ನೋ ನೆಟ್ವರ್ಕ್, ನೋ ವೋಟಿಂಗ್; ಮಲೆನಾಡಿನಲ್ಲಿ ಅಭಿಯಾನ ಆರಂಭ

TV9 Digital Desk

| Edited By: sandhya thejappa

Updated on:Jul 14, 2021 | 4:23 PM

ಸಾಗರ ತಾಲೂಕಿನ ಕುದರೂರು, ತುಮರಿ, ಶಂಕರ ಶಾನುಭೋಗ್, ಚನ್ನಗೊಂಡ, ಭಾನುಕುಳಿ, ಅರಳಗೋಡು, ತಲವಟ ಗ್ರಾಮ ಪಂಚಾಯತಿ ಕ್ಷೇತ್ರದ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮಸ್ಯೆ ಹೆಚ್ಚು ಕಾಡುತ್ತಿದೆ. ಫೋನ್ ಕರೆ ಮಾಡಬೇಕಾದರೆ ಗುಡ್ಡ, ಬೆಟ್ಟ ಹತ್ತಿ ಹೋಗಬೇಕು. ಅಲ್ಲಿ ಒಂದು ಪಾಯಿಂಟ್ ನೆಟ್ವರ್ಕ್ ಸಿಕ್ಕರೆ ಅದೃಷ್ಟ.

ನೋ ನೆಟ್ವರ್ಕ್, ನೋ ವೋಟಿಂಗ್; ಮಲೆನಾಡಿನಲ್ಲಿ ಅಭಿಯಾನ ಆರಂಭ
ಆನ್​ಲೈನ್​ ಪಾಠ ಕೇಳಲು ವಿದ್ಯಾರ್ಥಿಗಳು ಚಿಕ್ಕ ಮನೆ ರೀತಿ ಮಾಡಿಕೊಂಡಿದ್ದಾರೆ
Follow us

ಶಿವಮೊಗ್ಗ: ಶರಾವತಿ ಹಿನ್ನೀರು ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಕಾಡುತ್ತಿರುವ ಹಿನ್ನೆಲೆ ಆಕ್ರೋಶಗೊಂಡಿರುವ ಸ್ಥಳೀಯರು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ನೋ ನೆಟ್ವರ್ಕ್, ನೋ ವೋಟಿಂಗ್ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದ್ದು, ಇದು ಚುನಾವಣೆ ಸಿದ್ಧತೆ, ಟಿಕೆಟ್ ಪೈಪೋಟಿಗೆ ಬಿದ್ದಿರುವ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ನಿದ್ದೆಗೆಡಿಸುವಂತೆ ಕಾಣುತ್ತಿದೆ.

ಸಾಗರ ತಾಲೂಕಿನ ಕುದರೂರು, ತುಮರಿ, ಶಂಕರ ಶಾನುಭೋಗ್, ಚನ್ನಗೊಂಡ, ಭಾನುಕುಳಿ, ಅರಳಗೋಡು, ತಲವಟ ಗ್ರಾಮ ಪಂಚಾಯತಿ ಕ್ಷೇತ್ರದ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮಸ್ಯೆ ಹೆಚ್ಚು ಕಾಡುತ್ತಿದೆ. ಫೋನ್ ಕರೆ ಮಾಡಬೇಕಾದರೆ ಗುಡ್ಡ, ಬೆಟ್ಟ ಹತ್ತಿ ಹೋಗಬೇಕು. ಅಲ್ಲಿ ಒಂದು ಪಾಯಿಂಟ್ ನೆಟ್ವರ್ಕ್ ಸಿಕ್ಕರೆ ಅದೃಷ್ಟ. ಈಗ ಮಳೆಗಾಲ ಇರುವುದರಿಂದ ಗುಡ್ಡ, ಬೆಟ್ಟದ ಮೇಲೆ ತೆರಳುವುದು ಅಸಾಧ್ಯ. ಇಲ್ಲಿ ನೆಟ್ವರ್ಕ್ ಸಮಸ್ಯೆ ಬಗ್ಗೆ ಗಮನ ಹರಿಸುವವರೆಗೂ ವೋಟು ನೀಡಲ್ಲ ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ.

ಕೊರೊನಾ ವೇಳೆಯಲ್ಲಿ ವಿದ್ಯಾರ್ಥಿಗಳು ಆನ್​ಲೈನ್​ ಮೂಲಕ ತರಗತಿ ಕೇಳಬೇಕು. ಆದರೆ ಮಕ್ಕಳು ನೆಟ್ವರ್ಕ್ ಸಿಗದೆ ಪರದಾಡುತ್ತಿದ್ದಾರೆ. ನೆಟ್ವರ್ಕ್ ಸಮಸ್ಯೆಗೆ ಪರಿಹಾರ ನೀಡುತ್ತೇವೆಂದು ಹೇಳಿ ಮೂರು ವರ್ಷ ಕಳೆದಿದೆ. ಆದರೆ ಈ ಸಮಸ್ಯೆಗೆ ಇನ್ನು ಪರಿಹಾರ ಸಿಕ್ಕಿಲ್ಲ. ಎಲ್ಲಿಯವರೆಗೆ ಈ ಸಮಸ್ಯೆ ಬಗೆ ಹರಿಸುವುದಿಲ್ಲವೋ ಅಲ್ಲಿಯವರೆಗೆ ವೋಟ್ ಹಾಕಲ್ಲ ಅಂತ ಕುದರೂರು ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಏಳು ಗ್ರಾಮದ ಜನರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ

ಮೊಬೈಲ್ ನೆಟ್ವರ್ಕ್ ಸಮಸ್ಯೆ ಪರಿಹಾರಕ್ಕೆ ಕ್ರಮ; ಸಚಿವ ಸುರೇಶ್ ಕುಮಾರ್

ವಿದ್ಯಾರ್ಥಿಗಳಿಗೆ ಆನ್​ಲೈನ್ ಕ್ಲಾಸ್​ಗಳಿಗೆ ಕೂರಲು ಮೊಬೈಲ್ ನೆಟ್​ವರ್ಕ್, ಅಂತರ್ಜಾಲ ಸಮಸ್ಯೆ ಪರಿಹರಿಸಿ: ಸಚಿವ ಸುರೇಶ್ ಕುಮಾರ್ ಮನವಿ

(No Network No Voting Campaign has started in Malnad Shivamogga)

ತಾಜಾ ಸುದ್ದಿ

Related Stories

Click on your DTH Provider to Add TV9 Kannada