ಬೆಂಗಳೂರು: ಶಾಲಾ-ಕಾಲೇಜು ಪ್ರಾರಂಭದ ಬಗ್ಗೆ ಇಂದು ನಡೆದ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಶಾಲೆ ಆರಂಭದ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಸದ್ಯ ಶಾಲಾ-ಕಾಲೇಜು ಆರಂಭಕ್ಕೆ ಯಾವುದೇ ಸಮಸ್ಯೆ ಇಲ್ಲ. ಮುಂಜಾಗ್ರತಾ ಕ್ರಮಗಳೊಂದಿಗೆ ಆರಂಭಿಸಲು ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ಜನವರಿ1ರಿಂದಲೇ ಶಾಲಾ-ಕಾಲೇಜು ಪ್ರಾರಂಭ ಮಾಡೋಣ ಎಂದು ಸಂಪುಟ ಸಭೆಯಲ್ಲಿ ಸಿಎಂ BSY ಸಚಿವ ಸುರೇಶ್ ಕುಮಾರ್ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ್ದಾರೆ.
ಇನ್ನು ಸಭೆಯಲ್ಲಿ ಹಾಜರಿದ್ದ ಆರೋಗ್ಯ ಸಚಿವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಬ್ರಿಟನ್ ವೈರಸ್ ವಿಚಾರದಲ್ಲಿ ಸಮಸ್ಯೆ ಆದ್ರೆ ತಜ್ಞರ ಸಲಹೆ ಪಡೆಯೋಣ ಸದ್ಯಕ್ಕೆ ದಿನಾಂಕ ಬದಲಾಯಿಸೋದು ಬೇಡ ಎಂದು ಸಭೆಯಲ್ಲಿ ಸಂಪುಟದ ಸದಸ್ಯರು ಸಚಿವರ ಸಲಹೆ ಒಪ್ಪಿಕೊಂಡಿದ್ದಾರೆ.
ಶಿಕ್ಷಣ, ಆರೋಗ್ಯ ಇಲಾಖೆಗೆ ಸಿಎಂ ಖಡಕ್ ಸೂಚನೆ
ಜನವರಿ 1ರಿಂದ ಶಾಲಾ-ಕಾಲೇಜು ಪುನಾರಂಭಗೊಳ್ಳುತ್ತಿದೆ. ಹೀಗಾಗಿ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗೆ ಸಿಎಂ ಖಡಕ್ ಸೂಚನೆ ಕೊಟ್ಟಿದ್ದಾರೆ. ಕೊರೊನಾ ಮಾರ್ಗಸೂಚಿ ಸರಿಯಾಗಿ ಪಾಲನೆ ಆಗಬೇಕು. ನಿಯಮ ಪಾಲನೆಗೆ ಅಗತ್ಯ ಕ್ರಮವಹಿಸುವಂತೆ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಜತೆ ಸೇರಿ ಕೆಲಸ ಮಾಡಿ. ಶಾಲಾ-ಕಾಲೇಜು ಪ್ರಾರಂಭದಲ್ಲಿ ಸಮಸ್ಯೆಯಾಗಬಾರದು. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಈ ಬಗ್ಗೆ ನಿಗಾವಹಿಸಿ ಎಂದು ಸಚಿವ ಸಂಪುಟ ಸಭೆಯಲ್ಲಿ ಸಿಎಂ ಬಿಎಸ್‌ವೈ ಅಧಿಕಾರಿಗಳು, ಸಚಿವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
RTE ದುರ್ಬಳಕೆ: ಖಾಸಗಿ ಶಾಲೆಗಳಿಂದ ಸರ್ಕಾರಕ್ಕೆ ಮೋಸ.. YouTube ನಲ್ಲಿ ವಂಚನೆ ಬಹಿರಂಗ!
Published On - 12:36 pm, Mon, 28 December 20