ಸಿಎಂ ಯಡಿಯೂರಪ್ಪ 4ನೇ ರಾಜಕೀಯ ಕಾರ್ಯದರ್ಶಿ ಅಧಿಕೃತ ನೇಮಕ

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿಯಾಗಿ ಸಂತೋಷ್ ಅವರನ್ನು ನೇಮಕ ಮಾಡಲಾಗಿದೆ. ಎನ್.ಆರ್.ಸಂತೋಷ್ ನೇಮಿಸಿ ರಾಜ್ಯ ಸರ್ಕಾರದಿಂದ ಆಧಿಕೃತ ಆದೇಶ ಹೊರಬಿದ್ದಿದೆ. ಸಂತೋಷ್, ಹಾಲಿ ಮುಖ್ಯಮಂತ್ರಿಯ ನಾಲ್ಕನೇ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಎನ್.ಆರ್.ಸಂತೋಷ್ ಅವರು ಬಿ ಎಸ್ ಯಡಿಯೂರಪ್ಪ ದೂರದ ಸಂಬಂಧಿಯೂ ಹೌದು. ಇವರು ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದವರು. ಎಸ್ ಆರ್ ವಿಶ್ವನಾಥ್, ಎಂಪಿ ರೇಣುಕಾಚಾರ್ಯ ಮತ್ತು ಶಂಕರಗೌಡ ಪಾಟೀಲ್ ಇತರೆ ಮೂವರು ರಾಜಕೀಯ ಕಾರ್ಯದರ್ಶಿಗಳು.

ಸಿಎಂ ಯಡಿಯೂರಪ್ಪ 4ನೇ ರಾಜಕೀಯ ಕಾರ್ಯದರ್ಶಿ ಅಧಿಕೃತ ನೇಮಕ

Updated on: May 30, 2020 | 5:13 PM

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿಯಾಗಿ ಸಂತೋಷ್ ಅವರನ್ನು ನೇಮಕ ಮಾಡಲಾಗಿದೆ. ಎನ್.ಆರ್.ಸಂತೋಷ್ ನೇಮಿಸಿ ರಾಜ್ಯ ಸರ್ಕಾರದಿಂದ ಆಧಿಕೃತ ಆದೇಶ ಹೊರಬಿದ್ದಿದೆ. ಸಂತೋಷ್, ಹಾಲಿ ಮುಖ್ಯಮಂತ್ರಿಯ ನಾಲ್ಕನೇ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಎನ್.ಆರ್.ಸಂತೋಷ್ ಅವರು ಬಿ ಎಸ್ ಯಡಿಯೂರಪ್ಪ ದೂರದ ಸಂಬಂಧಿಯೂ ಹೌದು. ಇವರು ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದವರು. ಎಸ್ ಆರ್ ವಿಶ್ವನಾಥ್, ಎಂಪಿ ರೇಣುಕಾಚಾರ್ಯ ಮತ್ತು ಶಂಕರಗೌಡ ಪಾಟೀಲ್ ಇತರೆ ಮೂವರು ರಾಜಕೀಯ ಕಾರ್ಯದರ್ಶಿಗಳು.

Published On - 5:00 pm, Sat, 30 May 20