ಸಚಿವರಿಗೆ ಹೊಸ ಕಾರು ಭಾಗ್ಯ; 9.9 ಕೋಟಿ ರೂ. ವೆಚ್ಚದಲ್ಲಿ 33 ಇನ್ನೋವಾ ಕಾರು ಖರೀದಿಸಲಿದೆ ಕರ್ನಾಟಕ ಸರ್ಕಾರ

ಇತ್ತೀಚೆಗೆ ಬಿಡುಗಡೆಯಾದ ಟೊಯೊಟಾ ಇನ್ನೋವಾ ಹೈಬ್ರಿಡ್ ಹೈಕ್ರಾಸ್​ ಮಾಡೆಲ್​ನ 33 ಕಾರುಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ. ಪ್ರತಿ ಸಚಿವರಿಗೆ ಒಂದರಂತೆ ಕಾರು ಖರೀದಿಸಲಾಗುತ್ತದೆ. ಈ ಕಾರುಗಳು ಆಗಸ್ಟ್ 29 ರಂದು ಬಿಡುಗಡೆಯಾದ ವಿಶ್ವದ ಮೊದಲ ಸಂಪೂರ್ಣ ಎಥೆನಾಲ್ ಚಾಲಿತ ಫ್ಲೆಕ್ಸ್ ಇಂಧನ ಎಂಜಿನ್ ಹೊಂದಿವೆ.

ಸಚಿವರಿಗೆ ಹೊಸ ಕಾರು ಭಾಗ್ಯ; 9.9 ಕೋಟಿ ರೂ. ವೆಚ್ಚದಲ್ಲಿ 33 ಇನ್ನೋವಾ ಕಾರು ಖರೀದಿಸಲಿದೆ ಕರ್ನಾಟಕ ಸರ್ಕಾರ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Sep 01, 2023 | 7:13 PM

ಬೆಂಗಳೂರು, ಸೆಪ್ಟೆಂಬರ್ 01:  ಹೊಸ ಕಾರುಗಳನ್ನು ಖರೀದಿಸಲು ಕರ್ನಾಟಕ ಸರ್ಕಾರ 9.9 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಸಂಪುಟದ ಎಲ್ಲಾ 33 ಸಚಿವರು ಶೀಘ್ರದಲ್ಲೇ ಅತ್ಯಾಧುನಿಕ ಕಾರುಗಳನ್ನು ಪಡೆಯಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟೊಯೊಟಾ ಇನ್ನೋವಾ (Innova cars) ಹೈಬ್ರಿಡ್ ಹೈಕ್ರಾಸ್​ ಮಾಡೆಲ್​ನ 33 ಕಾರುಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ. ಪ್ರತಿ ಸಚಿವರಿಗೆ ಒಂದರಂತೆ ಕಾರು ಖರೀದಿಸಲಾಗುತ್ತದೆ. ಸರ್ಕಾರ ಬಿಡುಗಡೆ ಮಾಡಿರುವ ಆದೇಶದ ಪ್ರಕಾರ ಪ್ರತಿ ಕಾರಿಗೆ ಸುಮಾರು 30 ಲಕ್ಷ ರೂಪಾಯಿ (ಜಿಎಸ್‌ಟಿ ಸೇರಿದಂತೆ ಎಕ್ಸ್ ಶೋರೂಂ ದರ) ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಸೆಕ್ಷನ್ 4 (ಜಿ) ಅಡಿಯಲ್ಲಿ ಸರ್ಕಾರವು ನೇರವಾಗಿ ಟೊಯೊಟಾ ಕಿರ್ಲೋಸ್ಕರ್ ಬೆಂಗಳೂರು ಘಟಕದಿಂದ ಕಾರುಗಳನ್ನು ಖರೀದಿಸುತ್ತಿದೆ. ಈ ಕಾರುಗಳು ಆಗಸ್ಟ್ 29 ರಂದು ಬಿಡುಗಡೆಯಾದ ವಿಶ್ವದ ಮೊದಲ ಸಂಪೂರ್ಣ ಎಥೆನಾಲ್ ಚಾಲಿತ ಫ್ಲೆಕ್ಸ್ ಇಂಧನ ಎಂಜಿನ್ ಹೊಂದಿವೆ.

ಇದನ್ನೂ ಓದಿ: ರಾತ್ರೋರಾತ್ರಿ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಟ್ಟ ರಾಜ್ಯ ಸರ್ಕಾರ: ರೈತರ ಆಕ್ರೋಶ

ಸಚಿವರಿಗೆ ಹೊಸ ಕಾರುಗಳನ್ನು ಖರೀದಿಸುವ ಸರ್ಕಾರದ ಕ್ರಮವನ್ನು ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಟೀಕಿಸಿದ್ದಾರೆ. ಕರ್ನಾಟಕ ಸರ್ಕಾರವು ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಹೆಚ್ಚುವರಿ ಖರ್ಚು ಮಾಡುವಾಗ ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು. ಸರ್ಕಾರ 100 ದಿನಗಳನ್ನು ಪೂರೈಸಿದೆ ಆದರೆ ಇನ್ನೂ ಜನರ ಆರೈಕೆಗಾಗಿ ಹಣದ ವ್ಯವಸ್ಥೆ ಮಾಡಲು ಹೆಣಗಾಡುತ್ತಿದೆ ಎಂದು ಅಶ್ವತ್ಥನಾರಾಯಣ ಟೀಕಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ