ಧಾರವಾಡ, ಡಿಸೆಂಬರ್ 07: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti)
ವಿರುದ್ಧ ಎಫ್ಐಆರ್ ದಾಖಲಿಸದ ಹಿನ್ನೆಲೆ ರಾಜ್ಯ ಡಿಜಿ&ಐಜಿಪಿ ಮತ್ತು ಧಾರವಾಡ ಎಸ್ಪಿಗೆ ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗದಿಂದ ನೋಟಿಸ್ ಜಾರಿ ಮಾಡಲಾಗಿದೆ. ಡಿ.12ರಂದು ದೆಹಲಿ ಕಚೇರಿಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಎಸ್ಟಿ ಆಯೋಗ ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ್ ಮತ್ತು ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ಗೆ ಸೂಚಿಸಿದೆ.
ಧಾರವಾಡದ ಅರುಣ್ ಹಿರೇಹಾಳ ಎಂಬುವವರು ನೀಡಿದ ದೂರಿನ ಮೇರೆಗೆ ನೋಟಿಸ್ ಜಾರಿ ಮಾಡಲಾಗಿದೆ. ಪರಿಶಿಷ್ಟ ಪಂಗಡದ ವಾಲ್ಮೀಕಿ ಮಠಕ್ಕೆ ಸೇರಿದ್ದು ಎನ್ನಲಾದ ಧಾರವಾಡದ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಅಕ್ರಮವೆಸಗಿದ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ಧಾರವಾಡ: ಕರ್ನಾಟಕ ವಿವಿಯಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ತಾಳೆಗರಿ ಗ್ರಂಥಗಳ ಡಿಜಿಟಲೈಸೇಶನ್
2022ರ ನವೆಂಬರ್ನಲ್ಲಿ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಗಲಾಟೆ ನಡೆದಿತ್ತು. ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿಲ್ಲವೆಂದು ಅರುಣ್ ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗಕ್ಕೆ ದೂರು ನೀಡಿದ್ದರು.
ಧಾರವಾಡದ ಸರ್ವೋದಯ ಶಿಕ್ಷಣ ಸಂಸ್ಥೆಯನ್ನು 1956ರಲ್ಲಿ ಬಾಂಬೆ ಪಬ್ಲಿಕ್ ಟ್ರಸ್ಟ್ ಆಕ್ಟ್ ಅಡಿಯಲ್ಲಿ ಏಕೈಕ ಟ್ರಸ್ಟಿಯಾಗಿ ಎನ್.ಟಿ ದಬಾಡೆ ಅವರು ಸ್ಥಾಪಿಸಿದ್ದಾರೆ. ಬಾಂಬೆ ಪಬ್ಲಿಕ್ ಟ್ರಸ್ಟ್ ಆಕ್ಟ್‌ನ ಪ್ರಕಾರ, ಟ್ರಸ್ಟ್‌ನ ಕಾರ್ಯಾಚರಣೆ ಮತ್ತು ಕಾರ್ಯಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಆರ್ ಎನ್ ಪೂಜಾರ್ ಅವರನ್ನು ನೇಮಿಸಲಾಗಿಯಿ. 1995 ರಿಂದ 2003 ರವರೆಗೆ ಆರ್ ಎನ್ ಪೂಜಾರ್ ಅವರು ಸರ್ವೋದಯ ಶಿಕ್ಷಣ ಟ್ರಸ್ಟ್‌ನ ಏಕೈಕ ಟ್ರಸ್ಟಿಯಾಗಿದ್ದರು. ಬಳಿಕ 2006 ರಲ್ಲಿ ಅವರು ನಿಧನರಾದರು.
ಇದನ್ನೂ ಓದಿ: ಧಾರವಾಡ: ಢಾಬಾದಲ್ಲಿ ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿರುವ ಆರೋಪ, ಪೊಲೀಸ್ ಭೇಟಿ
ಬಸವರಾಜ ಹೊರಟ್ಟಿ ಅವರು ಚುನಾಯಿತ ಪ್ರತಿನಿಧಿಯಾಗಿದ್ದು, ಆರ್. ಎನ್ ಪೂಜಾರ್ ಅವರು ಪರಿಶಿಷ್ಟ ಪಂಗಡದವರೆಂಬುವುದನ್ನು ತಿಳಿದು ಅವರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದು, ಮತ್ತು 2009 ರಲ್ಲಿ ಟ್ರಸ್ಟ್‌ಗೆ ತಮ್ಮ ಹೆಸರನ್ನು ತಿಳಿಸುವಂತೆ ಅಧಿಕಾರಿಗಳನ್ನು ಪ್ರಭಾವಿಸಿದ್ದಾರೆ. ಇದು ಕಾನೂನುಬಾಹಿರ ಮತ್ತು ಪರಿಶಿಷ್ಟ ಪಂಗಡದ ಆರ್ಥಿಕ ಬಹಿಷ್ಕಾರಕ್ಕೆ ಕಾರಣವಾಗಿದೆ. ಪರಿಶಿಷ್ಟ ಬುಡಕಟ್ಟು ಮತ್ತು ಇತರ ಎಲ್ಲರನ್ನು ಶೋಷಣೆಗೆ ಗುರಿಪಡಿಸಿದ್ದಾರೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಟ್ರಸ್ಟ್‌ನ ಸೇವೆಗಳಿಂದ ಪ್ರಯೋಜನ ಪಡೆಯಬೇಕಾದ ಪರಿಶಿಷ್ಟ ಪಂಗಡಗಳಿಗೆ ಭಾರತೀಯ ಸಂವಿಧಾನದ 14 ನೇ ವಿಧಿಯ ಅಡಿಯಲ್ಲಿ ಎಲ್ಲಾ ಹಕ್ಕುಗಳನ್ನು ನಿರಾಕರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:03 pm, Sat, 7 December 24