ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿಗೆ ತುತ್ತಾದವರು ಎಷ್ಟು ಗೊತ್ತಾ?

| Updated By:

Updated on: Jul 27, 2020 | 8:57 PM

ಬೆಂಗಳೂರು: ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಏರುತ್ತಲೇ ಇದೆ.  ಇಂದು ಸಹ ರಾಜ್ಯದಲ್ಲಿ ಹೊಸದಾಗಿ 5,199 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಅತಿ ಹೆಚ್ಚು ಅಂದ್ರೆ 1,950 ಕೇಸ್​ಗಳು ಬೆಂಗಳೂರಲ್ಲಿ ವರದಿಯಾಗಿದೆ. ಹೀಗಾಗಿ, ರಾಜ್ಯದಲ್ಲಿ ಸೋಂಕಿಗೆ ಒಟ್ಟು 96,141 ಜನ ತುತ್ತಾಗಿದ್ದಾರೆ. ಇಂದು ರಾಜ್ಯದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರ ಇತರೆ ಜಿಲ್ಲಾವಾರು ಮಾಹಿತಿ ಹೀಗಿದೆ. ಬಳ್ಳಾರಿಯಲ್ಲಿ 579, ಮೈಸೂರಲ್ಲಿ 230, ಬೆಂಗಳೂರು ಗ್ರಾಮಾಂತರದಲ್ಲಿ 213, ದಕ್ಷಿಣ ಕನ್ನಡದಲ್ಲಿ 199 ಪ್ರಕರಣಗಳು ವರದಿಯಾಗಿದೆ. ಉಡುಪಿಯಲ್ಲಿ 169, ಧಾರವಾಡದಲ್ಲಿ […]

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿಗೆ ತುತ್ತಾದವರು ಎಷ್ಟು ಗೊತ್ತಾ?
Follow us on

ಬೆಂಗಳೂರು: ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಏರುತ್ತಲೇ ಇದೆ.  ಇಂದು ಸಹ ರಾಜ್ಯದಲ್ಲಿ ಹೊಸದಾಗಿ 5,199 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಅತಿ ಹೆಚ್ಚು ಅಂದ್ರೆ 1,950 ಕೇಸ್​ಗಳು ಬೆಂಗಳೂರಲ್ಲಿ ವರದಿಯಾಗಿದೆ. ಹೀಗಾಗಿ, ರಾಜ್ಯದಲ್ಲಿ ಸೋಂಕಿಗೆ ಒಟ್ಟು 96,141 ಜನ ತುತ್ತಾಗಿದ್ದಾರೆ.

ಇಂದು ರಾಜ್ಯದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರ ಇತರೆ ಜಿಲ್ಲಾವಾರು ಮಾಹಿತಿ ಹೀಗಿದೆ. ಬಳ್ಳಾರಿಯಲ್ಲಿ 579, ಮೈಸೂರಲ್ಲಿ 230,
ಬೆಂಗಳೂರು ಗ್ರಾಮಾಂತರದಲ್ಲಿ 213, ದಕ್ಷಿಣ ಕನ್ನಡದಲ್ಲಿ 199 ಪ್ರಕರಣಗಳು ವರದಿಯಾಗಿದೆ. ಉಡುಪಿಯಲ್ಲಿ 169, ಧಾರವಾಡದಲ್ಲಿ 165, ಹಾಸನದಲ್ಲಿ 164 ಹಾಗೂ ಬೆಳಗಾವಿಯಲ್ಲಿ 163 ಕೇಸ್​ಗಳು ಪತ್ತೆಯಾಗಿದೆ. ಜೊತೆಗೆ, ಕಲಬುರಗಿಯಲ್ಲಿ 152, ವಿಜಯಪುರದಲ್ಲಿ 132, ರಾಯಚೂರಿನಲ್ಲಿ 131, ದಾವಣಗೆರೆಯಲ್ಲಿ 89, ಉತ್ತರ ಕನ್ನಡದಲ್ಲಿ 85, ಚಿಕ್ಕಬಳ್ಳಾಪುರದಲ್ಲಿ 81 ಪ್ರಕರಣಗಳು ಪತ್ತೆಯಾಗಿದೆ. ಬೀದರ್​ನಲ್ಲಿ 77, ಮಂಡ್ಯದಲ್ಲಿ 64, ಗದಗ ಮತ್ತು ಚಿಕ್ಕಮಗಳೂರಿನಲ್ಲಿ ತಲಾ 61 ಕೇಸ್​ಗಳು, ಯಾದಗಿರಿಯಲ್ಲಿ 56, ಚಿತ್ರದುರ್ಗದಲ್ಲಿ 53,
ಕೋಲಾರದಲ್ಲಿ 49, ಹಾವೇರಿಯಲ್ಲಿ 47, ತುಮಕೂರಿನಲ್ಲಿ 46 ಮತ್ತು ಬಾಗಲಕೋಟೆಯಲ್ಲಿ 41 ಕೇಸ್​ಗಳು ವರದಿಯಾಗಿದೆ. ಕೊಪ್ಪಳದಲ್ಲಿ 40, ಶಿವಮೊಗ್ಗದಲ್ಲಿ 39, ಚಾಮರಾಜನಗರದಲ್ಲಿ 28, ಕೊಡಗಿನಲ್ಲಿ 20 ಹಾಗೂ ರಾಮನಗರದಲ್ಲಿ 15 ಪ್ರಕರಣಗಳು ಪತ್ತೆಯಾಗಿದೆ.

ಜೊತೆಗೆ, ಇಂದು ಒಂದೇ ದಿನ ಸೋಂಕಿಗೆ 82 ಜನ ಸಾವನ್ನಪ್ಪಿದ್ದು, ಇದರಲ್ಲಿ 29 ಜನ ಬೆಂಗಳೂರಿನವರೇ ಆಗಿದ್ದಾರೆ. ಇದರಿಂದ ರಾಜ್ಯದಲ್ಲಿ ಈವರೆಗೆ 1,878 ಜನ ಸೋಂಕಿಗೆ ಬಲಿಯಾಗಿದ್ದಾರೆ.

 

Published On - 7:20 pm, Sun, 26 July 20