ಈರುಳ್ಳಿಗೆ ದರ ಏರಿಕೆ ಪೆಟ್ಟು; ಮನೆಗಳಲ್ಲಿ ಈರುಳ್ಳಿ ಹಚ್ಚಲು ಗೃಹಿಣಿಯರು ಹಿಂದೇಟು!
ಬೆಂಗಳೂರು: ಈರುಳ್ಳಿ ದರ ದಿನೇ ದಿನೇ ಗಗನಕ್ಕೇರುತ್ತಿದೆ. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಏರುತ್ತಿರುವ ಈರುಳ್ಳಿ ರೇಟ್ ಕೇಳಿ ಜನ ಪುಲ್ ಶಾಕ್ ಆಗ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ವರ್ಷ ಉಂಟಾದ ಅತಿವೃಷ್ಟಿಯಿಂದಾಗಿ ಈರುಳ್ಳಿ ಬೆಳೆಹಾನಿಯಾಗಿದೆ. ಈರುಳ್ಳಿ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆ ಆಗಿದೆ ಈ ಹಿನ್ನೆಲೆ ಬೆಲೆ ಏರಿಕೆಯಾಗಿದೆ. ಇದರಿಂದ ಗ್ರಾಹಕರ ಜೊತೆ ಬೆಳೆಗಾರರು ಕಣ್ಣೀರು ಹಾಕುವಂತಾಗಿದೆ. ಅತೀ ವೃಷ್ಠಿ, ಅನಾವೃಷ್ಠಿಯಿದಾಗಿ ಹೀಗೆಲ್ಲ.. ಅತಿಹೆಚ್ಚು ಈರುಳ್ಳಿ ಬೆಳೆಯುವ ಕರ್ನಾಟಕದಲ್ಲೇ ಈರುಳ್ಳಿ ದುಬಾರಿಯಾಗಿದೆ. ಕೆಜಿಗೆ 40 […]
ಬೆಂಗಳೂರು: ಈರುಳ್ಳಿ ದರ ದಿನೇ ದಿನೇ ಗಗನಕ್ಕೇರುತ್ತಿದೆ. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಏರುತ್ತಿರುವ ಈರುಳ್ಳಿ ರೇಟ್ ಕೇಳಿ ಜನ ಪುಲ್ ಶಾಕ್ ಆಗ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ವರ್ಷ ಉಂಟಾದ ಅತಿವೃಷ್ಟಿಯಿಂದಾಗಿ ಈರುಳ್ಳಿ ಬೆಳೆಹಾನಿಯಾಗಿದೆ. ಈರುಳ್ಳಿ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆ ಆಗಿದೆ ಈ ಹಿನ್ನೆಲೆ ಬೆಲೆ ಏರಿಕೆಯಾಗಿದೆ. ಇದರಿಂದ ಗ್ರಾಹಕರ ಜೊತೆ ಬೆಳೆಗಾರರು ಕಣ್ಣೀರು ಹಾಕುವಂತಾಗಿದೆ.
ಅತೀ ವೃಷ್ಠಿ, ಅನಾವೃಷ್ಠಿಯಿದಾಗಿ ಹೀಗೆಲ್ಲ.. ಅತಿಹೆಚ್ಚು ಈರುಳ್ಳಿ ಬೆಳೆಯುವ ಕರ್ನಾಟಕದಲ್ಲೇ ಈರುಳ್ಳಿ ದುಬಾರಿಯಾಗಿದೆ. ಕೆಜಿಗೆ 40 ರಿಂದ 50 ರೂಪಾಯಿ ಇದ್ದ ಈರುಳ್ಳಿ ರೇಟ್ ಈಗ 100 -130 ರೂಪಾಯಿಗೆ ಏರಿಕೆಯಾಗಿದೆ. ಕೆಲವು ಭಾಗಗಳಲ್ಲಿ ಹೆಚ್ಚು ಮಳೆಯಾಗಿ ಈರುಳ್ಳಿ ಬೆಳೆ ಕೊಚ್ಚಿ ಹೋಗಿವೆ. ಮತ್ತೆ ಕೆಲವು ಕಡೆ ಕಡಿಮೆ ಮಳೆಯಾಗಿ ಈರುಳ್ಳಿ ಬೆಳೆ ಸರಿಯಾಗಿ ಬೆಳೆದಿಲ್ಲ.
ನೆರೆ ಮತ್ತು ಹೆಚ್ಚಿನ ಮಳೆಯಿಂದ ಈರುಳ್ಳಿ ಸಮಸ್ಯೆ ಹೆಚ್ಚಾಗಿದೆ. ಕರ್ನಾಟಕದ ಹೊಸ ಈರುಳ್ಳಿ ಮಾರುಕಟ್ಟೆಗೆ ಬಂದಿಲ್ಲ. ಇನ್ನೂ ಡಿಸೆಂಬರ್ ಕೊನೆಯ ವರೆಗೂ ಈರುಳ್ಳಿ ಬೆಲೆ ಇದೇ ರೀತಿ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಗ್ರಾಹಕರಲ್ಲಿ ಆತಂಕ ಮನೆ ಮಾಡಿದೆ. ಈರುಳ್ಳಿ ಖರೀದಿಸಲು ಚಿಂತಿಸುವಂತಾಗಿದೆ.
ದರದರ ಏರಿದೆ ಈರುಳ್ಳಿ ದರ! ಹಾಗಾಗಿ ಈರುಳ್ಳಿ ಹಚ್ಚಲು ಗೃಹಿಣಿಯರು ಹಿಂದೆಮುಂದೆ ನೋಡುತ್ತಿದ್ದಾರೆ. ಹೆಚ್ಚು ಬೆಲೆ ಕೊಟ್ಟು ಈರುಳ್ಳಿ ತಿನ್ನೋದು ಬೇಡ ಎಂದು ಇದ್ದಬದ್ದ ತರಕಾರಿಗಳಲ್ಲೇ ಅಡುಗೆ ಮಾಡಿ, ತಮ್ಮ ಬದ್ಧತೆ ಮೆರೆಯುತ್ತಿದ್ದಾರೆ.
Published On - 9:37 am, Thu, 28 November 19