ಮತ್ತೆ ನಿಜಾಮುದ್ದೀನ್ ಕಂಟಕ! ರಾಜ್ಯವನ್ನೇ ಬೆಚ್ಚಿ ಬೀಳಿಸುತ್ತಿದೆ ಹಿರೇಬಾಗೇವಾಡಿ ಗ್ರಾಮ!

ಮತ್ತೆ ನಿಜಾಮುದ್ದೀನ್ ಕಂಟಕ! ರಾಜ್ಯವನ್ನೇ ಬೆಚ್ಚಿ ಬೀಳಿಸುತ್ತಿದೆ ಹಿರೇಬಾಗೇವಾಡಿ ಗ್ರಾಮ!

ಬೆಳಗಾವಿ: ಇನ್ನೇನು ಮೇ 3 ಬಂದಿದ್ದು, ಕೊರೊನಾ ಅಂತ್ಯ ಕಾಲ ಸಮೀಪಿಸುತ್ತಿದೆ  ಎಂದು ಸಮಾಧಾನ ಪಡುವಷ್ಟರಲ್ಲಿ ಜಿಲ್ಲೆಯ ಚಿಕ್ಕ ಹಳ್ಳಿಯಿಂದ ದೊಡ್ಡ ಬ್ರೇಕಿಂಗ್ ಸುದ್ದಿಯೊಂದು ತೇಲಿಬಂದಿದೆ. ಇದು ನಿಜಕ್ಕೂ ರಾಜ್ಯದ ಜನತೆಗೆ ಹಾರ್ಟ್​ ಬ್ರೇಕಿಂಗ್ ನ್ಯೂಸ್.

ನಿಜಾಮುದ್ದೀನ್ ನಂಜಿನಿಂದ ಎಲ್ಲವೂ ಆಯೋಮಯ? ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ 36 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯವನ್ನೇ ಬೆಚ್ಚಿ ಬೀಳಿಸುತ್ತಿದೆ ಈ ಗ್ರಾಮ. ಇದುವರೆಗೂ ಹಳ್ಳಿಯೊಂದರಲ್ಲಿ ಅತೀ ಹೆಚ್ಚು ಪ್ರಕರಣ ಕಂಡು ಬಂದಿದ್ದೆ ಈ ಗ್ರಾಮದಲ್ಲಿ. ಅದೂ ಇಂದು ಒಂದೇ ದಿನ 11 ಪ್ರಕರಣ ಗ್ರಾಮದಲ್ಲಿ ಪತ್ತೆಯಾಗಿವೆ.

ಇನ್ನೂ ಆತಂಕದ ಸಂಗತಿಯೆಂದ್ರೆ ಎರಡೇ ಕುಟುಂಬದಲ್ಲಿ ವ್ಯಾಪಿಸುತ್ತಿದೆ  ಈ ಮಹಾಮಾರಿ ಸೋಂಕು. ಪಿ. 128 ನ ದ್ವಿತೀಯ ಸಂಪರ್ಕಕ್ಕೆ ಬಂದವರಿಗೆ ವಕ್ಕರಿಸುತ್ತಿರುವ ಸೋಂಕು ಮತ್ತೊಂದೆಡೆ,  ಪಿ. 128 ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಿಂದ ಮರಳಿದ್ದ ಯುವಕ ಎಂಬುದು.

ಆತ‌ನಿಂದ ಹಿರೇಬಾಗೇವಾಡಿ ಗ್ರಾಮದ ಒಂದಿಡೀ ಕಾಲೋನಿಗೆ‌ ಹೆಮ್ಮಾರಿ ಕೊರೊನಾ ಸೋಂಕು ಹರಡಿದೆ. ಇನ್ನೂ ಆತಂಕ ವಿಷಯವೆಂದ್ರೆ  ಸೋಂಕಿತ ಪಿ. 128 ಗುಣಮುಖರಾಗಿ ಬಿಡುಗಡೆಯಾಗಿದ್ರೂ  ಸೋಂಕು ನಿಲ್ಲುತ್ತಿಲ್ಲ. ಅಂಗನವಾಡಿ ಶಿಕ್ಷಕಿ ಸೇರಿ 36 ಜ‌ನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.  ಈ ಬೆಳವಣಿಗೆಗಳ ನಡುವೆ, 750ಕ್ಕೂ ಅಧಿಕ ಜನರ ಥ್ರೋಟ್ ಸ್ವ್ಯಾಬ್ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.

Click on your DTH Provider to Add TV9 Kannada