ಯತೀಂದ್ರನ ಹಾಗೆ ಮಾತಾಡೋರನ್ನ ನಮ್ಮ ಕಡೆ ಹುಚ್ಚು ಮುಂಡೇದು ಅಂತ ಕರೆಯುತ್ತಾರೆ: ಹೆಚ್ ವಿಶ್ವನಾಥ್
ಕೊಡುವ 5 ಕೇಜಿ ಅಕ್ಕಿಗೆ ಸಿದ್ದರಾಮಯ್ಯ ಹೆಚ್ಚು ಪ್ರಭಾವಶಾಲಿ ಹೇಗಾಗುತ್ತಾರೆ? ದೇವರಾಜ ಅರಸು ಅವರು 21 ಲಕ್ಷ ಹೆಕ್ಟೇರ್ ಜಮೀನನ್ನು ಬಡವರಿಗೆ ಹಂಚಿದರು, ಅದರ ಮುಂದೆ ಸಿದ್ದರಾಮಯ್ಯ ಕೊಡುವ ಅಕ್ಕಿ ಯಾವ ಮೂಲೆ? ಬರುಬರುತ್ತಾ ಸಿದ್ದರಾಮಯ್ಯ ಮನುಷ್ಯದ್ವೇಷಿಗಳ ಹಾಗೆ ಮಾತಾಡಲಾರಂಭಿಸಿದ್ದಾರೆ, ಇದು ಒಳ್ಳೆಯದಲ್ಲ ಎಂದು ಮಾಜಿ ಸಚಿವ ವಿಶ್ವನಾಥ್ ಹೇಳಿದರು.
ಮೈಸೂರು, ಜುಲೈ 26: ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ತಮ್ಮ ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆಂದು ಹೇಳಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಬಿಜೆಪಿಯ ಎಮ್ಮೆಲ್ಸಿ ಹೆಚ್ ವಿಶ್ವನಾಥ್, ಯತೀಂದ್ರರಂಥವರನ್ನು ತಮ್ಮ ಕಡೆ ಹುಚ್ಚು ಮುಂಡೇದು ಅಂತ ಕರೆಯುತ್ತಾರೆ, ಅವರಿಗಿನ್ನೂ ಚಿಕ್ಕ ವಯಸ್ಸು, ರಾಜಕೀಯದಲ್ಲಿ ಬೆಳೆಯಬೇಕಿದೆ, ಹೀಗೆ ಹುಚ್ಚುಚ್ಚಾಗಿ ಮಾತಾಡುವುದನ್ನು ನಿಲ್ಲಿಸಬೇಕು ಎಂದರು. ದುರಹಂಕಾರ ಇವರ ವಂಶವಾಹಿಯಾಗಿ ಹರಿಯುತ್ತಿದೆ, ಸಿದ್ದರಾಮಯ್ಯ ನಾನೇ ಶ್ರೇಷ್ಠ ಅನ್ಕೊಂಡು ತಿರುಗುತ್ತಾರೆ, ನಾನು ಮಹಾರಾಜರಿಗಿಂತ ದೊಡ್ಡವ, ದೇವರಾಜ ಅರಸು ಅವರಿಗಿಂತ ಹೆಚ್ಚು ಜನಪ್ರಿಯ, ಖ್ಯಾತಿವಂತ ಅಂತ ಅಂದುಕೊಳ್ಳೋದು ಸರಿಯಲ್ಲ ಎಂದು ವಿಶ್ವನಾಥ್ ಹೇಳಿದರು.
ಇದನ್ನೂ ಓದಿ: ಏನು ಸಾಧನೆ ಮಾಡಿದ್ದಾರೆ ಅಂತ ಸಿದ್ದರಾಮಯ್ಯ ಸಾಧನಾ ಸಮಾವೇಶ ಮಾಡುತ್ತಿದ್ದಾರೆ? ಹೆಚ್ ವಿಶ್ವನಾಥ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ