ಉದ್ಯೋಗ ಖಾತರಿ ಯೋಜನೆಯಲ್ಲಿ ದುಡಿದು ಇತರರಿಗೆ ಮಾದರಿಯಾದ ಗದಗದ ವೃದ್ಧ ದಂಪತಿ

| Updated By: Skanda

Updated on: Apr 10, 2021 | 9:32 AM

ಅಬ್ಬಿಗೇರಿ ಗ್ರಾಮದ 69ರ ಇಳಿ ವಯಸ್ಸಿನ ಕಂಠಯ್ಯ ಮಠಪತಿ ಹಾಗೂ 65ರ ಇಳಿ ವಯಸ್ಸಿನ ಪಾರವ್ವ ಕಂಠಯ್ಯ ಮಠಪತಿ ಇವರು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದುಡಿಯುತ್ತಿದ್ದು, ಇದನ್ನು ನೋಡಿದ ಅದೇಷ್ಟೋ ಯುವಕ, ಯುವತಿಯರು ಕುಂಟು ನೆಪಗಳನ್ನು ಬಿಟ್ಟು ಕೆಲಸಕ್ಕೆ ಹಾಜರಾಗಿದ್ದಾರೆ.

ಉದ್ಯೋಗ ಖಾತರಿ ಯೋಜನೆಯಲ್ಲಿ ದುಡಿದು ಇತರರಿಗೆ ಮಾದರಿಯಾದ ಗದಗದ ವೃದ್ಧ ದಂಪತಿ
ಕಂಠಯ್ಯ ಮಠಪತಿ ಹಾಗೂ ಪಾರವ್ವ ಕಂಠಯ್ಯ ಮಠಪತಿ
Follow us on

ಗದಗ: ಈಗಿನ ಕಾಲದ ಯುವಪೀಳಿಗೆ ಜಮೀನು ಕೆಲಸ ಎಂದರೆ ಸಾಕು ಮಾರುದ್ದ ಓಡಿ ಹೋಗುತ್ತಾರೆ. ಅದರಲ್ಲೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಎಂದರೆ ಸಾಕು ಮೂಗು ಮೂರಿಯೋ ಜನರೇ ಹೆಚ್ಚು. ಆದರೆ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ವೃದ್ಧ ದಂಪತಿ ಯುವ ಪೀಳಿಗೆ ನಾಚುವಂತಹ ಕೆಲಸ ಮಾಡಿದ್ದು, ಆ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಅಬ್ಬಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹೊಲವೊಂದರಲ್ಲಿ ನಡೆದಿರುವ ದುಡಿಯೋಣ ಬಾ ಕಾಮಗಾರಿಯಲ್ಲಿ ವೃದ್ಧ ದಂಪತಿಗಳು ಭಾಗಿಯಾಗಿದ್ದು, ನಿರ್ಮಾಣ ಕಾಮಗಾರಿಯಲ್ಲಿ ದುಡಿಯುವ ಮೂಲಕ ಎಲ್ಲರಿಗೆ ಸ್ಪೂರ್ತಿಯಾಗಿದ್ದಾರೆ.

ಅಬ್ಬಿಗೇರಿ ಗ್ರಾಮದ 69ರ ಇಳಿ ವಯಸ್ಸಿನ ಕಂಠಯ್ಯ ಮಠಪತಿ ಹಾಗೂ 65ರ ಇಳಿ ವಯಸ್ಸಿನ ಪಾರವ್ವ ಕಂಠಯ್ಯ ಮಠಪತಿ ಇವರು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದುಡಿಯುತ್ತಿದ್ದು, ಇದನ್ನು ನೋಡಿದ ಅದೇಷ್ಟೋ ಯುವಕ, ಯುವತಿಯರು ಕುಂಟು ನೆಪಗಳನ್ನು ಬಿಟ್ಟು ಕೆಲಸಕ್ಕೆ ಹಾಜರಾಗಿದ್ದಾರೆ.

ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕಾಮಗಾರಿ

ಬೇವರು ಸುರಿಸಿ ದುಡಿದರೆ ಭೂಮಿ ತಾಯಿ ನಮಗೆ ಚೆನ್ನಾಗಿ ಇಟ್ಟಿರುತ್ತಾಳೆ. ದುಡಿಮೆ ತಕ್ಕಂತೆ ಊಟ ಹೋಗುತ್ತದೆ ಹಾಗೂ ಯಾವುದೇ ರೋಗಗಳು ಬರುವುದಿಲ್ಲ. ಬಿಪಿ, ಶುಗರ್ ನಮ್ಮ ಆಸುಪಾಸು ಸುಳಿಯುವುದಿಲ್ಲ ಅದಕ್ಕೆ ದುಡಿಮೆಗೆ ಮುಂದಾಗಬೇಕು ಎಂದು ಅಜ್ಜ ಕಂಠಯ್ಯ ಮಠಮತಿ ಹೇಳಿದ್ದಾರೆ.

ವಯಸ್ಸಿನಲ್ಲಿ ಹಿರಿಯರಾದರು ಕೆಲಸದಲ್ಲಿ ಯುವಕರಂತೆ ದುಡಿಯುತ್ತಿರುವ ದಂಪತಿಗಳು ನಮ್ಮೂರಿನ ಜನರಿಗೆ ಮಾದರಿಯಾಗಿದ್ದಾರೆ. ಸದ್ಯ ಅಬ್ಬಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 3 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದಾರೆ ಅದರಲ್ಲಿ ನೂರಕ್ಕೂ ಹೆಚ್ಚು ಜನ ಹಿರಿಯ ನಾಗರಿಕರು ಇದ್ದಾರೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವನಗೌಡ ಮೆಣಸಗಿ ಹೇಳಿದ್ದಾರೆ.

ಗದಗ ಜಿಲ್ಲೆಯಲ್ಲಿ ಅಬ್ಬಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಲದಲ್ಲಿ ನಡೆದಿರುವ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ವೃದ್ಧ ದಂಪತಿ ಕಂಠಯ್ಯ ಹಾಗೂ ಪಾರವ್ವ ಹೆಚ್ಚು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಹೀಗಾಗಿ ವಯಸ್ಸು ಯಾವುದಕ್ಕೂ ಅಡ್ಡಿ ಬರುವುದಿಲ್ಲ ಕೆಲಸ ಮಾಡುವ ಮನಸ್ಸು ಇರಬೇಕು ಎನ್ನುವುದು ಈ ದಂಪತಿಗಳ ಕಾರ್ಯವನ್ನು ನೋಡಿದ ಮೇಲೆ ನಿಜ ಎನಿಸುತ್ತದೆ.

ಇದನ್ನೂ ಓದಿ: 

Viral Video: 72ವರ್ಷದ ಅನ್ಯೋನ್ಯ ದಾಂಪತ್ಯ; ಈ ಜಮಾನಾದ ಜೋಡಿಗಳಿಗೆ ಪ್ರೀತಿಯ ಗುಟ್ಟು ತಿಳಿಸಿದ ವೃದ್ಧ ದಂಪತಿ

ಮಾವೋವಾದಿಗಳ ಭದ್ರಕೋಟೆ ಛತ್ತೀಸಗಡದ ಬಸ್ತರ್​ನಲ್ಲಿ 10 ವರ್ಷಗಳಲ್ಲಿ ಹುತಾತ್ಮರಾಗಿದ್ದು 175 ಯೋಧರು; ಶಾಂತಿಗೆ ಅಭಿವೃದ್ಧಿಯೊಂದೇ ಆಸರೆ

(Old couple working under Udyoga khatri yojane in Gadag)