ಸಿಎಂ ಸಿದ್ದರಾಮಯ್ಯ ಕೇವಲ ಭಾಗೀದಾರ್ ನ್ಯಾಯ್ ಸಮಾವೇಶದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗಿದ್ದರೇ?
ನಿಮ್ಮ ಮಗ ನನ್ನ ತಂದೆ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರಿಗಿಂತ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಅಂತ ಹೇಳಿದ್ದಾರೆ ಎಂದು ಸಿದ್ದರಾಮಯ್ಯನವರಿಗೆ ಹೇಳಿದಾಗ ಅವರು, ನಾವು ಬಿಜೆಪಿಯವರಿಗಿಂತ ಹೆಚ್ಚು ಕೆಲಸ ಮಾಡಿದ್ದೇವೆ ಅಂತ ಹೇಳುತ್ತಾರೆ. ಪತ್ರಕರ್ತರು ಕೇಳಿದ ಪ್ರಶ್ನೆಗೆ ಇದು ಹೇಗೆ ಉತ್ತರವಾದೀತು? ಅವರು ಕೇಳಿದ್ದು ಒಡೆಯರ್ ಜೊತೆ ಹೋಲಿಕೆ ಮಾಡಿರುವ ಬಗ್ಗೆ, ಇವರು ಹೇಳ್ತಿರೋದು ಬಿಜೆಪಿಯ ಬಗ್ಗೆ!
ಹಾಸನ, ಜುಲೈ 26: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಿಂದ ವಾಪಸ್ಸು ಬಂದಿದ್ದಾರೆ ಮತ್ತು ಅವರಿಬ್ಬರೂ ಇಂದು ಜಿಲ್ಲೆಯ ಅರಸೀಕೆರೆ ಕ್ಷೇತ್ರದಲ್ಲಿ (Arasikere constituency) ₹ 750 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಿದರು. ದೆಹಲಿಗೆ ಹೋದ ವಿಷಯವೇನು ಸರ್ ಅಂತ ಪತ್ರಕರ್ತರು ಕೇಳಿದಾಗ, ಹಿಂದುಳಿದ ವರ್ಗಗಳ ಸಮಾವೇಶವನ್ನು ಏರ್ಪಡಿಸಲಾಗಿತ್ತು, ಅದಕ್ಕಾಗಿ ಹೋಗಿದ್ದೆ ಅಂತ ಹೇಳಿದರು. ಅದು ಸರಿ, ಶಿವಕುಮಾರ್ ಸಹ ಅದೇ ಕಾರ್ಯಕ್ರಮದ ಸಲುವಾಗಿ ಹೋಗಿದ್ದರೇ? ಆದರೆ, ದೃಶ್ಯಗಳಲ್ಲಿ ನೀವು ಗಮನಿಸುವ ಹಾಗೆ ಶಿವಕುಮಾರ್ ಅವರ ಮುಖದಲ್ಲಿ ಎಂದಿನ ಲವಲವಿಕೆ, ನಡಿಗೆಯಲ್ಲಿ ಉತ್ಸಾಹವಿಲ್ಲ, ಎಲ್ಲೋ ಕಳೆದು ಹೋದವರಂತಿದ್ದಾರೆ.
ಇದನ್ನೂ ಓದಿ: ಭಾಗೀದಾರ ನ್ಯಾಯ್ ಸಮಾವೇಶ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ನಿಂತಿದ್ದ ಖಾಸಗಿ ಶಾಲಾ ಬಸ್ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು

Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?

Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ

2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
