ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ: ಪೊಲೀಸ್ ರಕ್ಷಣೆಗೆ ಮೊರೆ ಹೋದ ನವ ದಂಪತಿ
ಫಿಟ್ನೆಸ್ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಬ್ಬರು ನೆಲಮಂಗಲದ ಒಂದು ಫಿಟ್ನೆಸ್ ಸೆಂಟರ್ಗೆ ವರ್ಕ್ಔಟ್ ಮಾಡುವುದಕ್ಕೆ ಹೋಗುತ್ತಾ ಇದ್ದರು. ವರ್ಕ್ಔಟ್ ಮಾಡುತ್ತಾ ಇಬ್ಬರ ನಡುವೆ ಪ್ರೇಮಾಂಕುರವಾಗಿ ಕಳೆದ ಒಂದು ವರ್ಷದಿಂದ ಪ್ರೀತಿಸಿ ಮೊನ್ನೆ ಶಿರಸಿಯ ಮಾರಿಕಾಂಬ ದೇವಾಲಯದಲ್ಲಿ ಮದುವೆಯಾಗಿದ್ದಾರೆ.
ನೆಲಮಂಗಲ: ಜಿಲ್ಲೆಯ ನೆಲಮಂಗಲ ನಗರದ ದಾದಾಪೀರ್ ಲೇಔಟ್ ನಿವಾಸಿಯಾದ 22 ವರ್ಷದ ನಮ್ರತಾ ಹಾಗೂ ಬೈರೆಗೌಡನಹಳ್ಳಿ ನಿವಾಸಿಯಾದ 24 ವರ್ಷದ ಅಭಿಷೇಕ್ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರು ಬೇರೆ ಜಾತಿಯಾದ ಕಾರಣ ಮದುವೆಗೆ ಪೋಷಕರು ವಿರೋಧಪಡಿಸುತ್ತಾರೆ ಎಂದು ಇಬ್ಬರೂ ಮದುವೆಯಾಗಿ ಬಂದಿದ್ದಾರೆ. ಈಗ ಪ್ರೀತಿಸಿ ಮದುವೆಯಾದ ಜೋಡಿಗೆ ಹೆತ್ತವರು ವಿರೋಧ ವ್ಯಕ್ತಪಡಿಸಿದ್ದಾರಾದರೂ, ಪೊಲೀಸ್ ಠಾಣೆಯಲ್ಲಿ ಪ್ರಕರಣ ಸದ್ಯಕ್ಕೆ ಸುಖಾಂತ್ಯ ಕಂಡಿದೆ.
ಪ್ರೇಮ ವೃತ್ತಾಂತದ ಆರಂಭದ ಬಿಂದುಗಳು..
ದೇಹ ದಂಡಿಸಿ ಫಿಟ್ನೆಸ್ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಬ್ಬರೂ ನೆಲಮಂಗಲದ ಒಂದು ಫಿಟ್ನೆಸ್ ಸೆಂಟರ್ಗೆ ವರ್ಕ್ಔಟ್ ಮಾಡುವುದಕ್ಕೆ ಹೋಗುತ್ತಾ ಇದ್ದರು. ವರ್ಕ್ಔಟ್ ಮಾಡುತ್ತಾ ಮಾಡುತ್ತಾ ಇಬ್ಬರ ನಡುವೆ ಪ್ರೇಮಾಂಕುರವಾಗಿ ಕಳೆದ ಒಂದು ವರ್ಷದಿಂದ ಪ್ರೀತಿಸಿ, ಮೊನ್ನೆ ಶಿರಸಿಯ ಮಾರಿಕಾಂಬ ದೇವಾಲಯದಲ್ಲಿ ಮದುವೆಯಾಗಿದ್ದಾರೆ. ನೂತನ ಬಾಳಿನ ಹೊಸ್ತಿಲ ತುಳಿದ ಜೋಡಿ ಹಕ್ಕಿಗಳಿಗೆ ಪೋಷಕರು ವಿರೋಧ ವ್ಯಕ್ತಪಡಿಸಿ ಜೀವ ಬೆದರಿಕೆ ಹಾಕುತ್ತಿರುವ ಹಿನ್ನೆಲೆ ನವ ದಂಪತಿಗಳು ರಕ್ಷಣೆಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಶಿರಸಿಯ ಮಾರಿಕಾಂಬ ದೇವಾಲಯದಲ್ಲಿ ಮದುವೆ ಇಬ್ಬರ ಜಾತಿ ಬೇರೆ ಬೇರೆಯಾದ ಕಾರಣ ಮದುವೆಗೆ ಮನೆಯವರು ಅಡ್ಡಿಪಡಿಸುತ್ತಾರೆ ಎನ್ನುವ ಉದ್ದೇಶದಿಂದ ಪ್ರೇಮಿಗಳು ಶಿರಸಿಯ ಮಾರಿಕಾಂಬ ದೇವಾಲಯದಲ್ಲಿ ಮದುವೆಯಾಗಿದ್ದಾರೆ. ಮದುವೆಯ ಬೆನ್ನಲ್ಲೆ ಯುವತಿಯ ಪೋಷಕರು ಹುಡುಗನ ಮನೆಯ ಬಳಿ ಬಂದು ಜೀವ ಬೆದರಿಕೆ ಹಾಕಿರುವ ವಿಷಯ ತಿಳಿದು ರಕ್ಷಣೆ ಕೋರಿ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚೆನ್ನಣ್ಣವರ್ ಕಚೇರಿಗೆ ಹೋಗಿ ನಂತರ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ಬಂದಿದ್ದಾರೆ.
ನಮ್ಮ ಪಾಡಿಗೆ ನಮ್ಮನ್ನ ಬಿಟ್ಟು ಬಿಡಿ ಹುಡುಗಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು, ಹುಡುಗ ಬಿಕಾಂ ಪದವಿ ಮುಗಿಸಿದ್ದಾರೆ. ನಮ್ಮ ಪಾಡಿಗೆ ನಮ್ಮನ್ನ ಬಿಟ್ಟು ಬಿಟ್ಟರೆ ನಾವು ದುಡಿದುಕೊಂಡು ಜೀವನ ಮಾಡುತ್ತೀವಿ ಎಂದು ಪೊಲೀಸ್ ಠಾಣೆ ಬಳಿ ಪರಿಪರಿಯಾಗಿ ಬೇಡಿಕೊಂಡರು. ದಂಪತಿ ಹಾಗೂ ಪೋಷಕರ ಹೇಳಿಕೆ ಪಡೆದ ಪೊಲೀಸರು ನವಜೋಡಿಗಳನ್ನ ಒಂದು ಮಾಡಿ ತೊಂದರೆ ಕೊಡದಂತೆ ಪೋಷಕರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.
ಇದನ್ನೂ ಓದಿ
ಧಾರವಾಡದಲ್ಲಿ ನೇಣು ಬಿಗಿದುಕೊಂಡು ನವವಿವಾಹಿತೆ ಆತ್ಮಹತ್ಯೆ
Daily Horoscope; ದಿನ ಭವಿಷ್ಯ | ವೃಶ್ಚಿಕ ರಾಶಿಯವರಿಗೆ ವಿವಾಹ ಮಾತುಕತೆಗಳು ತಪ್ಪಿ ಹೋಗಲಿವೆ
Published On - 6:07 pm, Wed, 3 March 21