ದೇಶ ಆರ್ಥಿಕವಾಗಿ ದಿವಾಳಿ ಆಗ್ತಾ ಇದೆ, ಯುವಕರು ಬೀದಿ ಪಾಲಾಗ್ತಾರೆ -ಸಿದ್ದರಾಮಯ್ಯ ಆತಂಕ
ಬೆಂಗಳೂರು: ದೇಶದ ಜನ ಮೋದಿ ಮೇಲೆ ವಿಶ್ವಾಸ ಇಟ್ಟು 2ನೇ ಅವಧಿಗೆ ಅವಕಾಶ ಕೊಟ್ರು. ಆದ್ರೆ ಮೊದಲ ಅವಧಿಯಲ್ಲೇ ಪ್ರಧಾನಿ ಮೋದಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಈಗ 6ನೇ ವರ್ಷದಲ್ಲೂ ಅದೇ ಸುಳ್ಳು ಮುಂದುವರಿಸಿದ್ದಾರೆ. ಆರ್ಟಿಕಲ್ 370ರದ್ದು, ಆಯೋಧ್ಯೆ, ತ್ರಿವಳಿ ತಲಾಖ್ ರದ್ದು ಮಾಡಿರುವುದನ್ನ ಸಾಧನೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈತರೆಲ್ಲಾ ಖುಷಿಯಾಗಿದ್ದಾರಾ? ದೇಶ ಆರ್ಥಿಕವಾಗಿ ದಿವಾಳಿ ಆಗ್ತಾ ಇದೆ. ಯುವಕರು ಬೀದಿ ಪಾಲಾಗ್ತಾರೆ. ಕೃಷಿಕರಿಗೆ ಬೆಂಬಲ […]

ಬೆಂಗಳೂರು: ದೇಶದ ಜನ ಮೋದಿ ಮೇಲೆ ವಿಶ್ವಾಸ ಇಟ್ಟು 2ನೇ ಅವಧಿಗೆ ಅವಕಾಶ ಕೊಟ್ರು. ಆದ್ರೆ ಮೊದಲ ಅವಧಿಯಲ್ಲೇ ಪ್ರಧಾನಿ ಮೋದಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಈಗ 6ನೇ ವರ್ಷದಲ್ಲೂ ಅದೇ ಸುಳ್ಳು ಮುಂದುವರಿಸಿದ್ದಾರೆ. ಆರ್ಟಿಕಲ್ 370ರದ್ದು, ಆಯೋಧ್ಯೆ, ತ್ರಿವಳಿ ತಲಾಖ್ ರದ್ದು ಮಾಡಿರುವುದನ್ನ ಸಾಧನೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತರೆಲ್ಲಾ ಖುಷಿಯಾಗಿದ್ದಾರಾ? ದೇಶ ಆರ್ಥಿಕವಾಗಿ ದಿವಾಳಿ ಆಗ್ತಾ ಇದೆ. ಯುವಕರು ಬೀದಿ ಪಾಲಾಗ್ತಾರೆ. ಕೃಷಿಕರಿಗೆ ಬೆಂಬಲ ಬೆಲೆಯಿಂದ ಬದುಕು ಸ್ಥಿರವಾಗಿದೆ ಅಂತಾ ಪತ್ರದಲ್ಲಿ ಹೇಳಿದ್ದಾರೆ. ಆದರೆ ಇದು ಸತ್ಯನಾ? ರೈತರೆಲ್ಲಾ ಖುಷಿಯಾಗಿದ್ದಾರಾ? ಕಲಬುರಗಿ, ರಾಯಚೂರು ಭಾಗದ ರೈತರ ತೊಗರಿ ಖರೀದಿ ಮಾಡ್ತಾ ಇದ್ದಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ತಿಂಗಳಿಗೆ 500 ರೂಪಾಯಿ ಕೊಟ್ರೆ ಸಾಕಾ?: 20 ಕ್ವಿಂಟಲ್ ತೊಗರಿ ಖರೀದಿ ಮಾಡ್ತೀನಿ ಅಂತಾ ಯಡಿಯೂರಪ್ಪ ಹೇಳಿದ್ರು. ಆದರೆ ಯಡಿಯೂರಪ್ಪ ಸರ್ಕಾರದಿಂದ ಖರೀದಿ ಮಾಡಿದ್ರೆ ವರ್ಷಕ್ಕೆ 6 ಸಾವಿರ ರೂಪಾಯಿ ಅಂತಾರೆ. ತಿಂಗಳಿಗೆ 500 ರೂಪಾಯಿ ಕೊಟ್ರೆ ಸಾಕಾ? ರೈತರಿಗೆ ಮಾರಕವಾಗುವ ಎಪಿಎಂಸಿ ತಿದ್ದುಪಡಿ ಕಾಯ್ದೆ ಯಾಕೆ?
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ರೈತರ ಜುಟ್ಟನ್ನ ಎಂಎನ್ಸಿಗಳಿಗೆ ನೀಡ್ತಾರೆ. ಕಾರ್ಮಿಕರಿಗೆ 10 ಗಂಟೆ ಕೆಲಸ ಮಾಡಿಸ್ತಾ ಇದಾರೆ. ಹಾಗಾದ್ರೆ ಮೇ ದಿನ ಯಾಕೆ ಮಾಡ್ತಾರೆ. ಹೆಚ್ಚು ಕೆಲಸದ ಅವಧಿ ಹಾಗೂ ಶೋಷಣೆ ವಿರೋಧಿಸಿ ಕಾರ್ಮಿಕರ ಹೋರಾಟ ನಡೆಯಿತು. ಕಾರ್ಮಿಕ ವಿರೋಧಿ ಕಾನೂನು ಯಾಕೆ ತರ್ತಾ ಇದಾರೆ. ರೈಲ್ವೆ ಪೊಲೀಸರೆ ಹೇಳಿದ್ರು 80 ಮಂದಿ ಸತ್ತಿದ್ದಾರೆ ಎಂದು ಇದಕ್ಕೆ ಯಾರು ಜವಾಬ್ದಾರಿ? ಎಂದು ಕಿಡಿಕಾರಿದರು.
ಬಡತನ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಹೇಳಿಲ್ಲ: ಮೋದಿ ಕೋರ್ಟ್ ತೀರ್ಪನ್ನ ಕಾರ್ಯಗತಗೊಳಿಸಿದ್ದಾರಷ್ಟೆ. ಅಂದು ಕಾಶ್ಮೀರಕ್ಕೆ 370 ಸ್ಥಾನಮಾನ ಅನಿವಾರ್ಯವಿತ್ತು. ಎಲ್ಲಾ ರಾಜ್ಯಗಳು, ಸಂಸ್ಥಾನಗಳು ಒಕ್ಕೂಟಕ್ಕೆ ಬರಬೇಕಿತ್ತು. ಆ ಸನ್ನಿವೇಶವೇ ಬೇರೆ ಇತ್ತು. ಮೋದಿ ಭಾವನಾತ್ಮಕ ವಿಚಾರವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಆದರೆ ದೇಶದಲ್ಲಿರುವ ರೈತರ ಸಮಸ್ಯೆಗಳು, ಬಡತನ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಏನು ಎಂದು ಹೇಳಿಲ್ಲ.
ಆರ್ಥಿಕ ಪರಿಸ್ಥಿತಿ ಬಗ್ಗೆ ಏನು ಮಾಡಿಲ್ಲ: ದೇಶದ ಜಿಡಿಪಿ ಬಗ್ಗೆ ಆರ್ಥಿಕ ಪರಿಸ್ಥಿತಿ ಬಗ್ಗೆ ಏನು ಮಾಡಿಲ್ಲ. 11 ವರ್ಷದಲ್ಲಿ ಕನಿಷ್ಠ ಪ್ರಮಾಣಕ್ಕೆ ಇಳಿದಿದೆ. ಕೊರೊನಾ ಇತ್ತೀಚೆಗೆ ಬಂದಿದೆ ಅಷ್ಟೇ. ಪಾಕಿಸ್ತಾನ, ಬಾಂಗ್ಲಾದೇಶ, ಸಿಲೋನ್ ನಮಗಿಂತ ಬಡರಾಷ್ಟ್ರಗಳು. ಆದ್ರೂ ಅವು ನಮಗಿಂತ ಜಿಡಿಪಿಯಲ್ಲಿ ಬಲಿಷ್ಠವಾಗಿವೆ. 2020-21ರಲ್ಲಿ ನಕಾರಾತ್ಮಕವಾಗುತ್ತೆ. 50 ವರ್ಷದಲ್ಲೇ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಆಗುತ್ತೆ.
Published On - 2:52 pm, Sat, 30 May 20