AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಳುಗಿದೂರಲ್ಲಿ ಜನರಿಗೆ ಮೇಲ್ಛಾವಣಿಯೇ ಆಸರೆ..

ಯಾದಗಿರಿ: ಜಿಲ್ಲೆಯಲ್ಲಿ ಭೀಮಾ ನದಿಯ ಅಬ್ಬರ ಹೆಚ್ಚಾಗಿದೆ. ನದಿ ನೀರು ಹಳ್ಳಿಗಳಿಗೆ ನುಗ್ಗಿದೆ. ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಪ್ರವಾಹಕ್ಕೆ ಜಿಲ್ಲೆಯ ವಡಗೇರ ತಾಲೂಕಿನ ನಾಯ್ಕಲ್ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಮನೆಗಳು ಮುಳುಗಿದ ಕಾರಣ ಜನರು ಮನೆಗಳ ಮೇಲ್ಛಾವಣಿ ಮೇಲೆ ಆಶ್ರಯ ಪಡೆಯುತ್ತಿದ್ದಾರೆ. ಮೇಲ್ಛಾವಣಿ ಮೇಲೆ ತಾಡಪಲ್ ಹಾಕಿಕೊಂಡು ಸಂತ್ರಸ್ಥರು ದಿನಗಳನ್ನ ಕಳೆಯುತ್ತಿದ್ದಾರೆ. ಇವತ್ತು ಬೆಳಿಗ್ಗೆಯಿಂದಲೂ ಸಹ ಗ್ರಾಮಕ್ಕೆ ನದಿ ನೀರು ನುಗ್ಗುತ್ತಲೇ ಇದೆ. ನಾಯ್ಕಲ್ ಗ್ರಾಮದ 200 ಕ್ಕೂ ಅಧಿಕ ಮನೆಗಳು ಮುಳುಗಿವೆ. ನದಿಗೆ 4 ಲಕ್ಷ […]

ಮುಳುಗಿದೂರಲ್ಲಿ ಜನರಿಗೆ ಮೇಲ್ಛಾವಣಿಯೇ ಆಸರೆ..
ಆಯೇಷಾ ಬಾನು
|

Updated on: Oct 20, 2020 | 11:10 AM

Share

ಯಾದಗಿರಿ: ಜಿಲ್ಲೆಯಲ್ಲಿ ಭೀಮಾ ನದಿಯ ಅಬ್ಬರ ಹೆಚ್ಚಾಗಿದೆ. ನದಿ ನೀರು ಹಳ್ಳಿಗಳಿಗೆ ನುಗ್ಗಿದೆ. ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಪ್ರವಾಹಕ್ಕೆ ಜಿಲ್ಲೆಯ ವಡಗೇರ ತಾಲೂಕಿನ ನಾಯ್ಕಲ್ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಮನೆಗಳು ಮುಳುಗಿದ ಕಾರಣ ಜನರು ಮನೆಗಳ ಮೇಲ್ಛಾವಣಿ ಮೇಲೆ ಆಶ್ರಯ ಪಡೆಯುತ್ತಿದ್ದಾರೆ.

ಮೇಲ್ಛಾವಣಿ ಮೇಲೆ ತಾಡಪಲ್ ಹಾಕಿಕೊಂಡು ಸಂತ್ರಸ್ಥರು ದಿನಗಳನ್ನ ಕಳೆಯುತ್ತಿದ್ದಾರೆ. ಇವತ್ತು ಬೆಳಿಗ್ಗೆಯಿಂದಲೂ ಸಹ ಗ್ರಾಮಕ್ಕೆ ನದಿ ನೀರು ನುಗ್ಗುತ್ತಲೇ ಇದೆ. ನಾಯ್ಕಲ್ ಗ್ರಾಮದ 200 ಕ್ಕೂ ಅಧಿಕ ಮನೆಗಳು ಮುಳುಗಿವೆ. ನದಿಗೆ 4 ಲಕ್ಷ ಕ್ಯೂಸೆಕ್ ನಷ್ಟು ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ನದಿಯಿಂದ 2 ಕಿ.ಮೀ ದೂರದಲ್ಲಿರುವ ಗ್ರಾಮಗಳು, ಮನೆಯಲ್ಲಿರುವ ವಸ್ತುಗಳು ಸಂಪೂರ್ಣ ನೀರು ಪಾಲಾಗಿವೆ. ಮಕ್ಕಳು, ವೃದ್ಧರು ಮನೆ ಮೇಲ್ಚಾವಣಿ ಮೇಲೆ ಕೂತು ಆಸರೆ ಪಡೆದಿದ್ದಾರೆ.

ಕಲಬುರಗಿಯಲ್ಲೂ ಇದೇ ಪರಿಸ್ಥಿತಿ: ಇನ್ನು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕಡಬೂರುಗ್ರಾಮದಲ್ಲೂ ಇದೇ ರೀತಿಯ ವಾತಾವರಣವಿದೆ. ಇಲ್ಲೋ ಕೂಡ ಗ್ರಾಮದ ಜನ ಮನೆಗಳು ಮುಳುಗಿದ್ರಿಂದ ಮನೆ ಮಾಳಿಗೆ ಏರಿದ್ದಾರೆ. ವಸ್ತುಗಳು ಹಾಳಾಗಿವೆ, ತೊಡೋಕೆ ಬಟ್ಟೆ ಇಲ್ಲ. ಇಷ್ಟು ವರ್ಷ ದುಡಿದಿಟ್ಟಿದ್ದ ಯಾವ ವಸ್ತುವು ಇಲ್ಲದೆ ಎಲ್ಲವನ್ನೂ ಕಳೆದು ಕೊಂಡು ಅತಂತ್ರರಾಗಿದ್ದಾರೆ. ಪ್ರವಾಹದಿಂದಾಗಿ ನಮಗೆ ಸಾಯುವ ಸ್ಥಿತಿ ಬಂದಿದೆ. ಹೀಗಾಗಿ, ಗ್ರಾಮ ಶಿಫ್ಟ್ ಮಾಡುವಂತೆ ಸಂತ್ರಸ್ತರು ಆಗ್ರಹಿಸಿದ್ದಾರೆ.