ಸರ್ಕಾರದ ಮಾರ್ಗಸೂಚಿ: ಇಂದಿನಿಂದ ನೈಟ್​ ಕರ್ಫ್ಯೂ ಜಾರಿ: ಸಮಯದಲ್ಲೂ ಬದಲಾವಣೆ

| Updated By: ಆಯೇಷಾ ಬಾನು

Updated on: Dec 24, 2020 | 9:04 AM

ಕರ್ಫ್ಯೂ ಜಾರಿ ಸಮಯದಲ್ಲೂ ರಾಜ್ಯ ಸರ್ಕಾರ ಬದಲಾವಣೆ ಮಾಡಿದೆ. ಈ ಮೊದಲು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಹೇಳಲಾಗಿತ್ತು. ಆದರೆ, ಸರ್ಕಾರ ಈಗ ಸಮಯ ಬದಲಿಸಿದೆ.  ರಾತ್ರಿ‌ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಮಾತ್ರ  ನೈಟ್​ ಕರ್ಫ್ಯೂ ಜಾರಿಯಲ್ಲಿರಲಿದೆ. 

ಸರ್ಕಾರದ ಮಾರ್ಗಸೂಚಿ: ಇಂದಿನಿಂದ ನೈಟ್​ ಕರ್ಫ್ಯೂ ಜಾರಿ: ಸಮಯದಲ್ಲೂ ಬದಲಾವಣೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ವೈರಸ್​ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ ಮಾಡುವುದಾಗಿ ಹೇಳಿತ್ತು. ಆದರೆ, ಈಗ ಸರ್ಕಾರ ನಾಳೆಯಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸುವ ನಿರ್ಧಾರಕ್ಕೆ ಬಂದಿದೆ. ಸಂಜೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಈ ವಿಚಾರ ಹೊರ ಬಿದ್ದಿದೆ.

ಕರ್ಫ್ಯೂ ಜಾರಿ ಸಮಯದಲ್ಲೂ ರಾಜ್ಯ ಸರ್ಕಾರ ಬದಲಾವಣೆ ಮಾಡಿದೆ. ಈ ಮೊದಲು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಹೇಳಲಾಗಿತ್ತು. ಈಗ ಸಮಯ ಬದಲಾವಣೆ ಆಗಿದ್ದು,  ರಾತ್ರಿ‌ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಮಾತ್ರ  ನೈಟ್​ ಕರ್ಫ್ಯೂ ಜಾರಿಯಲ್ಲಿರಲಿದೆ.

ಡಿಸೆಂಬರ್​ 25ರಂದು ಕ್ರಿಸ್​ಮಸ್​ ಆಚರಣೆ ಮಾಡಲಾಗುತ್ತಿದೆ. ನೈಟ್​ ಕರ್ಫ್ಯೂನಿಂದ ಕ್ರಿಸ್​ಮಸ್​ ಆಚರಣೆಗೆ ತೊಂದರೆ ಆಗಲಿದೆ ಎನ್ನಲಾಗಿತ್ತು. ಆದರೆ, ಕ್ರಿಸ್​​ಮಸ್​ ವೇಳೆ ಧಾರ್ಮಿಕ ಕಾರ್ಯಕ್ರಮಕ್ಕೆ ಅಡಚಣೆ ಆಗುವುದಿಲ್ಲ ಎಂದು ಗೈಡ್​ಲೈನ್​ನಲ್ಲಿ ಹೇಳಲಾಗಿದೆ.

ಇಂದಿನಿಂದಲೇ ನೈಟ್​ ಕರ್ಫ್ಯೂ ಜಾರಿ ಆದರೆ ನಿಯಮಗಳು ಏನಿರಲಿದೆ ಎನ್ನುವ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲ ಮೂಡಿತ್ತು. ಅಲ್ಲದೆ, ಕರ್ಫ್ಯೂ ಜಾರಿಗೆ ಸರ್ಕಾರ ಅಗತ್ಯ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಬೇಕಿತ್ತು. ಹೀಗಾಗಿ, ನಾಳೆಯಿಂದ ನೈಟ್​ ಕರ್ಫ್ಯೂ ಜಾರಿ ಮಾಡಲು ತೀರ್ಮಾನ ಮಾಡಲಾಗಿದೆ.

ರಾತ್ರಿ ವೇಳೆ ಬಸ್​, ರೈಲು, ವಿಮಾನ ಸಂಚಾರಕ್ಕೆ ಅವಕಾಶ ಇದೆ. ಹೀಗಾಗಿ ಪ್ರಯಾಣಿಕರನ್ನು ಪಿಕಪ್, ಡ್ರಾಪ್​ ಮಾಡಲು  ಆಟೋ, ಟ್ಯಾಕ್ಸಿಗಳಿಗೆ ಅವಕಾಶ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸರಕು ಸಾಗಣೆಗೆ ಯಾವುದೇ ನಿರ್ಬಂಧವನ್ನು ಸರ್ಕಾರ ಹೇರಿಲ್ಲ.

ಇನ್ನು, 24 ಗಂಟೆ ಕೆಲಸ ನಿರ್ವಹಿಸಬೇಕಾದ ಕೈಗಾರಿಕೆಗಳಿಗೆ ನಿರ್ಬಂಧ ಇಲ್ಲ. ನೈಟ್​ ಶಿಫ್ಟ್​ನಲ್ಲಿ ಶೇ.50ರಷ್ಟು ಸಿಬ್ಬಂದಿ ಬಳಕೆಗೆ ಅವಕಾಶ ಇದೆ. ರಾತ್ರಿ ಕೆಲಸ ಮುಗಿಸಿ ಸಂಚಾರ ನಡೆಸುವ ಕಾರ್ಮಿಕರಿಗೆ ಕಂಪನಿ ಐಡಿ ಕಾರ್ಡ್ ಕಡ್ಡಾಯ ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಪಾರ್ಟಿಗಳಿಗೆ ನಿಷೇಧ:

2021 ಹೊಸವರ್ಷಕ್ಕೆ ಸಾರ್ವಜನಿಕವಾಗಿ ಪಾರ್ಟಿ ಮಾಡುವುದರ ಮೇಲೆ ಸರ್ಕಾರ ನಿರ್ಬಂಧ ವಿಧಿಸಿದೆ. ಕ್ಲಬ್-ಪಬ್-ರೆಸ್ಟೋರೆಂಟ್ ತೆರೆಯಬಹುದು.
ಆದರೆ, ಕ್ಲಬ್-ಪಬ್-ರೆಸ್ಟೋರೆಂಟ್‌ನಲ್ಲಿ ನ್ಯೂಇಯರ್ ಪಾರ್ಟಿಗೆ ನಿಷೇಧ ಇರಲಿದೆ. ದೈಹಿಕ ಅಂತರವಿಲ್ಲದೇ ಯಾರೂ ಒಂದೆಡೆ ಸೇರುವಂತಿಲ್ಲ.

 

KSRTC ಬಸ್​ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ: ಸಚಿವ ಕೆ.ಸುಧಾಕರ್​

Published On - 5:41 pm, Wed, 23 December 20