ಸೆಂಟ್ರಲ್ ಜೈಲಿನಲ್ಲಿ ಕೈದಿಗಳ ಮಾರಾಮಾರಿ: ನೀರಿನ ಲೋಟವನ್ನೇ ಆಯುಧವಾಗಿಸಿಕೊಂಡು ಫುಲ್ ಫೈಟಿಂಗ್​!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 20, 2020 | 8:22 PM

ನಗರದ ಸೆಂಟ್ರಲ್ ಜೈಲಿನಲ್ಲಿ ಕೈದಿಗಳ ನಡುವೆ ಘರ್ಷಣೆ ನಡೆದಿರುವುದು ಬೆಳಕಿಗೆ ಬಂದಿದೆ. ಕೈದಿಗಳ ನಡುವಿನ ಮಾರಾಮಾರಿಯಲ್ಲಿ ಇಬ್ಬರು ಕೈದಿಗಳಿಗೆ ಗಾಯಗಳಾಗಿದ್ದು ಓರ್ವ ವಿಚಾರಣಾಧೀನ ಕೈದಿ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಸೆಂಟ್ರಲ್ ಜೈಲಿನಲ್ಲಿ ಕೈದಿಗಳ ಮಾರಾಮಾರಿ: ನೀರಿನ ಲೋಟವನ್ನೇ ಆಯುಧವಾಗಿಸಿಕೊಂಡು ಫುಲ್ ಫೈಟಿಂಗ್​!
ಪ್ರಾತಿನಿಧಿಕ ಚಿತ್ರ
Follow us on

ಶಿವಮೊಗ್ಗ: ನಗರದ ಸೆಂಟ್ರಲ್ ಜೈಲಿನಲ್ಲಿ ಕೈದಿಗಳ ನಡುವೆ ಘರ್ಷಣೆ ನಡೆದಿರುವುದು ಬೆಳಕಿಗೆ ಬಂದಿದೆ. ಕೈದಿಗಳ ನಡುವಿನ ಮಾರಾಮಾರಿಯಲ್ಲಿ ಇಬ್ಬರು ಕೈದಿಗಳಿಗೆ ಗಾಯಗಳಾಗಿದ್ದು ಓರ್ವ ವಿಚಾರಣಾಧೀನ ಕೈದಿ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಜೈಲಿನಲ್ಲಿ ಕುಡಿಯುವ‌ ನೀರಿನ ಲೋಟವನ್ನೇ ಆಯುಧವಾಗಿಸಿಕೊಂಡು ಹೊಡೆದಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮಾರಾಮಾರಿಯಲ್ಲಿ ಚಿಕ್ಕಮಗಳೂರಿನ ಬೆನಕಶೆಟ್ಟಿ, ಶಿವಮೊಗ್ಗದ ದೇವೇಂದ್ರಪ್ಪ ಮತ್ತು ಮಲ್ಲೇಶಪ್ಪ ಎಂಬುವ ಕೈದಿಗಳಿಗೆ ಗಾಯಗಳಾಗಿದ್ದು, ಮೂವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ, ಆಸ್ಪತ್ರೆಗೆ ಸೆಂಟ್ರಲ್​ ಜೈಲಿನ ಅಧೀಕ್ಷಕ ರಂಗನಾಥ್ ಭೇಟಿಕೊಟ್ಟರು. ಕೈದಿಗಳ ಹೊಡೆದಾಟದ ಬಗ್ಗೆ ಅಧೀಕ್ಷಕ ಮಾಹಿತಿ ಪಡೆದರು.

ಅನೈತಿಕ ಸಂಬಂಧ ಶಂಕೆ: ಕೊಲೆಯಾದ ಸ್ಥಿತಿಯಲ್ಲಿ ಬೀಡಾ ಅಂಗಡಿ ವ್ಯಾಪಾರಿ ಶವ ಪತ್ತೆ

Published On - 7:29 pm, Sun, 20 December 20