರು ಅಂದರೆ ಅರಸೀಕೆಗೆ ಶಾಸಕ ಕೆಎಂ ಶಿವಲಿಂಗೇಗೌಡ. ತಮ್ಮ ಮಾತನ್ನು ಅವರು ಉಳಿಸಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶವನ್ನು (convention of guarantee scheme beneficiaries ) ಇಂದ ಅವರು ಅದ್ದೂರಿಯಾಗಿ ಆಯೋಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ, ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಅವರನ್ನು ವೇದಿಕೆ ಬರಮಾಡಿಕೊಂಡಿದ್ದು ಪುಷ್ಪವೃಷ್ಟಿ ಮಾಡುವ ಮೂಲಕ. ವೇದಿಕೆಗೆ ಪ್ರತ್ಯೇಕವಾಗಿ ಬಂದ ಶಿವಕುಮಾರ್ ಜೊತೆ ಲೋಕಲ್ ಹೀರೋ ಗೌಡ್ರು ಮತ್ತು ಹಾಸನ ಸಂಸದ ಶ್ರೇಯಸ್ ಪಟೇಲ್ ಇದ್ದರು. ಅವರ ಮೇಲೂ ಪುಷ್ಪವೃಷ್ಟಿಯಾಗುವುದನ್ನು ನೋಡಬಹುದು.
ಇದನ್ನೂ ಓದಿ: ಸರ್ಕಾರದ ಸಾಧನೆ ಮತ್ತು ಬಿಜೆಪಿಯ ಅಪಪ್ರಚಾರ ಜನಕ್ಕೆ ತಿಳಿಸಲು ಸಮಾವೇಶ ಮಾಡುತ್ತಿದ್ದೇವೆ: ಕೆಎಂ ಶಿವಲಿಂಗೇಗೌಡ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ