ರಾಜ್ಯದಲ್ಲಿ 1-5ನೇ ತರಗತಿ ಮಕ್ಕಳ ಆನ್‌ಲೈನ್ ಕ್ಲಾಸ್ಗೆ ಮತ್ತೆ ಸಿಕ್ತು ಗ್ರೀನ್ಸಿಗ್ನಲ್!
ಬೆಂಗಳೂರು: ಆನ್‌ಲೈನ್ ಶಿಕ್ಷಣ.. ಕಳೆದ ಕೆಲ ದಿನಗಳಿಂದ ಆನ್‌ಲೈನ್ ಕ್ಲಾಸ್ ವಿಚಾರ ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಆನ್‌ಲೈನ್ ಶಿಕ್ಷಣ ಬೇಕಾ ಬೇಡ್ವಾ..? ಆನ್‌ಲೈನ್ ಎಜ್ಯುಕೇಶನ್ನಿಂದ ಮಕ್ಕಳ ಭವಿಷ್ಯಕ್ಕೆ ಆಪತ್ತು ಎದುರಾಗಲಿದ್ಯಾ..? ಹೀಗೆ ಹತ್ತಾರು ವಿಚಾರಗಳ ಬಗ್ಗೆ ಇನ್ನಿಲ್ಲದ ಚರ್ಚೆಯಾಗ್ತಿರೋವಾಗ್ಲೇ ಸರ್ಕಾರ ಆನ್‌ಲೈನ್ ಶಿಕ್ಷಣಕ್ಕೆ ದಿಢೀರ್ ಬ್ರೇಕ್ ಹಾಕಿತ್ತು. ಆದ್ರೆ ಅದ್ಯಾವಾಗ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸ್ತೋ ರಾಜ್ಯದಲ್ಲಿ ಮತ್ತೆ ಆನ್‌ಲೈನ್ ಶಿಕ್ಷಣಕ್ಕೆ ಸರ್ಕಾರ ಅಸ್ತು ಎಂದಿದೆ. 1-5ನೇ ತರಗತಿ ಮಕ್ಕಳಿಗೆ ನಡೆಯಲಿದೆ ಆನ್‌ಲೈನ್ ಶಿಕ್ಷಣ! ಲಾಕ್ಡೌನ್ […]

ಬೆಂಗಳೂರು: ಆನ್‌ಲೈನ್ ಶಿಕ್ಷಣ.. ಕಳೆದ ಕೆಲ ದಿನಗಳಿಂದ ಆನ್‌ಲೈನ್ ಕ್ಲಾಸ್ ವಿಚಾರ ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಆನ್‌ಲೈನ್ ಶಿಕ್ಷಣ ಬೇಕಾ ಬೇಡ್ವಾ..? ಆನ್‌ಲೈನ್ ಎಜ್ಯುಕೇಶನ್ನಿಂದ ಮಕ್ಕಳ ಭವಿಷ್ಯಕ್ಕೆ ಆಪತ್ತು ಎದುರಾಗಲಿದ್ಯಾ..? ಹೀಗೆ ಹತ್ತಾರು ವಿಚಾರಗಳ ಬಗ್ಗೆ ಇನ್ನಿಲ್ಲದ ಚರ್ಚೆಯಾಗ್ತಿರೋವಾಗ್ಲೇ ಸರ್ಕಾರ ಆನ್‌ಲೈನ್ ಶಿಕ್ಷಣಕ್ಕೆ ದಿಢೀರ್ ಬ್ರೇಕ್ ಹಾಕಿತ್ತು. ಆದ್ರೆ ಅದ್ಯಾವಾಗ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸ್ತೋ ರಾಜ್ಯದಲ್ಲಿ ಮತ್ತೆ ಆನ್‌ಲೈನ್ ಶಿಕ್ಷಣಕ್ಕೆ ಸರ್ಕಾರ ಅಸ್ತು ಎಂದಿದೆ.
1-5ನೇ ತರಗತಿ ಮಕ್ಕಳಿಗೆ ನಡೆಯಲಿದೆ ಆನ್‌ಲೈನ್ ಶಿಕ್ಷಣ! ಲಾಕ್ಡೌನ್ ವೇಳೆ ರಾಜ್ಯದಲ್ಲಿ ಖಾಸಗಿ ಶಾಲೆಗಳು ಆನ್‌ಲೈನ್ ಕ್ಲಾಸ್ ಮೊರೆ ಹೋಗಿದ್ದವು. ಎಲ್ಕೆಜಿ, ಯುಕೆಜಿ ಮಕ್ಕಳಿಗೂ ಆನ್‌ಲೈನ್ ಕ್ಲಾಸ್ ಹೆಸರಲ್ಲಿ ಬಹುತೇಕ ಖಾಸಗಿ ಶಾಲೆಗಳು ಫೀಸ್ ಪಡೆಯುತ್ತಿದ್ದಾರೆ ಅಂತ ಪೋಷಕರು ಆರೋಪಗಳ ಸುರಿಮಳೆಗೈದಿದ್ರು. ಹೀಗಾಗಿ ಆನ್‌ಲೈನ್ ಶಿಕ್ಷಣದ ಸಾಧಕ-ಬಾಧಕ ಕುರಿತು ತಜ್ಞರ ಸಮಿತಿ ರಚಿಸಿದ್ದ ರಾಜ್ಯ ಸರ್ಕಾರ ವರದಿ ಸಲ್ಲಿಕೆಯಾಗೋವರೆಗೂ ಆನ್‌ಲೈನ್ ಕ್ಲಾಸ್ ನಡೆಸದಂತೆ ಆದೇಶಿಸಿತ್ತು.
ಆದ್ರೆ, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಮಾರ್ಗದರ್ಶನದ ಪ್ರಕಾರ ಆನ್‌ಲೈನ್ ಕ್ಲಾಸ್ ನಡೆಸಬಹುದು. ರಾಜ್ಯ ಸರ್ಕಾರ ರಚಿಸಿರುವ ತಜ್ಞರ ಸಮಿತಿ ವರದಿ ಬರೋವರೆಗೂ ಸೀಮಿತ ಅವಧಿಯಲ್ಲಿ ಆನ್‌ಲೈನ್ ಶಿಕ್ಷಣ ನಡೆಸ್ಬೋದು ಅಂತ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಹೀಗಾಗಿ ಮತ್ತೆ ರಾಜ್ಯದಲ್ಲಿ ಆನ್‌ಲೈನ್ ಕ್ಲಾಸ್ ನಡೆಸಲು ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ 1ರಿಂದ 5ನೇ ತರಗತಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಮತ್ತೆ ಸ್ಟಾರ್ಟ್ ಆಗಲಿದೆ.
ಆನ್‌ಲೈನ್ ಪಾಠಕ್ಕೆ ರೂಲ್ಸ್ ಇನ್ನು, 1 ರಿಂದ 5 ನೇ ತರಗತಿವರೆಗಿನ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡಲು ತಾತ್ಕಾಲಿಕ ಅನುಮತಿ ನೀಡಲಾಗಿದೆ. 1 ರಿಂದ 5 ನೇ ತರಗತಿ ಮಕ್ಕಳಿಗೆ 30ರಿಂದ 40 ನಿಮಿಷ ಕ್ಲಾಸ್ ನಡೆಸಬೇಕು ಅಂತ ನಿಯಮ ಜಾರಿಗೆ ತರಲಾಗಿದೆ. ಒಂದು ವಾರದಲ್ಲಿ ಗರಿಷ್ಟ 3 ಆನ್‌ಲೈನ್ ಕ್ಲಾಸ್ಗಳನ್ನು ನಡೆಸಬೋದು ಎನ್ನಲಾಗಿದೆ.
ಇಷ್ಟೇ ಅಲ್ಲ ಪೂರ್ವ ಪ್ರಾಥಮಿಕ ಮಕ್ಕಳಿಗೂ ಪಾಲಕರ ಉಪಸ್ಥಿತಿಯಲ್ಲಿ 30 ನಿಮಿಷಗಳ ಕಾಲ ಕ್ಲಾಸ್ ನಡೆಸಲು ಅವಕಾಶ ನೀಡಲಾಗಿದೆ. ಸದ್ಯ ಆನ್‌ಲೈನ್ ತರಗತಿ ಕುರಿತು ತಜ್ಞರ ಸಮಿತಿ ವರದಿ ನೀಡಬೇಕಿದೆ. ವರದಿ ಬರುವ ತನಕ 1-5ನೇ ತರಗತಿ ಮಕ್ಕಳಿಗೂ ಆನ್‌ಲೈನ್ ಶಿಕ್ಷಣ ನಡೆಸಲು ಒಪ್ಪಿಗೆ ಸಿಕ್ಕಿದೆ. ಆದ್ರೆ ಆನ್‌ಲೈನ್ ಕ್ಲಾಸ್ಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುವಂತಿಲ್ಲ ಅಂತ ಶಿಕ್ಷಣ ಇಲಾಖೆ ಖಡಕ್ ಸಂದೇಶ ರವಾನಿಸಿದೆ.
ತಜ್ಞರ ವರದಿ ಬರೋವರೆಗೂ ಆನ್‌ಲೈನ್ ಶಿಕ್ಷಣ! ಸದ್ಯ ಆನ್‌ಲೈನ್ ತರಗತಿ ಕುರಿತು ತಜ್ಞರ ಸಮಿತಿ ವರದಿ ನೀಡಬೇಕಿದೆ. ತಜ್ಞರ ಸಮಿತಿ ರಿಪೋರ್ಟ್ ಬರೋವರೆಗೂ 1 ರಿಂದ 5ನೇ ತರಗತಿ ಮಕ್ಕಳಿಗೂ ಆನ್‌ಲೈನ್ ಶಿಕ್ಷಣ ನಡೆಸಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಇದ್ರ ಜೊತೆಗೆ ಆನ್‌ಲೈನ್ ಶಿಕ್ಷಣಕ್ಕೆ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ.
ಇದಕ್ಕೆ ತಗುಲುವ ವೆಚ್ಚ ವಾರ್ಷಿಕ ಬೋಧನಾ ಶುಲ್ಕದಿಂದಲೇ ಭರಿಸಬೇಕು. ಹೆಚ್ಚುವರಿ ಫೀಸ್ ನೀಡುವಂತೆ ಯಾವುದೇ ಕಾರಣಕ್ಕೂ ಶಿಕ್ಷಣ ಸಂಸ್ಥೆಗಳು ಪೋಷಕರಿಗೆ ಒತ್ತಾಯ ಮಾಡುವಂತಿಲ್ಲ. ಒಂದು ವೇಳೆ ಒತ್ತಾಯ ಮಾಡಿದ್ದೇ ಆದಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ಶಿಕ್ಷಣ ಇಲಾಖೆ ಖಡಕ್ ವಾರ್ನಿಂಗ್ ಕೂಡ ಮಾಡಿದೆ.
ಒಟ್ನಲ್ಲಿ ಆನ್‌ಲೈನ್ ಶಿಕ್ಷಣ ಇಲ್ಲ ಅಂತ ಖುಷ್ ಆಗಿದ್ದ ಮಕ್ಕಳಿಗೆ ಮತ್ತೆ ಆನ್‌ಲೈನ್ ಕ್ಲಾಸ್ ಕಾಟ ಬೆನ್ನು ಬಿದ್ದಿದೆ.




