ಪತಿ ತೊರೆದಿದ್ದ ಅಸಹಾಯಕ ಮಹಿಳೆಗೆ ನಂಬಿಸಿ ಕೈಕೊಟ್ಟ ಟೆಕ್ಕಿ: 6 ವರ್ಷದ ಮಗನ ಕರೆದುಕೊಂಡು ಪರಾರಿ

| Updated By: ಸಾಧು ಶ್ರೀನಾಥ್​

Updated on: Mar 03, 2021 | 4:01 PM

ಬೀರಪ್ಪ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಗಂಗಮ್ಮ ಬರುತ್ತಿದ್ದ ಬಸ್ ಹತ್ತಿದ್ದನಂತೆ. ಸಲುಗೆಯಿಂದ ದೌರ್ಬಲ್ಯಗಳನ್ನ ತಿಳಿದುಕೊಂಡ ಟೆಕ್ಕಿ ಗಂಗಮ್ಮನಿಗೆ ಜೀವನ ಕೊಡುತ್ತೇನೆ ಎಂದು ನಂಬಿಸಿದ್ದನಂತೆ. ನೊಂದು ಬೆಂದಿದ್ದ ಮಹಿಳೆಗೆ ಆಶ್ರಯ ಆಗುತ್ತಾನೆ ಎಂದು ಪರಿಚಯ ಮಾಡಿಕೊಂಡ ಮಹಿಳೆ ಇಂದು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಪತಿ ತೊರೆದಿದ್ದ ಅಸಹಾಯಕ ಮಹಿಳೆಗೆ ನಂಬಿಸಿ ಕೈಕೊಟ್ಟ ಟೆಕ್ಕಿ: 6 ವರ್ಷದ ಮಗನ ಕರೆದುಕೊಂಡು ಪರಾರಿ
ಗಂಗಮ್ಮ, ಪರಾರಿಯಾದ ಟೆಕ್ಕಿ ಬೀರಪ್ಪ
Follow us on

ನೆಲಮಂಗಲ: ಅತ್ಯಂತ ಚಂಚಲದ 16ನೇ ವಯಸ್ಸಿನಲ್ಲೇ ಮಹಿಳೆಯೊಬ್ಬರು ಮದುವೆ ಆಗಿದ್ದರು. ಆಕೆಯ ಕೈಗೆ ಮಗು ಸೇರುತ್ತಿದ್ದಂತೆ ಕಟ್ಟಿಕೊಂಡ ಮೊದಲ ಗಂಡ ಮೋಸ ಮಾಡಿ ಹೊರಟು ಹೋಗಿದ್ದ. ಈ ವೇಳೆಗೆ ಮತ್ತೊಬ್ಬ, ಟೆಕ್ಕಿ ರೂಪದಲ್ಲಿ ಬಂದು ಜೀವನ ಕೊಡುತ್ತೇನೆ ಎಂದು ನಂಬಿಸಿದ್ದ. ಆದರೆ ಇದೀಗ ವರ್ಷಗಳು ಉರುಳುತ್ತಿದ್ದಂತೆ ಅವಳಿಗಿದ್ದ ಮಗನನ್ನು ಹೊತ್ತುಕೊಂಡು, ನಂಬಿಕೆಗೆ ಮೋಸ ಮಾಡಿ ದುರುಳ ಟೆಕ್ಕಿ ಪರಾರಿಯಾಗಿದ್ದಾನೆ!

ಚಿಕ್ಕ ವಯಸ್ಸಿನಲ್ಲೆ ಕಟ್ಟಿಕೊಂಡ ಗಂಡನಿಂದ ದೂರು ಉಳಿದ ಗಂಗಮ್ಮ (23) ಎಂಬಾಕೆ ಬದುಕು ಕಟ್ಟಿಕೊಳ್ಳಲು ಕಳೆದ ಮೂರು ವರ್ಷದ ಹಿಂದೆ ಬೆಳಗಾವಿಯಿಂದ ಕೆಎಸ್ಆರ್​ಟಿಸಿ ಬಸ್ ಹತ್ತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರಕ್ಕೆ ಬಂದಿದ್ದರು. ಬೀರಪ್ಪ ಎಂಬುವವನು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದು, ಈತನ ಸಲುಗೆಯ ಮಾತಿಗೆ ಗಂಗಮ್ಮ ಮರುಳಾಗಿದ್ದಳು. ಆ ನಂತರ ಅವಳ ಮನೆಗೆ ಬರಲು ಶುರು ಮಾಡಿದ್ದ. ಗಂಗಮ್ಮಳನ್ನು ನಂಬಿಸಿ ಆಕೆಯೊಂದಿಗಿನ ಸ್ನೇಹ, ಸಲುಗೆಯ ನಂತರ  ಸಂಸಾರ ನಡೆಸಲು ಶುರು ಮಾಡಿದ್ದ.

ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಗಂಗಮ್ಮ ಮನೆಗೆ ಬರುತ್ತಿದ್ದ ಟೆಕ್ಕಿ ಕೊರೊನಾ ಲಾಕ್​ಡೌನ್​ ವೇಳೆ ಉಂಟಾದ ವರ್ಕ್ ಫ್ರಂ ಹೋಂ ಪದ್ಧತಿ ಜಾರಿಯಾದ್ದರಿಂದ ತನ್ನ ಲಗ್ಗೇಜ್​ ಹೊತ್ತುಕೊಂಡು ಗಂಗಮ್ಮ ಮನೆಯಲ್ಲಿಯೇ ಉಳಿದುಕೊಂಡಿದ್ದ.

ಗಂಗಮ್ಮಳ ಮಗ ಮತ್ತು ಗಂಗಮ್ಮ

ಟೆಕ್ಕಿ ಪರಿಚಯ
ಗಂಗಮ್ಮ ಬೆಳಗಾವಿಯಿಂದ ಬರುತ್ತಿದ್ದ ಬಸ್ಸಿನಲ್ಲಿಯೇ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಟೆಕ್ಕಿ ಬೀರಪ್ಪ ಹತ್ತಿ ಕೊಂಡಿದ್ದನಂತೆ. ನಂತರ ಸಲುಗೆಯಿಂದ ದೌರ್ಬಲ್ಯಗಳನ್ನ ತಿಳಿದುಕೊಂಡ ಟೆಕ್ಕಿ, ಗಂಗಮ್ಮನಿಗೆ ಜೀವನ ಕೊಡುತ್ತೇನೆ ಎಂದು ನಂಬಿಸಿದ್ದನಂತೆ. ಒಂಟಿತನದಿಂದ ನೊಂದು ಬೆಂದಿದ್ದ ಮಹಿಳೆ ತನಗೆ ಆಶ್ರಯ ಆಗುತ್ತಾನೆ ಎಂದು ಪರಿಚಯ ಮಾಡಿಕೊಂಡಿದ್ದಕ್ಕೆ ಇಂದು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಮಗುವಿನೊಂದಿಗೆ ನಾಪತ್ತೆ
ಇವರಿಬ್ಬರ ಸಂಬಂಧದಿಂದ ಗಂಗಮ್ಮ ಎರಡು ಭಾರಿ ಗರ್ಭಿಣಿಯಾದರೂ ಅದನ್ನು ತೆಗೆಸಿ ಸಂಸಾರ ಮುಂದುವರೆಸಿದ್ದಾನೆ. ಈ ನಡುವೆ ಗಂಗಮ್ಮ 6 ವರ್ಷದ ಮಗುವಿಗೆ ಆಗಾಗ ಬೀರಪ್ಪ ಹೊಡೆಯುತ್ತಿದ್ದನಂತೆ. ಈ ವಿಷಯವಾಗಿ ಮನೆಯಲ್ಲಿ ಜಗಳ ಸಹ ಆಗಿದೆ.

ಆದರೆ ಮೂರು ತಿಂಗಳ ಹಿಂದೆ ಮಗುವಿನೊಂದಿಗೆ ಮನೆ ತೊರೆದು ಹೋದ ಬೀರಪ್ಪ ಈವರೆಗೂ ಪತ್ತೆಯಾಗಿಲ್ಲವಂತೆ. ಈ ಕುರಿತು ನೆಲಮಂಗಲ ನಗರ ಠಾಣೆಗೆ ದೂರು ನೀಡಲು ಹೋದರೆ ಅವರ ಊರು ಬೆಳಗಾವಿಯ ಬೈಲಹೊಂಗಲ. ಆದ್ದರಿಂದ ಅಲ್ಲೇ ಹೋಗಿ ದೂರು ನೀಡಿ ಎನ್ನುತ್ತಿದ್ದಾರಂತೆ. ಆದರೆ ಗಂಗಮ್ಮ ಬೈಲಹೊಂಗಲಕ್ಕೆ ಹೋಗಿ ದೂರು ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮನೆ-ಮನದಲ್ಲಿ ಜಾಗ ಕೊಟ್ಟವಳ ಬದುಕಿಗೆ ಕೊಳ್ಳಿ ಇಟ್ಟು ಟೆಕ್ಕಿ ಪರಾರಿಯಾಗಿರುವ ಆರೋಪ ಕೇಳಿ ಬಂದಿದ್ದು, ತನ್ನ ಮಗು ಹಾಗೂ ಗಂಡನನ್ನು ಹುಡುಕಿ ಕೊಡಿ ಎಂದು ಗಂಗಮ್ಮ ಅಂಗಲಾಚುತ್ತಿದ್ದಾಳೆ.

ಇದನ್ನು ಓದಿ

ಕಾರಿನಲ್ಲಿ ಇಡಿ ರಾತ್ರಿ ಇದ್ದ ಕಂದಮ್ಮಗಳು; ಕೊನೆಗೂ ಪೋಷಕರಿಗೆ ಸಿಕ್ತು ನೆಮ್ಮದಿ, ಏನಿದು ಮಕ್ಕಳ ನಾಪತ್ತೆ ಕಥೆ?

ಬೆಂಗಳೂರಿನಲ್ಲಿ ಟೆಕ್ಕಿ ಕಿರುಕುಳದಿಂದ ಬೇಸತ್ತು ಪತ್ನಿ ಆತ್ಮಹತ್ಯೆಗೆ ಶರಣು, ಪತಿ ಬಂಧನ