Chikkaballapur RTO: ಚಿಕ್ಕಬಳ್ಳಾಪುರದಲ್ಲಿ ಖಾಸಗೀ ಬಸ್ಸುಗಳ ಹಾವಳಿಗೆ ಕಡಿವಾಣ ಹಾಕುವವರು ಯಾರಿದ್ದಾರೆ?
ಸಂಚಾರಿ ನಿಯಮಗಳು ಹಾಗೂ ಆರ್.ಟಿ.ಓ. ನಿಯಮಗಳನ್ನು ಉಲ್ಲಂಘಿಸಿ ಚಿಕ್ಕಬಳ್ಳಾಪುರದಲ್ಲಿ ಖಾಸಗಿ ಬಸ್ಸು ಮಾಫಿಯಾ ತಲೆ ಎತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕಾಗಿರುವ ಚಿಕ್ಕಬಳ್ಳಾಪುರದ ಆರ್.ಟಿ.ಓ. ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ. ಇನ್ನು ಮುಂದಾದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುತ್ತಾರೆ ಸಾರ್ವಜನಿಕರು.
ಕಂಟ್ರ್ಯಾಕ್ಟ್ ಕ್ಯಾರೇಜ್ ಪರ್ಮಿಟ್ ಪಡೆದು ಸ್ಟೇಜ್ ಕ್ಯಾರೇಜ್ ರೂಪದಲ್ಲಿ ಖಾಸಗೀ ಬಸ್ಸುಗಳು ಚಿಕ್ಕಬಳ್ಳಾಪುರದಿಂದ (Chikkaballapur) ಬೆಂಗಳೂರಿಗೆ ಸಂಚರಿಸುತ್ತಿವೆ. ರಸ್ತೆ ಸಾರಿಗೆ ಸಂಚಾರಿ ನಿಯಮ ಹಾಗೂ ಆರ್.ಟಿ.ಓ. ಪರ್ಮಿಟ್ ನಿಯಮಗಳನ್ನು (RTO) ಉಲ್ಲಂಘಿಸಿ ಖಾಸಗೀ ಬಸ್ಸು ಮಾಫಿಯಾ ತಲೆ ಎತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರ್‍ಟಿಐ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆಗಳನ್ನು ಪಡೆದು ಖಾಸಗೀ ಬಸ್ಸು ಮಾಫಿಯಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ (Private bus mafia). ಈ ಕುರಿತು ಒಂದು ವರದಿ…
ಚಿಕ್ಕಬಳ್ಳಾಪುರ, ದೇವನಹಳ್ಳಿ, ಯಲಹಂಕ ಮೂಲದ ಖಾಸಗೀ ಬಸ್ಸು ಮಾಲೀಕರು 60ಕ್ಕೂ ಹೆಚ್ಚು ಖಾಸಗೀ ಬಸ್ಸುಗಳನ್ನು ಹೊಂದಿದ್ದು, ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಚಿಕ್ಕಬಳ್ಳಾಪುರ-ಬೆಂಗಳೂರು ಮಾರ್ಗದಲ್ಲಿ ಪ್ರಯಾಣಿಕರನ್ನು ಸ್ಟೇಜ್ ಕ್ಯಾರೇಜ್ ರೂಪದಲ್ಲಿ ಸಾಗಿಸುತ್ತಿದ್ದಾರೆ. ಬಹುತೇಕರಿಗೆ ಸ್ಟೇಜ್ ಕ್ಯಾರೇಜ್ ಪರ್ಮಿಟ್ ಇಲ್ಲ. ಕಾಂಟ್ರ್ಯಾಕ್ಟ್ ಕ್ಯಾರೇಜ್ ಪರ್ಮಿಟ್ ಪಡೆದು ಅಕ್ರಮವಾಗಿ ಸ್ಟೇಜ್ ಕ್ಯಾರೇಜ್ ರೀತಿಯಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದಾರೆ.
ಇದರಿಂದ ಚಿಕ್ಕಬಳ್ಳಾಪುರದ ಕೊಳವನಹಳ್ಳಿ ಗ್ರಾಮದ ಆರ್‍ಟಿಐ ಕಾರ್ಯಕರ್ತ ತ್ಯಾಗರಾಜ್ ಎನ್ನುವವರು ವಿವಿಧ ಆರ್.ಟಿ.ಓ.ಗಳಿಂದ ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆಗಳನ್ನು ಪಡೆದು, ಖಾಸಗೀ ಬಸ್ಸು ಮಾಫಿಯಾ ವಿರುದ್ಧ ಕ್ರಮ ಜರುಗಿಸುವಂತೆ ಚಿಕ್ಕಬಳ್ಳಾಪುರ ಎಸ್ಪಿ ಹಾಗೂ ಆರ್.ಟಿ.ಓ. ರವರಿಗೆ ದೂರು ನೀಡಿದ್ದಾರೆ.
ಮತ್ತೊಂದಡೆ ಕೆ.ಎಸ್.ಆರ್.ಟಿ.ಸಿ. ಬಸ್‍ನಿಲ್ದಾಣದಿಂದ 500 ಮೀ. ದೂರದಿಂದ ಖಾಸಗೀ ಬಸ್ಸುಗಳು ಒಪ್ಪಂದದ ಪ್ರಯಾಣಕ್ಕೆ ಮಾತ್ರ ಪ್ರಯಾಣಿಕರನ್ನು ಸಾಗಿಸಬೇಕು. ಆದರೆ ಚಿಕ್ಕಬಳ್ಳಾಪುರದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಪ್ರವೇಶದ್ವಾರದಲ್ಲೇ ಖಾಸಗೀ ಬಸ್ಸುಗಳು ಆಗಮಿಸಿ ಪ್ರಯಾಣಿಕರನ್ನು ಸಾಗಿಸುವುದರ ಮೂಲಕ ನಿಯಮ ಉಲ್ಲಂಘಿಸುತ್ತಿದ್ದಾರೆ. ಮತ್ತೊಂದಡೆ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಉಚಿತ ಪ್ರಯಾಣ ಮಾಡಲು ಶಕ್ತಿಯೋಜನೆ ಜಾರಿಗೊಳಿಸಿದ ನಂತರ ಬಹುತೇಕ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲೇ ಸಂಚರಿಸುತ್ತಿದ್ದಾರೆ. ಇದರಿಂದ ಖಾಸಗೀ ಬಸ್ಸುಗಳಲ್ಲಿ ಪ್ರಯಾಣಿಕರು ಇಲ್ಲದಂತಾಗಿದ್ದಾರೆಂದು ಖಾಸಗೀ ಬಸ್ಸು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
Also read: ಗಾಂಧಿ ಗ್ರಾಮ ಪುರಸ್ಕಾರ ಹುಡುಕಿಕೊಂಡು ಬಂದಿದೆ ಮುಧೋಳ ಗ್ರಾಮಕ್ಕೆ! ಏನಿದರ ವಿಶೇಷ?
ಸಂಚಾರಿ ನಿಯಮಗಳು ಹಾಗೂ ಆರ್.ಟಿ.ಓ. ನಿಯಮಗಳನ್ನು ಉಲ್ಲಂಘಿಸಿ ಚಿಕ್ಕಬಳ್ಳಾಪುರದಲ್ಲಿ ಖಾಸಗಿ ಬಸ್ಸು ಮಾಫಿಯಾ ತಲೆ ಎತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕಾಗಿರುವ ಚಿಕ್ಕಬಳ್ಳಾಪುರದ ಆರ್.ಟಿ.ಓ. ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ. ಇನ್ನು ಮುಂದಾದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆನ್ನುತ್ತಾರೆ ಸಾರ್ವಜನಿಕರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ