
ಚಿಕ್ಕಬಳ್ಳಾಪುರ: ನ್ಯೂ ಇಯರ್ ಸೆಲೆಬ್ರೇಷನ್‌ಗೆ ಸಖತ್ ಸ್ಟಾಟ್ ಅಂತ ನೀವು ಗಾಡಿ ಹತ್ಕೊಂಡು ನಂದಿ ಬೆಟ್ಟದ ಕಡೆ ಹೋದ್ರೆ, ನಿಮ್ಗೆ ನಿರಾಸೆಯಾಗಲಿದೆ. ಅಷ್ಟೇ ಅಲ್ಲ ಅಲ್ಲಿನ ಅಕ್ಕಪಕ್ಕದ ಹೋಟೆಲ್, ಪಬ್‌ಗಳಲ್ಲೂ ಪಾರ್ಟಿ ಮಾಡೋಕೆ ಚಾನ್ಸೇ ಇಲ್ಲ.
ಪ್ರವಾಸಿ ತಾಣಗಳಲ್ಲಿ, ಅದರ ಸುತ್ತಮುತ್ತ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿರೋ ಪೊಲೀಸರು, ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಬ್ರೇಕ್ ಹಾಕಿದ್ದಾರೆ.
ಬೆಂಗಳೂರಿನಲ್ಲಿ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಟಫ್ ರೂಲ್ಸ್ ಮಾಡಲಾಗಿದೆ. ಹೀಗಾಗಿ ರಾಜಧಾನಿಯ ಯುವಕ ಯುವತಿಯರು ನಂದಿ ಗಿರಿಧಾಮದ ಕಡೆ ಆಗಮಿಸಿ, ಗಿರಿಧಾಮದ ಸುತ್ತಮುತ್ತಲಿರುವ ಹೋಟೆಲ್, ಪಬ್, ಡಾಬಾ, ಹೋಂ ಸ್ಟೇ, ರೇಸಾರ್ಟಗಳಲ್ಲಿ ಭರ್ಜರಿ ಪಾರ್ಟಿ ಮಾಡುವ ಸಾಧ್ಯತೆಯಿದೆ.
ಹೀಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸರು ಸಭೆ ನಡೆಸಿದ್ದಾರೆ. ನಂದಿ ಗಿರಿಧಾಮದ ಬಳಿ ಖಾಸಗಿ ಹೋಟಲ್ವೊಂದರಲ್ಲಿ ಸಭೆ ನಡೆಸಿ ಹೋಟೆಲ್, ಪಬ್, ಡಾಬಾ, ಹೋಂ ಸ್ಟೇ, ರೇಸಾರ್ಟ್ ಮಾಲಿಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಂದಿ ಗಿರಿಧಾಮದ ಸುತ್ತಮುತ್ತ ಇರುವ ಹೋಟೆಲ್, ಪಬ್, ಡಾಬಾ, ಹೋಂ ಸ್ಟೇ, ರೇಸಾರ್ಟ್ಗಳು 5 ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರುತ್ತವೆ. ದೊಡ್ಡಬಳ್ಳಾಪುರ, ವಿಶ್ವನಾಥಪುರ, ವಿಜಯಪುರ, ದೇವನಹಳ್ಳಿ, ನಂದಿ ಹಿಲ್ಸ್ ಪೊಲೀಸ್ ಸ್ಟೇಷನ್ಗೆ ಸೇರುತ್ತವೆ. ಇದ್ರಿಂದ ಐದು ಠಾಣೆಗಳ ಪೊಲೀಸ್ ಅಧಿಕಾರಿಗಳು, ಹಿರಿಯ ಅಧಿಕಾರಿಗಳು ಸಭೆ ಸೇರಿ ಹೊಸ ವರ್ಷಾಚರಣೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡಿದ್ರು.
ಬೆಂಗಳೂರಿನ ಸುತ್ತಮುತ್ತಲ ಪ್ರವಾಸಿಗರು ಹೊಸ ವರ್ಷಾಚರಣೆಗೆ ಚಿಕ್ಕಬಳ್ಳಾಪುರಕ್ಕೆ ಲಗ್ಗೆ ಇಡೋದು ಕಾಮನ್ ಆಗಿತ್ತು. ಆದ್ರೆ ಈ ಸಲ ಕೊರೊನಾ ಅಟ್ಟಹಾಸ ಮೆರೆಯುತ್ತಿರುವುದರಿಂದ ಗಿರಿಧಾಮದಲ್ಲಿ ಪ್ರವಾಸಿಗರ ಆಟಾಟೋಪಗಳಿಗೆ ಬ್ರೇಕ್ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ.
ಈ ಬಾರಿ ಹೊಸವರ್ಷ ಆಚರಣೆಗೆ ನಂದಿಬೆಟ್ಟಕ್ಕೆ ಹೋಗೋ ಹಾಗಿಲ್ಲ..; ಪ್ರವೇಶ ಇರೋದಿಲ್ಲ !
Published On - 12:01 pm, Wed, 30 December 20