ಮಾ.4ರೊಳಗೆ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ರೆ ಅಮರಣಾಂತ ಸತ್ಯಾಗ್ರಹ -ಜಯಮೃತ್ಯುಂಜಯಶ್ರೀ ವಾರ್ನಿಂಗ್​

ಮಾರ್ಚ್‌ 4ರವರೆಗೆ ನಿರಂತರ ಧರಣಿ ಸತ್ಯಾಗ್ರಹ ಮಾಡ್ತೇವೆ. ಒಂದು ವೇಳೆ, ಮಾ.4ರೊಳಗೆ ಸರ್ಕಾರ ಸ್ಪಂದಿಸದಿದ್ರೆ ಅಮರಣಾಂತ ಸತ್ಯಾಗ್ರಹ ನಡೆಸುತ್ತೇವೆ. ಮಾರ್ಚ್ 5ರಿಂದ ಅಮರಣಾಂತ ಸತ್ಯಾಗ್ರಹ ನಡೆಸುತ್ತೇವೆ ಎಂದು ಮೌರ್ಯ ಸರ್ಕಲ್‌ನಲ್ಲಿ ಜಯಮೃತ್ಯುಂಜಯಶ್ರೀ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

  • TV9 Web Team
  • Published On - 17:50 PM, 21 Feb 2021
ಮಾ.4ರೊಳಗೆ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ರೆ ಅಮರಣಾಂತ ಸತ್ಯಾಗ್ರಹ -ಜಯಮೃತ್ಯುಂಜಯಶ್ರೀ ವಾರ್ನಿಂಗ್​
ಜಯಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ಇಂದಿನ ಪ್ರತಿಭಟನೆ ಮೌರ್ಯ ಸರ್ಕಲ್ ಬಳಿ ಮುಕ್ತಾಯಗೊಳಿಸುತ್ತೇವೆ. ಆದರೆ, ನಾಳೆಯಿಂದ ಮೌರ್ಯ ಸರ್ಕಲ್​ನಲ್ಲೇ ನಮ್ಮ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಜಯಮೃತ್ಯುಂಜಯಶ್ರೀ ಹೇಳಿದ್ದಾರೆ. ಗಾಂಧಿ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಜಯಮೃತ್ಯುಂಜಯಶ್ರೀ ಹೇಳಿದ್ದಾರೆ. ಪ್ರತಿ ದಿನ ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಧರಣಿ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಫ್ರೀಡಂಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸಲ್ಲ. ಫ್ರೀಡಂಪಾರ್ಕ್‌ ಬದಲು ಮೌರ್ಯ ಸರ್ಕಲ್‌ನ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸುತ್ತೇವೆ. ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗಾಗಿ ಹೋರಾಟ ಮುಂದುವರಿಯುತ್ತದೆ ಎಂದು ಸ್ವಾಮೀಜಿ ಹೇಳಿದರು.

ಇಂದು ಸಂಜೆ 6 ಗಂಟೆಗೆ ಧರಣಿ ಸತ್ಯಾಗ್ರಹ ಮುಗಿಸುತ್ತೇವೆ. ಆದರೆ, ಮಾರ್ಚ್‌ 4ರವರೆಗೆ ನಿರಂತರ ಧರಣಿ ಸತ್ಯಾಗ್ರಹ ಮಾಡ್ತೇವೆ. ಒಂದು ವೇಳೆ, ಮಾ.4ರೊಳಗೆ ಸರ್ಕಾರ ಸ್ಪಂದಿಸದಿದ್ರೆ ಅಮರಣಾಂತ ಸತ್ಯಾಗ್ರಹ ನಡೆಸುತ್ತೇವೆ. ಮಾರ್ಚ್ 5ರಿಂದ ಅಮರಣಾಂತ ಸತ್ಯಾಗ್ರಹ ನಡೆಸುತ್ತೇವೆ ಎಂದು ಮೌರ್ಯ ಸರ್ಕಲ್‌ನಲ್ಲಿ ಜಯಮೃತ್ಯುಂಜಯಶ್ರೀ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

‘ಈವರೆಗೆ ಸರ್ಕಾರ ಸ್ಪಂದಿಸದಿದ್ದರಿಂದ ನಮಗೆ ನೋವಾಗಿದೆ’
ಈವರೆಗೆ ಸರ್ಕಾರ ಸ್ಪಂದಿಸದಿದ್ದರಿಂದ ನಮಗೆ ನೋವಾಗಿದೆ. ಉದ್ದೇಶಪೂರ್ವಕವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ರಾಜ್ಯಸರ್ಕಾರ ವಿರುದ್ಧ ಜಯಮೃತ್ಯುಂಜಯ ಸ್ವಾಮೀಜಿ ಗರಂ ಆದರು.

ನಿರಂತರ ಪಾದಯಾತ್ರೆ ನಡೆಸಿದ್ರೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. 144 ಸೆಕ್ಷನ್ ಜಾರಿ ಮಾಡಿ ಪ್ರತಿಭಟನೆಗೆ ಬಂದಿದ್ದ ವಾಹನಗಳಿಗೆ ತಡೆ ಮಾಡಿದ್ದಾರೆ. ಆದರೆ, ಹೋರಾಟ ಯಶಸ್ವಿ ದಿಕ್ಕಿನತ್ತ ಸಾಗಿದೆ ಎಂದು ಜಯಮೃತ್ಯುಂಜಯಶ್ರೀ ಹೇಳಿದರು.

ಇತ್ತ, ಇಂದಿನ ಬೃಹತ್ ಪಾದಯಾತ್ರೆ ಯಶಸ್ವಿಯಾಗಿದೆ. ನಾಳೆಯಿಂದ ಧರಣಿ ಸತ್ಯಾಗ್ರಹ ಮುಂದುವರಿಸೋಣ ಎಂದು ಫ್ರೀಡಂಪಾರ್ಕ್‌ನಲ್ಲಿ ವಿಜಯಾನಂದ ಕಾಶಪ್ಪನವರ್ ಹೇಳಿದರು.

‘ನಮ್ಮಲ್ಲೇ 2 ಗುಂಪು ಮಾಡಿ ಹೋರಾಟ ಒಡೆಯಲು ಯತ್ನ’
ಸ್ವಾಮೀಜಿಗಳ ನೇತೃತ್ವದಲ್ಲಿ ಐತಿಹಾಸಿಕ ಹೋರಾಟ ನಡೆದಿದೆ ಎಂದು ಫ್ರೀಡಂಪಾರ್ಕ್‌ನಲ್ಲಿ ಶಾಸಕ ಬಸನಗೌಡ ಯತ್ನಾಳ್ ಹೇಳಿದರು. ನಮ್ಮಲ್ಲೇ 2 ಗುಂಪು ಮಾಡಿ ಹೋರಾಟ ಒಡೆಯಲು ಯತ್ನ ನಡೆಯುತ್ತಿದೆ. ಆದ್ರೆ ನಮ್ಮ ಸಮುದಾಯ ಒಗ್ಗಟ್ಟು ಕಾಪಾಡಿಕೊಂಡಿದೆ. ಸದನದಲ್ಲಿ ಮೀಸಲಾತಿ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸ್ತೇವೆ. ಸಿಎಂ ಯಡಿಯೂರಪ್ಪಗೆ ಒತ್ತಾಯ ಮಾಡುತ್ತೇವೆ ಎಂದು ಯತ್ನಾಳ್‌ ಹೇಳಿದರು.

‘ಮೀಸಲಾತಿ ನೀಡಲು ಸಿಎಂ ಯಡಿಯೂರಪ್ಪಗೇ ಮನಸ್ಸಿಲ್ಲ’
ಮೀಸಲಾತಿ ನೀಡಲು ಸಿಎಂ ಯಡಿಯೂರಪ್ಪಗೇ ಮನಸ್ಸಿಲ್ಲ. ಹೋರಾಟಕ್ಕೆ ಹೋಗಬೇಡಿ ಎಂದು ಖುದ್ದು ಸಿಎಂ ಹೇಳಿದ್ದಾರೆ. ಇಬ್ಬರು ಸಚಿವರಿಗೆ ಖುದ್ದು ಸಿಎಂ ಬಿಎಸ್‌ವೈ ಹೇಳಿದ್ದಾರೆ. ಸಿಎಂ ಮತ್ತೆ ಕೇಂದ್ರದತ್ತ ಬೊಟ್ಟು ಮಾಡಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಇಬ್ಬರಿಗೆ ಹೇಳಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದರು.

ಸಿಎಂ ಯಡಿಯೂರಪ್ಪರಿಂದ ಹೋರಾಟ ದಾರಿ ತಪ್ಪಿಸುವ ಯತ್ನ ನಡೆಯುತ್ತಿದೆ. ಹಾಗಾಗಿ, ಪಕ್ಷಾತೀತವಾಗಿ ನಮ್ಮ ಹೋರಾಟ ಬೆಂಬಲಿಸುವಂತೆ ಮನವಿ ಮಾಡುತ್ತೇನೆ. ಪಂಚಮಸಾಲಿಗರಿಗೆ ಶಾಸಕ ಬಸನಗೌಡ ಯತ್ನಾಳ್ ಮನವಿ ಮಾಡಿದರು. ನಾಳೆಯಿಂದ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ. ಸಮುದಾಯದ ಸಹಕಾರದಿಂದ ಹೋರಾಟ ಯಶಸ್ವಿಯಾಗಿದೆ ಎಂದು ಹೇಳಿದರು.

ನಾಳೆಯಿಂದ ಮೌರ್ಯ ಸರ್ಕಲ್‌ನಲ್ಲಿ ಧರಣಿ ಮುಂದುವರಿಯುತ್ತದೆ. ಮೀಸಲಾತಿ ಸಿಗುವವರೆಗೂ ಹೋರಾಟ ಮುದುವರಿಯುತ್ತೆ ಎಂದು ಯತ್ನಾಳ್​ ಹೇಳಿದರು. ಈ ನಡುವೆ, ಬಿ.ವೈ.ವಿಜಯೇಂದ್ರ ಸೂಪರ್ ಸಿಎಂ ಎಂದು ಮತ್ತೆ ಶಾಸಕ ಬಸನಗೌಡ ಯತ್ನಾಳ್ ಹರಿಹಾಯ್ದರು.

ಇದನ್ನೂ ಓದಿ: ನೊಟೀಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗಲ್ಲ, ನಾವು ಮೀಸಲಾತಿ ಪಡೆದೇ ಹೋಗುತ್ತೇವೆ: ಬಸನಗೌಡ ಪಾಟೀಲ ಯತ್ನಾಳ್