‘ಸ್ವಾಮೀಜಿಗಳಾಗಿ ನಾವು ಧರ್ಮಕ್ಕಾಗಿ ಹೋರಾಟ ಮಾಡಬೇಕು.. ಯಾವುದೇ ಒಂದು ಸಮುದಾಯದ ಮೀಸಲಾತಿಗಾಗಿ ಅಲ್ಲ’
ಸ್ವಾಮೀಜಿಗಳಾಗಿ ನಾವು ಧರ್ಮಕ್ಕಾಗಿ ಹೋರಾಟ ಮಾಡಬೇಕು. ಯಾವುದೇ ಒಂದು ಸಮುದಾಯದ ಮೀಸಲಾತಿಗಾಗಿ ಅಲ್ಲ ಎಂದು ಮೀಸಲಾತಿಗಾಗಿ ವಿವಿಧ ಸಮುದಾಯಗಳ ಹೋರಾಟ ವಿಚಾರವಾಗಿ ಜಿಲ್ಲೆಯ ಕುಣಿಗಲ್ ತಾಲೂಕಿನ ಹಂಗರಳ್ಳಿಯ ವಿದ್ಯಾಚೌಡೇಶ್ವರಿ ಪೀಠದ ಬಾಲಮಂಜುನಾಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.
ತುಮಕೂರು: ಸ್ವಾಮೀಜಿಗಳಾಗಿ ನಾವು ಧರ್ಮಕ್ಕಾಗಿ ಹೋರಾಟ ಮಾಡಬೇಕು. ಯಾವುದೇ ಒಂದು ಸಮುದಾಯದ ಮೀಸಲಾತಿಗಾಗಿ ಅಲ್ಲ ಎಂದು ಮೀಸಲಾತಿಗಾಗಿ ವಿವಿಧ ಸಮುದಾಯಗಳ ಹೋರಾಟ ವಿಚಾರವಾಗಿ ಜಿಲ್ಲೆಯ ಕುಣಿಗಲ್ ತಾಲೂಕಿನ ಹಂಗರಳ್ಳಿಯ ವಿದ್ಯಾಚೌಡೇಶ್ವರಿ ಪೀಠದ ಬಾಲಮಂಜುನಾಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಸನ್ಯಾಸತ್ವ ಸ್ವೀಕರಿಸಿದ ನಂತರ ಧರ್ಮಕ್ಕಾಗಿ ಹೋರಾಡುತ್ತೇನೆ. ನಾನು ಮೀಸಲಾತಿಗಾಗಿ ಹೋರಾಟವನ್ನ ಮಾಡುವುದಿಲ್ಲ ಎಂದು ವಿದ್ಯಾಚೌಡೇಶ್ವರಿ ಪೀಠದ ಬಾಲಮಂಜುನಾಥ ಸ್ವಾಮೀಜಿ ಹೇಳಿದರು.
ನಾಡು ನುಡಿ ನಡೆ ಬಗ್ಗೆ ಚಿಂತನೆ ಮಾಡಬೇಕು. ಯಾವುದೇ ಒಂದು ಸಮುದಾಯದ ಮೀಸಲಾತಿಗಾಗಿ ಅಲ್ಲ. ನಾನು ಮೂಲತಃ ಒಕ್ಕಲಿಗ. ಸನ್ಯಾಸತ್ವ ಸ್ವೀಕರಿಸಿದ ನಂತರ ಧರ್ಮಕ್ಕೆ ಹೋರಾಡುತ್ತೇನೆ. ಮೀಸಲಾತಿಗಾಗಿ ಹೋರಾಡಲ್ಲ. ಧರ್ಮ ಎತ್ತಿಹಿಡಿಯಲು ನಾನು ಜೀವ ತ್ಯಜಿಸಲು ಸಿದ್ಧ. ಹಾಗಾಗಿ, ಮೀಸಲಾತಿಗಾಗಿ ಹೋರಾಟ ಮಾಡಲ್ಲ ಎಂದು ಸ್ವಾಮೀಜಿ ಹೇಳಿದರು.
ಆದರೆ, ಆಯಾ ಸಮುದಾಯದ ಸ್ವಾಮೀಜಿಗಳು ಹೋರಾಟ ಮಾಡುವುದು ತಪ್ಪು ಅಂತಾ ಹೇಳ್ತಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ. ನಾನು ಧರ್ಮಕ್ಕೆ ಹೋರಾಟ ಮಾಡ್ತಿನಿ. ಇದು ನನ್ನ ಅಭಿಪ್ರಾಯ ಎಂದು ವಿದ್ಯಾಚೌಡೇಶ್ವರಿ ಪೀಠದ ಬಾಲಮಂಜುನಾಥ ಸ್ವಾಮೀಜಿ ಹೇಳಿದರು.
‘ಆಗಿನ ಕಾಲದಲ್ಲಿ ಮೀಸಲಾತಿ ನೀಡಿದ್ದು ಸೂಕ್ತವಾಗಿತ್ತು’ ಈ ನಡುವೆ, ಮಠದ ವಿದ್ಯಾಚೌಡೇಶ್ವರಿ ದೇಗುಲದಲ್ಲಿ ಮಾತನಾಡಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗಿನ ಕಾಲದಲ್ಲಿ ಮೀಸಲಾತಿ ನೀಡಿದ್ದು ಸೂಕ್ತವಾಗಿತ್ತು. ಈಗ ಸರ್ಕಾರಕ್ಕೆ ಯಾವುದು ಸೂಕ್ತ ಅನಿಸುತ್ತೋ ಮಾಡುತ್ತದೆ. ಜನರ ಸಮಸ್ಯೆಗಳನ್ನ ಆಲಿಸುವುದಕ್ಕೇ ಸರ್ಕಾರ ಇರುವುದು. ಹಾಗಾಗಿ, ಈ ಕುರಿತು ಸರ್ಕಾರ ನಿರ್ಧಾರವನ್ನ ಕೈಗೊಳ್ಳಲಿದೆ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು.
ಇದನ್ನೂ ಓದಿ: ಮಾ.4ರೊಳಗೆ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ರೆ ಅಮರಣಾಂತ ಸತ್ಯಾಗ್ರಹ -ಜಯಮೃತ್ಯುಂಜಯಶ್ರೀ ವಾರ್ನಿಂಗ್
Published On - 7:31 pm, Sun, 21 February 21