ಮಂಡ್ಯಕ್ಕೆ ಸದ್ಯಕ್ಕಿಲ್ಲ ಆಕ್ಸಿಜನ್ ಕೊರತೆ; ನಿಗಾವಹಿಸಿದ ಜಿಲ್ಲಾಡಳಿತ
ಕೊರೊನಾ ಎಲ್ಲೆಡೆ ತನ್ನ ಕದಂಬಬಾಹು ವಿಸ್ತರಿಸಲಾರಂಭಿಸಿದ್ದು, ಆಸ್ಪತ್ರೆಗಳಲ್ಲಿ ಕೊರೊನಾ ಪೀಡಿತರು ಆಕ್ಸಿಜನ್ಗಾಗಿ ಹಾಹಾಕಾರ ಪಡುತ್ತಿದ್ದಾರೆ. ಅದರಂತೆ ಮಂಡ್ಯದಲ್ಲೂ ಸಹ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗಲಾರಂಭಿಸಿದೆ. ಹೀಗಿರುವಾಗಲೇ ಜಿಲ್ಲಾಡಳಿತ ರೋಗಿಗಳಿಗೆ ಅಗತ್ಯವಾಗಿರುವ ಆಕ್ಸಿಜನ್ ಪೂರೈಸಲಾರಂಭಿಸಿದೆ.
ಮಂಡ್ಯ: ಎಲ್ಲೆಡೆ ಕೊರೊನಾ ಎರಡನೇ ಅಲೆ ಕೈ ಮೀರುತ್ತಿದ್ದು, ಮಂಡ್ಯ ಜಿಲ್ಲೆಯಲ್ಲೂ ಕೊರೊನಾ ಮಿತಿ ಮೀರಿದೆ. ಇಂತಹ ಸಂದರ್ಭದಲ್ಲಿ ಎಲ್ಲಾ ಕಡೆಗಳಲ್ಲಿ ರೋಗಿಗಳಿಗೆ ಪೂರೈಕೆಯಾಗಬೇಕಿರುವ ಆಮ್ಲಜನಕದ್ದೇ ಮಾತಾಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ಆಕ್ಸಿಜನ್ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇಂತಹ ಮಾತಿಗೆ ವ್ಯತಿರಿಕ್ತವಾಗಿ ಮಂಡ್ಯ ಜಿಲ್ಲೆಯಲ್ಲಿ ಸದ್ಯಕ್ಕೆ ಆಮ್ಲಜನಕದ ಸಮಸ್ಯೆ ತಲೆದೋರಿಲ್ಲ. ಮಂಡ್ಯ ಮೆಡಿಕಲ್ ಕಾಲೇಜು ಮತ್ತು ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ 13 ಕಿಲೋಲೀಟರ್ ಸಾಮಾರ್ಥ್ಯದ ಪ್ಲಾಂಟ್ಗಳಿದ್ದು, ಆಕ್ಸಿಜನ್ ಕೊರತೆಯಾಗದಂತೆ ಜಿಲ್ಲಾಡಳಿತ ನಿಗಾವಹಿಸಿದೆ.
ಕೊರೊನಾ ಎಲ್ಲೆಡೆ ತನ್ನ ಕದಂಬಬಾಹು ವಿಸ್ತರಿಸಲಾರಂಭಿಸಿದ್ದು, ಆಸ್ಪತ್ರೆಗಳಲ್ಲಿ ಕೊರೊನಾ ಪೀಡಿತರು ಆಕ್ಸಿಜನ್ಗಾಗಿ ಹಾಹಾಕಾರ ಪಡುತ್ತಿದ್ದಾರೆ. ಅದರಂತೆ ಮಂಡ್ಯದಲ್ಲೂ ಸಹ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗಲಾರಂಭಿಸಿದೆ. ಹೀಗಿರುವಾಗಲೇ ಜಿಲ್ಲಾಡಳಿತ ರೋಗಿಗಳಿಗೆ ಅಗತ್ಯವಾಗಿರುವ ಆಕ್ಸಿಜನ್ ಪೂರೈಸಲಾರಂಭಿಸಿದ್ದು, ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಒಂದರಲ್ಲೇ 400 ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಮಂಡ್ಯ ಮೆಡಿಕಲ್ ಕಾಲೇಜು ಒಂದರಲ್ಲೇ ಪ್ರತಿನಿತ್ಯ 2 ರಿಂದ 3 ಕಿಲೋಲೀಟರ್ ಆಕ್ಸಿಜನ್ ಬಳಕೆಯಾಗುತ್ತಿದೆ. ಸದ್ಯ ಇಲ್ಲಿ ಆಕ್ಸಿಜನ್ಗೆ ಯಾವುದೇ ಕೊರತೆ ಕಂಡುಬಂದಿಲ್ಲ. ಮಂಡ್ಯದಲ್ಲಿ ಈಗಾಗಲೇ 285 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮೆಡಿಕಲ್ ಕಾಲೇಜು ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊವಿಡ್ ಆಸ್ಪತ್ರೆಯನ್ನಾಗಿ ಬದಲಾಯಿಸಿಕೊಂಡು ಹೊರ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಬಗ್ಗೆ ಜಿಲ್ಲಾಡಳಿತ ಮಾತುಕತೆ ನಡೆಸುತ್ತಿದೆ. ಹೊರ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದರೆ ಮೆಡಿಕಲ್ ಕಾಲೇಜಿನಲ್ಲಿ ಉಳಿದಿರುವ ಎಲ್ಲಾ ಬೆಡ್ಗಳನ್ನು ಕೊವಿಡ್ ರೋಗಿಗಳಿಗೆ ನೀಡಬಹುದಾಗಿದೆ ಎಂದು ಮೆಡಿಕಲ್ ಕಾಲೇಜು ನಿರ್ದೇಶಕ ಡಾ.ಹರೀಶ್ ಹೇಳಿದರು.
1,500 ಲೀಟರ್ ಸಾಮಾರ್ಥ್ಯದ 24 ಆಕ್ಸಿಜನ್ ಸಿಲಿಂಡರ್ ಜಿಲ್ಲಾಡಳಿಯ ಜಿಲ್ಲೆಯ ಆರು ತಾಲೂಕು ಆಸ್ಪತ್ರೆಗಳಲ್ಲೂ ಕೊವಿಡ್ ರೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನಿಗಾವಹಿಸಲಾಗಿದೆ. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಬೆಡ್ಗಳನ್ನ ಸಿದ್ದಪಡಿಸಿಕೊಂಡಿದ್ದು, ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ತಾಲೂಕು ಆಸ್ಪತ್ರೆಗಳಿಗೂ 1,500 ಲೀಟರ್ ಸಾಮಾರ್ಥ್ಯದ 24 ಆಕ್ಸಿಜನ್ ಸಿಲಿಂಡರ್ಗಳಿದ್ದು, ಅವುಗಳು ಖಾಲಿಯಾದಂತೆ ಭರ್ತಿ ಮಾಡಿ ದಾಸ್ತಾನು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ಮಾತನಾಡಿರುವ ಮಂಡ್ಯ ಜಿಲ್ಲಾಧಿಕಾರಿ ಡಾ.ಅಶ್ವಥಿ, ಜಿಲ್ಲೆಯಲ್ಲಿ ಸದ್ಯಕ್ಕೆ ಆಕ್ಸಿಜನ್ ಸಮಸ್ಯೆ ಇಲ್ಲ. ಆದರೆ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಿಜನ್ ಬೇಕಾಗಬಹುದು ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆಕ್ಸಿಜನ್ ಪ್ಲಾಂಟ್ನ ಸಾಮಾರ್ಥ್ಯ ಹೆಚ್ಚಿಸಲು ಅನುಮತಿ ದೊರೆತಿದೆ. ಯಾವುದೇ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಎದುರಾದರೆ ಅಲ್ಲಿಂದ ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
(No shortage of oxygen in Mandya and district administration is preparing for lack of oxygen)