Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೊಟೀಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗಲ್ಲ, ನಾವು ಮೀಸಲಾತಿ ಪಡೆದೇ ಹೋಗುತ್ತೇವೆ: ಬಸನಗೌಡ ಪಾಟೀಲ ಯತ್ನಾಳ್

ನನಗೆ ನೊಟೀಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗಲ್ಲ. ಇವರ ನಾಟಕ ಕಂಪನಿಯ ಬಗ್ಗೆ ನನಗೆ ಎಲ್ಲಾ ಗೊತ್ತಿದೆ. ನನಗೆ ನೋಟಿಸ್ ಕೊಟ್ಟರೆ ಅಂಜುವ ಮಗ ಅಲ್ಲ. ಆ ರೀತಿ ತಿಳಿದುಕೊಂಡಿದ್ದರೆ ಕುರ್ಚಿ ಖಾಲಿ ಮಾಡಬೇಕಾಗುತ್ತೆ.

ನೊಟೀಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗಲ್ಲ, ನಾವು ಮೀಸಲಾತಿ ಪಡೆದೇ ಹೋಗುತ್ತೇವೆ: ಬಸನಗೌಡ ಪಾಟೀಲ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್
Follow us
TV9 Web
| Updated By: ganapathi bhat

Updated on:Apr 06, 2022 | 7:49 PM

ಬೆಂಗಳೂರು: ಪಂಚಮಸಾಲಿ ಹೋರಾಟವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು. ಮಕರ ಸಂಕ್ರಮಣದ ದಿನದಂದು ಪಾದಯಾತ್ರೆ ಆರಂಭವಾಯಿತು. ಇಲ್ಲಿಯವರೆಗೆ ಬೃಹತ್ ಪಾದಯಾತ್ರೆ ನಡೆದಿದೆ. 708 ಕಿ.ಮೀ. ಹೋರಾಟ ಸಾಮಾನ್ಯವಾದದ್ದಲ್ಲ. ಇದೊಂದು ಐತಿಹಾಸಿಕ ಹೋರಾಟ ಎಂದು ಹೋರಾಟದಲ್ಲಿ ಭಾಗಿಯಾಗಿ ಬೆಂಬಲಿಸಿದವರಿಗೆ ಬಸನಗೌಡ ಪಾಟೀಲ್ ಯತ್ನಾಳ್ ಧನ್ಯವಾದ ತಿಳಿಸಿದರು.

ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಇಂದು (ಫೆ.21) ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಸಂಪನ್ನಗೊಂಡಿದೆ. ಸಮಾವೇಶದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದರು.

ನೊಟೀಸ್ ಕೊಟ್ಟರೆ ನನ್ನ ಬಾಯಿ ಬಂದ್ ಆಗಲ್ಲ. ಇವರ ನಾಟಕ ಕಂಪನಿಯ ಬಗ್ಗೆ ನನಗೆ ಎಲ್ಲಾ ಗೊತ್ತಿದೆ. ನೊಟೀಸ್ ಕೊಟ್ಟರೆ ಅಂಜುವ ಮಗ ಅಲ್ಲ. ಆ ರೀತಿ ತಿಳಿದುಕೊಂಡಿದ್ದರೆ ಕುರ್ಚಿ ಖಾಲಿ ಮಾಡಬೇಕಾಗುತ್ತೆ. ಹಲವರು ಈಗ 3B ಮೀಸಲಾತಿ ಕೊಟ್ಟಿದ್ದೇವೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಇದು ಎಲ್ಲಾ ಲಿಂಗಾಯತರಿಗೆ ಕೊಟ್ಟಿದ್ದಾರೆ. ಇದನ್ನು ಪದೇಪದೆ ಹೇಳಿಕೊಳ್ಳುವ ಅವಶ್ಯಕತೆ ನಮಗೆ ಇಲ್ಲ. 2A ಮೀಸಲಾತಿಗಾಗಿ ಪದೇಪದೆ ಮನವಿ ಮಾಡುತ್ತಿದ್ದೇವೆ ಎಂದು ಬಸನಗೌಡ ಪಾಟೀಲ್ ವಾಗ್ದಾಳಿ ನಡೆಸಿದರು.

ಮೀಸಲಾತಿಗಾಗಿ 25 ಸಂಸದರನ್ನು ಕರೆದುಕೊಂಡು ಹೋಗಲು ಹೇಳಿದ್ದಾರೆ. ಆದರೆ, ಇದಕ್ಕಾಗಿ ನಾನ್ಯಾಕೆ ದೆಹಲಿಗೆ ಹೋಗಲಿ. ಲಿಂಗಾಯತರಿಗೆ OBC ಸಿಗಲು ಬೇಕಾದರೆ ದೆಹಲಿಗೆ ಹೋಗುತ್ತೇನೆ. ಸಂಸದರನ್ನು ಕೂಡ ಕರೆದುಕೊಂಡು ಹೋಗುತ್ತೇನೆ. ಆದರೆ, 2A ಮೀಸಲಾತಿಗಾಗಿ ನಾನ್ಯಾಕೆ ದೆಹಲಿಗೆ ಹೋಗಲಿ ಎಂದು ಯತ್ನಾಳ್ ಪ್ರಶ್ನಿಸಿದರು.

ನಮಗೆ ಸುಳ್ಳು ಆಶ್ವಾಸನೆ ಬೇಡ, ಖಚಿತ ಭರವಸೆ ನೀಡಿ ಸಮುದಾಯದ ಯಾರೂ ಕೂಡ ಅಂಜುವ ಅವಶ್ಯಕತೆ ಇಲ್ಲ. ನಾವು ಮೀಸಲಾತಿಯನ್ನು ಪಡೆದುಕೊಂಡು ಹೋಗಲೇಬೇಕು. ನಾವ್ಯಾರೂ ಮಳೆಗಾಗಿ ಹೆದರುವ ಪ್ರಶ್ನೆಯೇ ಇಲ್ಲ. ನಾವೀಗ ವಿಧಾನಸೌಧದ 3ನೇ ಮಹಡಿಯಲ್ಲಿ ಕುಳಿತಿಲ್ಲ. ನಾವು ಹೊಲದಲ್ಲಿರುವ ರೈತ ಮಕ್ಕಳು ಎಂದು ಯತ್ನಾಳ್ ಗುಡುಗಿದರು.

ನನ್ನ ಭಾಷಣಕ್ಕೆ ಅಡ್ಡಿ ಆಗುವುದು ಬೇಡ, ಮಳೆ ನಿಲ್ಲಿಸಿ ಎಂದು ಹನುಮಂತ ಮತ್ತು ವರುಣನನ್ನು ಬೇಡಿಕೊಂಡಿದ್ದೆ. ಹಾಗಾಗಿ ಮಳೆ ನಿಂತು ಹೋಯ್ತು ಎಂದು ಸಮಾವೇಶದಲ್ಲಿ ಮಳೆ ಎದುರಾದ ಸಂದರ್ಭವನ್ನು ತಿಳಿಸಿದರು.

ಮೀಸಲಾತಿಗಾಗಿ ಸಚಿವ ಸಿ.ಸಿ.ಪಾಟೀಲ್ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಮೀಸಲಾತಿ ಕೊಡಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ನನಗೆ ಭರವಸೆ ಕೊಡಲು ಬಂದರು. ಆಗ, ಎಲ್ಲರಿಗೂ ಕೊಟ್ಟಂತೆ ನನಗೆ ಭರವಸೆ ಕೊಡಬೇಡಿ ಎಂದಿದ್ದೆ. ನಮಗೆ ಸುಳ್ಳು ಆಶ್ವಾಸನೆ ಬೇಡ, ಖಚಿತ ಭರವಸೆ ನೀಡಿ ಎಂದಿದ್ದೆ. ನಾವು ನಿಮ್ಮ ಮಕ್ಕಳು, ಮೊಮ್ಮಕ್ಕಳ ಸಲುವಾಗಿ ಇಲ್ಲ. ನಾವು ಸಮಾಜದ ಮಕ್ಕಳು, ಮೊಮ್ಮಕ್ಕಳ ಪರವಾಗಿದ್ದೇವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕಟುವಾಗಿ ಮಾತನಾಡಿದರು.

ನಾಟಕ ಮಾಡಬೇಡಿ ಸಿಎಂ ಬಿ.ಎಸ್.ಯಡಿಯೂರಪ್ಪ ಎಲ್ಲಾ ವೀರಶೈವ ಲಿಂಗಾಯತರು ಹೋರಾಟಕ್ಕೆ ಬಂದಿದ್ದಾರೆ. ನಾವು ಯಾರ ಬಗ್ಗೆಯೂ ಹಗುರವಾಗಿ ಮತಾಡುವುದು ಬೇಡ. ಹಾಲುಮತಸ್ಥರಿಗೆ ಎಸ್‌ಟಿ ಮೀಸಲಾತಿ ನೀಡಬೇಕು. ಅವರು ಎಸ್‌ಟಿಗೆ ಹೋಗಲಿ, ನಾವು 2Aಗೆ ಹೋಗೋಣ. ನನಗೆ ಯಾವುದೇ ಮೀಸಲಾತಿ ಬೇಕಾಗಿಲ್ಲ. ನಿಮ್ಮ ಸಲುವಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಯತ್ನಾಳ್ ತಿಳಿಸಿದರು.

ಮಾರ್ಚ್ 4ರವರೆಗೆ ನಾವು ಹೋರಾಟ ಮಾಡೋಣ. ಮಾರ್ಚ್ 4ರಂದು ವಿಧಾನಸಭೆಯಲ್ಲಿ ಮತ್ತೆ ಎದ್ದು ನಿಲ್ಲುತ್ತೇನೆ. ಆವತ್ತು ಸಿಎಂ ಯಡಿಯೂರಪ್ಪ ಉತ್ತರ ನೀಡಲೇಬೇಕು. ಅಂದೂ ಕೂಡ ನಾಟಕ ಮಾಡಿದ್ರೆ ಸಚಿವರು ರಾಜೀನಾಮೆ ನೀಡಬೇಕು. ಸಿಎಂ ಬಿ.ಎಸ್.ಯಡಿಯೂರಪ್ಪನವರೇ ನಾಟಕ ಮಾಡಬೇಡಿ ಎಂದು ಯತ್ನಾಳ್ ಹೇಳಿದರು.

ನಾನು ಕಿತ್ತೂರು ರಾಣಿ ಚೆನ್ನಮ್ಮನವರ ಸಂತಾನದವನು. ನಾನು ಇಷ್ಟೇ ಹೇಳುತ್ತಿದ್ದೇನೆ ನಮಗೆ ಮೀಸಲಾತಿ ನೀಡಬೇಕು. ಅಧಿವೇಶನ ಮುಗಿಯುವುದರೊಳಗೆ ಮೀಸಲಾತಿ ನೀಡಬೇಕು. ನಾವು ಯಾವುದೇ ಸಮುದಾಯದ ವಿರುದ್ಧವಾಗಿಲ್ಲ. ನೀವು ಯಾವುದೇ ಶಿಫಾರಸು ಮಾಡಬೇಕಾದ ಅಗತ್ಯವಿಲ್ಲ. ಎಲ್ಲ ನಿಮ್ಮ ಕೈಯಲ್ಲಿಯೇ ಇದೆ ಸಿಎಂ ಯಡಿಯೂರಪ್ಪನವರೇ. ಆದರೆ ನಿಮಗೆ ಮನಸ್ಸಿಲ್ಲ ಎಂದು ಯತ್ನಾಳ್ ಆರೋಪಿಸಿದ್ದಾರೆ. ನಾನು ಬಹಳ ಮಾತಾಡಿದರೆ ಸಂಜೆಯೊಳಗೆ ಉಚ್ಚಾಟನೆಯ ನೋಟಿಸ್ ಕೊಡುತ್ತಾರೆ ಎಂದು ಸಮಾವೇಶದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿ ಸಮಾವೇಶ: ಪೊಲೀಸ್ ಅನುಮತಿ ಇಲ್ಲದಿದ್ದರೂ ವಿಧಾನಸೌಧದತ್ತ ಪಾದಯಾತ್ರೆ

ಪಂಚಮಸಾಲಿ ಸಮಾವೇಶ: ಸರ್ಕಾರದ ಮೇಲೆ ವಿಶ್ವಾಸ ಇಡಿ ಎಂದ ಸಚಿವರು, ಸಭಿಕರ ವಿರೋಧ

Published On - 5:23 pm, Sun, 21 February 21