Loading video

ನನ್ನ ಮತ್ತು ಶಿವಕುಮಾರ್ ನಡುವೆ ಪ್ಯಾಚ್​ಅಪ್​ನಂಥ ಸ್ಥಿತಿ ನಿರ್ಮಾಣವಾಗಲು ಏನೂ ನಡೆದಿಲ್ಲ: ಸತೀಶ್ ಜಾರಕಿಹೊಳಿ

|

Updated on: Nov 11, 2023 | 3:36 PM

ರಾಜ್ಯ ನಾಯಕರ ಮುಂದೆ ಸದ್ಯಕ್ಕೆ ಲೋಕ ಸಭಾ ಚುನಾವಣೆ ಬಿಟ್ಟರೆ ಬೇರೆ ಯಾವ ವಿಚಾರಗಳಿಲ್ಲ, ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದ ಅಂಶಗಳ ಬಗ್ಗೆ ಹೈ ಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸತೀಶ್ ಹೇಳಿದರು. ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಲು ಪ್ರಯತ್ನಿಸುತ್ತಿರುವುದು ನಿಜ, ಅವರು ಮಹಿಳೆಯಾಗಿರುವುದರಿಂದ ಜವಾಬ್ದಾರಿ ನೀಡೋದು ಒಳ್ಳೆಯದು ಅಂತ ಸತೀಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ತನ್ನ ಮತ್ತು ಡಿಕೆ ಶಿವಕುಮಾರ್ (DK Shivakumar) ನಡುವೆ ಪ್ಯಾಚ್ ಅಪ್ ನಂಥ ಸ್ಥಿತಿ ಉಂಟಾಗಲು ಅಂಥದ್ದೇನೂ ನಡೆದಿಲ್ಲ ಎಂದು ಹೇಳಿದರು. ಸತೀಶ್ ಜಾರಕಿಹೊಳಿ ಒಂದು ದೊಡ್ಡ ಸಮುದಾಯದ ಪ್ರಮುಖ ನಾಯಕನಾಗಿರುವುದರಿಂದ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿಸಿ (KPCC president) ತಾನು ಮುಖ್ಯಮಂತ್ರಿಯಾಗಬೇಕೆನ್ನುವ ಉದ್ದೇಶದಿಂದ ಶಿವಕುಮಾರ್ ಮತ್ತು ಡಿಕೆ ಸುರೇಶ್ ಲೋಕೋಪಯೋಗಿ ಸಚಿವನ ಮನೆಗೆ ಭೇಟಿ ನೀಡುತ್ತಿದ್ದಾರೆಯೇ ಅಂತ ಕೇಳಿದ ಪ್ರಶ್ನೆಗೆ ಸತೀಶ್, ಹಾಗೇನೂ ಇಲ್ಲ, ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲು ಶಿವಕುಮಾರ್ ತಮ್ಮ ಮನೆಗೆ ಬಹಳಷ್ಟು ಸಲ ಬಂದಿದ್ದಾರೆ, ಡಿಕೆ ಸುರೇಶ್ ಸಹ ಇದೇ ವಿಚಾರಕ್ಕೆ ಒಂದೆರಡು ಸಲ ಬಂದಿದ್ದಾರೆ ಎಂದು ಹೇಳಿದರು. ಮುಂದುವರಿದು ಮಾತಾಡಿದ ಅವರು ರಾಜ್ಯ ನಾಯಕರ ಮುಂದೆ ಸದ್ಯಕ್ಕೆ ಲೋಕ ಸಭಾ ಚುನಾವಣೆ ಬಿಟ್ಟರೆ ಬೇರೆ ಯಾವ ವಿಚಾರಗಳಿಲ್ಲ, ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದ ಅಂಶಗಳ ಬಗ್ಗೆ ಹೈ ಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು. ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ (Anjali Nimbalkar) ಕೆಪಿಸಿಸಿ ಕಾರ್ಯಾಧ್ಯಕ್ಷರಾಗಲು ಪ್ರಯತ್ನಿಸುತ್ತಿರುವುದು ನಿಜ, ಅವರು ಮಹಿಳೆಯಾಗಿರುವುದರಿಂದ ಜವಾಬ್ದಾರಿ ನೀಡೋದು ಒಳ್ಳೆಯದು ಅಂತ ಸತೀಶ್ ಜಾರಕಿಹೊಳಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ