ನಕಲಿ ಭಾರತೀಯ ಕರೆನ್ಸಿ ಜಾಲ ನಡೆಸುತ್ತಿದ್ದ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿದ NIA ಕೋರ್ಟ್​

|

Updated on: Feb 21, 2021 | 9:59 PM

ನಕಲಿ ಭಾರತೀಯ ಕರೆನ್ಸಿ ಜಾಲ ನಡೆಸುತ್ತಿದ್ದ ಆರೋಪಿಗಳಿಗೆ NIA ಕೋರ್ಟ್​ ಜೈಲು ಶಿಕ್ಷೆ ವಿಧಿಸಿದೆ. ಆರೋಪಿಗಳಿಗೆ 15 ಸಾವಿರ ರೂಪಾಯಿ ದಂಡದ ಜೊತೆ ಕೋರ್ಟ್​ 6 ವರ್ಷ ಜೈಲು ಶಿಕ್ಷ ಪ್ರಕಟಿಸಿದೆ.

ನಕಲಿ ಭಾರತೀಯ ಕರೆನ್ಸಿ ಜಾಲ ನಡೆಸುತ್ತಿದ್ದ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿದ NIA ಕೋರ್ಟ್​
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ನಕಲಿ ಭಾರತೀಯ ಕರೆನ್ಸಿ ಜಾಲ ನಡೆಸುತ್ತಿದ್ದ ಆರೋಪಿಗಳಿಗೆ NIA ಕೋರ್ಟ್​ ಜೈಲು ಶಿಕ್ಷೆ ವಿಧಿಸಿದೆ. ಆರೋಪಿಗಳಿಗೆ 15 ಸಾವಿರ ರೂಪಾಯಿ ದಂಡದ ಜೊತೆ ಕೋರ್ಟ್​ 6 ವರ್ಷ ಜೈಲು ಶಿಕ್ಷ ಪ್ರಕಟಿಸಿದೆ. NIA ವಿಶೇಷ ನ್ಯಾಯಾಲಯದಿಂದ ಆದೇಶ ಪ್ರಕಟವಾಗಿದೆ. ಶಿಕ್ಷೆಗೊಳಗಾದವರನ್ನು ಗಂಗಾಧರ್​ ಖೋಲ್ಕರ್​ ಹಾಗೂ ಸಬೀರುದ್ದೀನ್​​ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ 2018ರಲ್ಲಿ ಮಾದನಾಯಕನಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ನಕಲಿ‌ ಭಾರತೀಯ ಕರೆನ್ಸಿ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸಿದ್ದ NIA ತಂಡ ಪಶ್ಚಿಮ ಬಂಗಾಳದ ಮಾಲ್ಡಾ ಮೂಲದ ಆರೋಪಿಗಳ ಸಹಿತ 7 ಜನರನ್ನ ಬಂಧಿಸಿತ್ತು. ಮೊಹಮ್ಮದ್ ಸಜ್ಜಾದ್ ಅಲಿ, ಎಂ.ಜಿ.ರಾಜು, ಗಂಗಾಧರ್ ಖೋಲ್ಕರ್, ವನಿತಾ, ಅಬ್ದುಲ್ ಖಾದರ್, ಸಬೀರುದ್ದೀನ್ ಹಾಗೂ ವಿಜಯ್ ಎಂಬುವವರನ್ನ NIA ತಂಡ ಬಂಧಿಸಿತ್ತು.

ಈ ವೇಳೆ, 2 ಸಾವಿರ ರೂ ಮುಖಬೆಲೆಯ 6 ಲಕ್ಷದ 84 ಸಾವಿರ ನಕಲಿ ಹಣ ಜಪ್ತಿ‌ ಮಾಡಿತ್ತು. ಸದ್ಯ, ಪ್ರಕರಣದಲ್ಲಿ ಸದ್ಯ ಗಂಗಾಧರ್ ಖೋಲ್ಕರ್ ಹಾಗೂ ಸಬೀರುದ್ದೀನ್ ಗೆ ಸಜೆಯಾಗಿದೆ. ಉಳಿದ ಆರೋಪಿಗಳ ವಿರುದ್ಧ NIAತನಿಖೆ ಮುಂದುವರಿಸಿದೆ.

ಇದನ್ನೂ ಓದಿ: ‘ಸ್ವಾಮೀಜಿಗಳಾಗಿ ನಾವು ಧರ್ಮಕ್ಕಾಗಿ ಹೋರಾಟ ಮಾಡಬೇಕು.. ಯಾವುದೇ ಒಂದು ಸಮುದಾಯದ ಮೀಸಲಾತಿಗಾಗಿ ಅಲ್ಲ’