ಕುರುಬ ಸಮುದಾಯಕ್ಕೆ ST ಮೀಸಲಾತಿ ಆಗ್ರಹಿಸಿ ನಿರಂಜನಾನಂದಪುರಿ ಸ್ವಾಮೀಜಿ ಭಾಷಣ

ಕೇವಲ ಕುರುಬ ಸಮುದಾಯಕ್ಕೆ ಅನುದಾನ ನೀಡಿದರೆ ಸಾಲದು. ಕುರುಬ ಸಮಾಜಕ್ಕೆ ನೀಡುವ ಅನುದಾನ ಕೇವಲ ಉಪ್ಪಿನಕಾಯಿ. ಈಗ ಮೀಸಲಾತಿಗೆ ಸಹಕರಿಸಿ ನಮಗೆ ಊಟ ಕೊಡಬೇಕು ಎಂದು ರಾಜ್ಯದ ಮುಖ್ಯಮಂತ್ರಿಗೆ ನಿರಂಜನಾನಂದಪುರಿ ಶ್ರೀಗಳು ಒತ್ತಾಯಿಸಿದರು.

ಕುರುಬ ಸಮುದಾಯಕ್ಕೆ ST ಮೀಸಲಾತಿ ಆಗ್ರಹಿಸಿ ನಿರಂಜನಾನಂದಪುರಿ ಸ್ವಾಮೀಜಿ ಭಾಷಣ
ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ
Follow us
sandhya thejappa
| Updated By: ರಶ್ಮಿ ಕಲ್ಲಕಟ್ಟ

Updated on: Feb 07, 2021 | 5:57 PM

ಬೆಂಗಳೂರು: ರಾಜ್ಯದ ರಾಜ ಬಿಎಸ್​ವೈಗೆ ಕುರುಬ ಸಮಾಜದ ಮೇಲೆ ಪ್ರೀತಿಯಿದೆ. ಕೊಡುವ ಸ್ಥಾನದಲ್ಲಿ ನೀವಿದ್ದೀರಾ, ಬೇಡುವ ಸ್ಥಾನದಲ್ಲಿ ನಾವಿದ್ದೇವೆ. ನಮ್ಮ ಬೇಡಿಕೆಯನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಎಸ್​ಟಿ ಮೀಸಲಾತಿಗೆ ಆಗ್ರಹಿಸಿ ನಡೆದ ಕುರುಬರ ಬೃಹತ್ ಸಮಾವೇಶದಲ್ಲಿ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಕೇವಲ ಕುರುಬ ಸಮುದಾಯಕ್ಕೆ ಅನುದಾನ ನೀಡಿದರೆ ಸಾಲದು. ಕುರುಬ ಸಮಾಜಕ್ಕೆ ನೀಡುವ ಅನುದಾನ ಕೇವಲ ಉಪ್ಪಿನಕಾಯಿ. ಈಗ ಮೀಸಲಾತಿಗೆ ಸಹಕರಿಸಿ ನಮಗೆ ಊಟ ಕೊಡಬೇಕು ಎಂದು ರಾಜ್ಯದ ಮುಖ್ಯಮಂತ್ರಿಗೆ ಒತ್ತಾಯಿಸಿದ ನಿರಂಜನಾನಂದಪುರಿ ಶ್ರೀಗಳು ಕುರುಬ ಸಮುದಾಯಕ್ಕೆ ಎಸ್​ಟಿ ಮೀಸಲಾತಿ ಸಿಗಲೇಬೇಕು. ಸಿಎಂ ಶಿಫಾರಸು ಮಾಡಿದರೆ ಕೇಂದ್ರಕ್ಕೆ ಹೋಗುತ್ತೇವೆ. ಮೋದಿ ಮತ್ತು ಅಮಿತ್ ಶಾ ಅವರಿಗೆ ಮೀಸಲಾತಿ ನೀಡುವಂತೆ ಮನವಿ ಮಾಡುತ್ತೇವೆ ಎಂದರು.

ಸ್ವಾಮೀಜಿ ಭರವಸೆ ನಿರಂಜನಾನಂದಪುರಿ ಶ್ರೀಗಳು ಹಿಂದಿಯಲ್ಲಿ ಭಾಷಣ ಮಾಡುವ ಮೂಲಕ ಕುರುಬ ಸಮುದಾಯಕ್ಕೆ ಎಸ್​ಟಿ ಮೀಸಲಾತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದರು. ಮೋದಿ ಅವರೇ ಕುರುಬ ಸಮುದಾಯಕ್ಕೆ ಮೀಸಲಾತಿ ನೀಡಿ. ಮುಂದೆ ಎಂದಿಗೂ ನಿಮ್ಮ ಜೊತೆ ಕುರುಬ ಸಮಾಜ ಇರುತ್ತದೆ ಎಂದು ತಿಳಿಸಿದರು.

ನನ್ನ ಜೀವ ಇರುವವರೆಗೂ ಕುರುಬರ ಹಕ್ಕಿಗಾಗಿ ಹೋರಾಟ ಮಾಡುತ್ತೇನೆ. ಕುರುಬ ಸಮಾಜಕ್ಕೆ ಮೀಸಲಾತಿ ಕೊಡಿಸುವುದೇ ನಮ್ಮ ಗುರಿ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಜೊತೆಗೆ ಪಾದಯಾತ್ರೆ ಯಾವುದೇ ವ್ಯಕ್ತಿ, ಪಕ್ಷದ ಪರವಲ್ಲ. ಹಾಗೂ ಪಾದಯಾತ್ರೆ ಕುರುಬ ಸಮುದಾಯದ ಪಾದಯಾತ್ರೆ ಅಲ್ಲ. ಎಲ್ಲಾ ಸಮುದಾಯದ ಬೆಂಬಲದ ಪಾದಯಾತ್ರೆ ಎಂದರು.

ಬಹುಸಂಖ್ಯಾತರಂಥ ಆನೆ ಕೆಳಗೆ ಬಿದ್ದರೆ ಸಣ್ಣ ಸಮುದಾಯಗಳು ಅಪ್ಪಚ್ಚಿಯಾಗುತ್ತವೆ -ಪಂಚಮಸಾಲಿ ಸಮುದಾಯವನ್ನು 2Aಗೆ ಸೇರಿಸದಂತೆ ಶ್ರೀಗಳ ಆಗ್ರಹ