ಮಸ್ಕಿಯಲ್ಲಿ ಮಳೆಯೋ ಮಳೆ.. ತಹಶೀಲ್ದಾರ್ ಕಚೇರಿಯೇ ಜಲಾವೃತ!
ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಇಂದು ಭಾರಿ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಬಸವೇಶ್ವರ ನಗರದಲ್ಲಿನ ತಹಶೀಲ್ದಾರ್ ಕಚೇರಿ ಜಲಾವೃತಗೊಂಡಿದೆ. ನಗರದ ಪುಟ್ಟರಾಜ ಉದ್ಯಾನಕ್ಕೂ ನೀರು ನುಗ್ಗಿದೆ. ಅಲ್ಲದೆ ಮಳೆಯ ಅಬ್ಬರಕ್ಕೆ ವಾಲ್ಮೀಕಿ ನಗರ, ಸೋಮನಾಥ ನಗರ, ರಾಮಕೃಷ್ಣಕಾಲೋನಿ, ಗಾಂಧಿ ನಗರ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು ಕೆರೆಯಂತಾಗಿದೆ. ಮುಖ್ಯ ಬಜಾರ, ತೇರ ಬಜಾರ, ಕನಕವೃತ್ತ, ಅಂಚೆ ಕಚೇರಿ ಮುಂಭಾಗದ ರಸ್ತೆಯಲ್ಲಿ ಚರಂಡಿ ನೀರು ಹರಿದ ಪರಿಣಾಮ ರಸ್ತೆಯ ಮೇಲೆ ಕಸದ ರಾಶಿ ತೇಲಿ ಬಂದಿದೆ. […]

ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಇಂದು ಭಾರಿ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಬಸವೇಶ್ವರ ನಗರದಲ್ಲಿನ ತಹಶೀಲ್ದಾರ್ ಕಚೇರಿ ಜಲಾವೃತಗೊಂಡಿದೆ. ನಗರದ ಪುಟ್ಟರಾಜ ಉದ್ಯಾನಕ್ಕೂ ನೀರು ನುಗ್ಗಿದೆ.
ಅಲ್ಲದೆ ಮಳೆಯ ಅಬ್ಬರಕ್ಕೆ ವಾಲ್ಮೀಕಿ ನಗರ, ಸೋಮನಾಥ ನಗರ, ರಾಮಕೃಷ್ಣಕಾಲೋನಿ, ಗಾಂಧಿ ನಗರ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು ಕೆರೆಯಂತಾಗಿದೆ. ಮುಖ್ಯ ಬಜಾರ, ತೇರ ಬಜಾರ, ಕನಕವೃತ್ತ, ಅಂಚೆ ಕಚೇರಿ ಮುಂಭಾಗದ ರಸ್ತೆಯಲ್ಲಿ ಚರಂಡಿ ನೀರು ಹರಿದ ಪರಿಣಾಮ ರಸ್ತೆಯ ಮೇಲೆ ಕಸದ ರಾಶಿ ತೇಲಿ ಬಂದಿದೆ. ಪರಾಪೂರ ರಸ್ತೆಯಲ್ಲಿ ಹೊಲಗಳಲ್ಲಿ ನಿರ್ಮಿಸಿದ್ದ ಚೆಕ್ ಡ್ಯಾಂಗಳು ತುಂಬಿ ಹೋಗಿವೆ.


Published On - 10:40 am, Tue, 20 October 20




