
ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿ ವಿಚಾರದಲ್ಲಿ ಆತಂಕದ ವಿದ್ಯಮಾನ, ವಿಚಾರವೊಂದು ಬೆಳಕಿಗೆ ಬಂದಿದೆ. ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ ಅಸಲಿಗೆ ಕೊರೊನಾ ವೈರಸ್ಗೆ ರಾಮಬಾಣವಾಗೋ ಔಷಧಿಯೇ ಇಲ್ವಂತೆ..!?
ಹೌದು, ಕೊರೊನಾಗೆ ಕಡಿವಾಣ ಹಾಕಲು ಆಗಾಗ ಬದಲಾಯಿಸಿ ಬಳಕೆಯಾಗುತ್ತಿರುವ ಔಷಧಿಗಳಿಂದ ಯಾವುದೇ ಪ್ರಯೋಜನ ಇಲ್ಲವಾಗಿದೆ. ಆರಂಭದಲ್ಲಿ ಹೆಚ್ ಸಿಕ್ಯೂ ಟ್ಯಾಬ್ಲೆಟ್ ಕೊರೊನಾಗೆ ಮದ್ದು ಎನ್ನಲಾಗಿತ್ತು. ಆದ್ರೆ ಹೆಚ್ ಸಿಕ್ಯೂ ಕೊರೊನಾ ಕಟ್ಟಿಹಾಕಲ್ಲ ಅನ್ನೋ ವಾಸ್ತವ ಗೊತ್ತಾಯ್ತು.
ಬಳಿಕ ರೆಮ್ಡಿಸಿವಿಯರ್ ಕೊರೊನಾಗೆ ರಾಮಬಾಣ ಎನ್ನಲಾಯ್ತು. ಆದ್ರೆ ರೆಮ್ಡಿಸಿವಿಯರ್ ಕೂಡ ಕೊರೊನಾಗೆ ಪರಿಣಾಮಕಾರಿ ಮೆಡಿಸಿನ್ ಅಲ್ಲ ಅಂತಾ ತಕ್ಷನವೇ ಪ್ರೂವ್ ಆಗಿಬಿಟ್ಟಿದೆ. ಈ ಮಧ್ಯೆ, ಮಹಾಮಾರಿಗೆ ಪ್ಲಾಸ್ಮಾ ಥೆರಪಿ ದಿವ್ಯ ಔಷಧ ಎನ್ನಲಾಯ್ತು. ಉಹುಃ! ಅದೂ ಈಗ ಅಷ್ಟೊಂದು ಪರಿಣಾಮಕಾರಿ ಅಲ್ಲವಂತೆ! ICMR ನವರೇ ಪ್ಲಾಸ್ಮಾ ಕೊರೊನಾಗೆ ಪರಿಣಾಮಕಾರಿಯಲ್ಲ ಎಂದಿದ್ದಾರೆ
ಹಾಗಿದ್ರೆ ಮಹಾಮಾರಿ ಕೊರೊನಾದಿಂದ ಕಾಪಾಡೋಕೆ ಸೂಕ್ತ ಔಷಧಿಯೇ ಇಲ್ಲವಾ? ಈ ಔಷಧಿಗಳು ನಮ್ಮನ್ನ ಕಾಪಾಡುತ್ತವೆ ಅನ್ನೋ ನಂಬಿಕೆ ಏನಾಯ್ತು? ಹಾಗಾದ್ರೆ ಕೊರೊನಾದಿಂದ ನಮ್ಮನ್ನ ರಕ್ಷಿಸೋವರು ಯಾರು? ಯಾರೂ ಅಲ್ಲ.. ನಮ್ಮನ್ನು ನಾವೇ ಕಾಪಾಡಿಕೊಳ್ಳಬೇಕು ಅಷ್ಟೇ..! ಇದು ಕಟು ವಾಸ್ತವ. ಹೀಗಾಗಿ ಇನ್ಮುಂದೆ ಸಾರ್ವಜನಿಕರು ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು ಅಂತಿದ್ದಾರೆ ತಜ್ಞರು.
Published On - 10:23 am, Tue, 20 October 20