ಮೈಸೂರು: ಕೊರೊನಾ ಸೋಂಕಿತ ವೃದ್ಧ ಆಸ್ಪತ್ರೆಯಿಂದ ನಾಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕುಂಬಾರಗೇರಿಯ 76 ವರ್ಷದ ವೃದ್ಧ ನಾಪತ್ತೆಯಾಗಿರುವ ಸೋಂಕಿತ.
ಕೊರೊನಾ ಟೆಸ್ಟ್ ವೇಳೆ ವೃದ್ಧನಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತನನ್ನು ಕೋವಿಡ್19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೃದ್ಧ ಮಾನಸಿಕ ಸಮಸ್ಯೆ ಹಾಗೂ ನೆನಪಿನ ಶಕ್ತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೃದ್ಧನ ನಾಪತ್ತೆಯಿಂದ ಮೈಸೂರಿನಲ್ಲಿ ಆತಂಕ ಹೆಚ್ಚಾಗಿದೆ.
ಈ ಹಿಂದೆಯೂ ಇದೇ ರೀತಿ ಹಲವು ಬಾರಿ ನಾಪತ್ತೆಯಾಗಿದ್ದರು. ಸದ್ಯ ಈಗ ವೃದ್ಧನನ್ನು ಹುಡುಕಿ ಕೊಡುವಂತೆ ಮನೆಯವರು ಮನವಿ ಮಾಡಿಕೊಂಡಿದ್ದಾರೆ. ಸೋಂಕಿತ ವೃದ್ಧನ ಬಗ್ಗೆ ಮಾಹಿತಿ ಸಿಕ್ಕರೆ ಹತ್ತಿರದ ಪೊಲೀಸ್ ಠಾಣೆ ಅಥವಾ ದೂರವಾಣಿ ಸಂಖ್ಯೆಗೆ (9986433799) ಕರೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.