AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚಮಸಾಲಿ ಸಮಾವೇಶ: ಪೊಲೀಸ್ ಅನುಮತಿ ಇಲ್ಲದಿದ್ದರೂ ವಿಧಾನಸೌಧದತ್ತ ಪಾದಯಾತ್ರೆ

2A ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿಗರ ಪಾದಯಾತ್ರೆ ಹಿನ್ನೆಲೆಯಲ್ಲಿ, ಬೆಂಗಳೂರಿನ ಚಾಲುಕ್ಯ ಸರ್ಕಲ್​ನಲ್ಲಿ ಭಾರಿ ಪೊಲೀಸ್ ಭದ್ರತೆ ನಿಯೋಜನೆಯಾಗಿದೆ. ವಿಧಾನಸೌಧ ಕಡೆಗೆ ಪಾದಯಾತ್ರೆ ಬರುವ ಸಾಧ್ಯತೆ ಇರುವ ಕಾರಣ, ಕಬ್ಬನ್ ಪಾರ್ಕ್ ಠಾಣೆ ಇನ್ಸ್​ಪೆಕ್ಟರ್, ಐವರು ಪಿಎಸ್ಐ, 250ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಪಂಚಮಸಾಲಿ ಸಮಾವೇಶ: ಪೊಲೀಸ್ ಅನುಮತಿ ಇಲ್ಲದಿದ್ದರೂ ವಿಧಾನಸೌಧದತ್ತ ಪಾದಯಾತ್ರೆ
ಪಂಚಮಸಾಲಿ ಪಾದಯಾತ್ರೆ
TV9 Web
| Updated By: ganapathi bhat|

Updated on:Apr 06, 2022 | 7:49 PM

Share

ಬೆಂಗಳೂರು: ಪಂಚಮಸಾಲಿ ಮೀಸಲಾತಿ ಸಮಾವೇಶ ಸ್ಥಳದಿಂದ ವಿಧಾನಸೌಧದತ್ತ ಪಾದಯಾತ್ರೆ ತೆರಳುತ್ತಿದೆ. ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿಗರಿಂದ ಹೋರಾಟ ನಡೆಯುತ್ತಿದ್ದು, ವಿಧಾನಸೌಧದವರೆಗೂ ತೆರಳುವುದಾಗಿ ಪಾದಯಾತ್ರೆಯ ನಾಯಕತ್ವ ವಹಿಸಿರುವವರು ಹೇಳಿದ್ದಾರೆ. ಹಲವಾರು ಸ್ವಾಮೀಜಿಗಳು, ಮುಖಂಡರ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಸಾವಿರಾರು ಜನರು ಭಾಗಿಯಾಗಿದ್ದಾರೆ.

2A ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯ ಪಾದಯಾತ್ರೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ ಚಾಲುಕ್ಯ ಸರ್ಕಲ್​ನಲ್ಲಿ ಪೊಲೀಸ್ ಬಂದೋಬಸ್ತ್​ ಹೆಚ್ಚಿಸಲಾಗಿದೆ. ವಿಧಾನಸೌಧ ಕಡೆಗೆ ಪಾದಯಾತ್ರೆ ಬರುವ ಸಾಧ್ಯತೆ ಇರುವ ಕಾರಣ, ಕಬ್ಬನ್ ಪಾರ್ಕ್ ಠಾಣೆ ಇನ್ಸ್​ಪೆಕ್ಟರ್, ಐವರು ಪಿಎಸ್ಐ, 250ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ವಿಧಾನಸೌಧ ಮಾರ್ಗಕ್ಕೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ.

ಮೀಸಲಾತಿ ಹೋರಾಟವನ್ನು ಮಾರ್ಚ್‌ 4ರವರೆಗೆ ಮುಂದುವರಿಸುತ್ತೇವೆ. ಹೋರಾಟದಿಂದ ಹಿಂದೆ ಸರಿದರೆ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ. ಈ ಹಿಂದೆಯೇ ಸೂಕ್ತ ನಿರ್ಧಾರ ಕೈಗೊಂಡಿದ್ರೆ ನಾವು ಇಲ್ಲಿಯವರೆಗೆ ಬರುತ್ತಿರಲಿಲ್ಲ. ಈಗ ಸಮುದಾಯದ ಅಭಿಪ್ರಾಯದಂತೆ ಹೋರಾಟ ಮುಂದುವರಿಸುತ್ತೇವೆ ಎಂದು ಸಮಾವೇಶದಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಪಾದಯಾತ್ರೆಗೆ ಅನುಮತಿ ನೀಡದ ಪೊಲೀಸರು ಸಮಾವೇಶದ ನಂತರ ಪಂಚಮಸಾಲಿ ಸಮುದಾಯದ ಪಾದಯಾತ್ರೆಗೆ ಪೊಲೀಸರು ಅನುಮತಿ ನೀಡಿಲ್ಲ. ಫ್ರೀಡಂಪಾರ್ಕ್‌ ಬಳಿ ಧರಣಿಗೆ ಮಾತ್ರ ಅವಕಾಶ ನೀಡಿದ್ದಾರೆ. ಶಾಂತಿಯುತ ಧರಣಿಗೆ ಮಾತ್ರ ಪೊಲೀಸರಿಂದ ಅವಕಾಶ ಲಭ್ಯವಾಗಿದೆ. ವಾಹನಗಳಲ್ಲಿ ಬಂದು ಫ್ರೀಡಂಪಾರ್ಕ್‌ ಬಳಿ ಧರಣಿ ನಡೆಸಲು ಪೊಲೀಸರು ಅನುಮತಿ ನೀಡಿದ್ದಾರೆ. ಈ ಬಗ್ಗೆ, ಟಿವಿ9ಗೆ ಪೊಲೀಸ್ ಇಲಾಖೆ ಉನ್ನತ ಮೂಲಗಳ ಮಾಹಿತಿ ಲಭ್ಯವಾಗಿದೆ.

ಫ್ರೀಡಂಪಾರ್ಕ್‌ನಲ್ಲಿ ಧರಣಿ ಮುಂದುವರಿಸುತ್ತೇವೆ: ಯತ್ನಾಳ್ ಫ್ರೀಡಂಪಾರ್ಕ್‌ನಲ್ಲಿ ಧರಣಿ ಮುಂದುವರಿಸುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಮಗೆ ಭರವಸೆ ಬೇಡ, ಅಧಿಕೃತ ಆದೇಶ ಹೊರಡಿಸಲಿ. ಸಿಎಂ ಯಡಿಯೂರಪ್ಪ ಮೇಲೆ ನಮಗೆ ನಂಬಿಕೆ ಹೋಗಿದೆ. ವಿಧಾನಸಭೆ ಕಲಾಪ ಆರಂಭದವರೆಗೂ ಧರಣಿ ಮುಂದುವರಿಸುತ್ತೇವೆ. ವಿಧಾನಸಭೆ ಕಲಾಪದಲ್ಲಿ ಮೀಸಲಾತಿ ಬಗ್ಗೆ ಪ್ರಸ್ತಾಪಿಸುತ್ತೇವೆ. ಮಾ.4ರ ಒಳಗೆ ಸರ್ಕಾರ ಮೀಸಲಾತಿ ಬಗ್ಗೆ ತೀರ್ಮಾನಿಸಲಿ ಎಂದು ಸಮಾವೇಶ ಸ್ಥಳದಲ್ಲಿ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.

ಸಿಎಂ BSY ನೇತೃತ್ವದಲ್ಲಿ ಮಹತ್ವದ ಸಭೆ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗಾಗಿ ಹೋರಾಟ ವಿಚಾರ ಭುಗಿಲೆದ್ದಿರುವ ಕಾರಣ, ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಕಾನೂನು ಸಚಿವ ಬೊಮ್ಮಾಯಿ, ಸಚಿವರಾದ ಸಿ.ಸಿ.ಪಾಟೀಲ್, ಮುರುಗೇಶ್‌ ನಿರಾಣಿ ಜತೆ ಸಿಎಂ ಯಡಿಯೂರಪ್ಪ ಸಭೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅಗತ್ಯವಾದ್ರೆ ರಾಜಕೀಯ ಬಿಡ್ತೀನಿ, ಪಂಚಮಸಾಲಿ ಸಮುದಾಯ ಬಿಡಲ್ಲ: ವಿಜಯಾನಂದ ಕಾಶಪ್ಪನವರ್

ಇದನ್ನೂ ಓದಿ: ಪಂಚಮಸಾಲಿ ಸಮಾವೇಶ: ಸರ್ಕಾರದ ಮೇಲೆ ವಿಶ್ವಾಸ ಇಡಿ ಎಂದ ಸಚಿವರು, ಸಭಿಕರ ವಿರೋಧ

Published On - 4:29 pm, Sun, 21 February 21