ಕೊರೊನಾ ಕಾಲದಲ್ಲೂ ವರದಕ್ಷಿಣೆ ಪಿಡುಗು: ಸೊಸೆಯನ್ನ ಮನೆಯಿಂದ ಹೊರಹಾಕಿದ್ರು!

ಕೊರೊನಾ ಕಾಲದಲ್ಲೂ ವರದಕ್ಷಿಣೆ ಪಿಡುಗು: ಸೊಸೆಯನ್ನ ಮನೆಯಿಂದ ಹೊರಹಾಕಿದ್ರು!

ಹಾಸನ: ಕೊರೊನಾ ಸೊಂಕು ಹರಡುವ ಭೀತಿಯಿಂದ ಇಡೀ ದೇಶವನ್ನೇ ಲಾಕ್​ಡೌನ್ ಮಾಡಲಾಗಿದೆ. ಇದರಿಂದ ಮನೆಯಿಂದ ಹೊರಗೆ ಬರದೆ ಎಲ್ಲರು ಮನೆಯಲ್ಲೇ ಇರಬೇಕಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸೊಸೆಯನ್ನು ಮನೆಯಿಂದ ಅತ್ತೆ-ಮಾವ ಹೊರಹಾಕಿರುವ ಘಟನೆ ಬಸಟ್ಟಿಕೊಪ್ಪಲು ಬಡಾವಣೆಯಲ್ಲಿ ನಡೆದಿದೆ.

ವರದಕ್ಷಿಣೆಗಾಗಿ ನಿತ್ಯ ಕಿರುಕುಳ ನೀಡುತ್ತಿದ್ದಾರೆಂದು ಅತ್ತೆ ಸುಧಾ, ಮಾವ ರೇವಣ್ಣ ಹಾಗೂ ಅತ್ತಿಗೆ ವಿರುದ್ಧ ಸೊಸೆ ಬಿಂದು ಗಂಭೀರ ಆರೋಪ ಮಾಡಿದ್ದಾರೆ. ಹಾಲು ತರುವಂತೆ ಮನೆಯಿಂದ ಹೊರಗೆ ಕಳುಹಿಸಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆಂದು ಬಿಂದು ಆರೋಪಿಸಿದ್ದಾರೆ. ಹಾಗಾಗಿ ಮನೆ ಎದುರು ರಸ್ತೆಯಲ್ಲಿ ನಿಂತು ಸೊಸೆ ಬಿಂದು ಕಣ್ಣೀರು ಹಾಕಿದ್ದಾರೆ.

Click on your DTH Provider to Add TV9 Kannada