ಪಾಸ್​ ಇದ್ದವ್ರಿಗೆ ಮಾತ್ರ ಬಿಎಂಟಿಸಿ ಬಸ್​​​​​​​​​​​​ನಲ್ಲಿ ಅವಕಾಶ!

ಬೆಂಗಳೂರು: ಲಾಕ್​ಡೌನ್​ನಿಂದಾಗಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಇಂದಿನಿಂದ ಆರಂಭವಾಗಲಿದೆ. ಆದೆರ ಬಸ್​ನಲ್ಲಿ ಓಡಾಡಬೇಕಾದ್ರೆ ಹತ್ತಾರು ನಿಯಮಗಳನ್ನ ಸಾರಿಗೆ ನಿಗಮ ಜಾರಿಗೊಳಿಸಿದೆ. ಪ್ರಯಾಣಿಕರ ವಿಷ್ಯದಲ್ಲಿ ಇಲಾಖೆ ಮತ್ತೊಂದು ತೀರ್ಮಾನ ಕೈಗೊಂಡಿದ್ದು, ಅದು ಚರ್ಚೆ ಹುಟ್ಟುಹಾಕಿದೆ. ಪಾಸ್​​​​ ಇದ್ದವರಿಗೆ ಮಾತ್ರ ಬಸ್​​​! ಬಿಎಂಟಿಸಿ ಬಸ್​​ನಲ್ಲಿ, ದುಡ್ಡು ಕೊಟ್ಟು ಟಿಕೆಟ್ ಪಡೆಯುವುದಕ್ಕೆ ಅವಕಾಶ ಇರಲ್ಲ. ದಿನದ ಪಾಸ್, ಮಾಸಿಕ ಪಾಸ್ ಅಥವಾ ತಿಂಗಳ ಪಾಸ್ ಇದ್ದವರು ಮಾತ್ರ ಪ್ರಯಾಣ ಮಾಡ್ಬಹುದು. ತಿಂಗಳ ಪಾಸ್‌ಗಳನ್ನು ಕೌಂಟರ್‌ನಲ್ಲಿ ಖರೀದಿ ಮಾಡಬೇಕು. ದಿನದ ಪಾಸ್‌ಗೆ ₹70, […]

ಪಾಸ್​ ಇದ್ದವ್ರಿಗೆ ಮಾತ್ರ ಬಿಎಂಟಿಸಿ ಬಸ್​​​​​​​​​​​​ನಲ್ಲಿ ಅವಕಾಶ!
ಸಾಧು ಶ್ರೀನಾಥ್​

Updated on: May 19, 2020 | 1:48 PM

ಬೆಂಗಳೂರು: ಲಾಕ್​ಡೌನ್​ನಿಂದಾಗಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಇಂದಿನಿಂದ ಆರಂಭವಾಗಲಿದೆ. ಆದೆರ ಬಸ್​ನಲ್ಲಿ ಓಡಾಡಬೇಕಾದ್ರೆ ಹತ್ತಾರು ನಿಯಮಗಳನ್ನ ಸಾರಿಗೆ ನಿಗಮ ಜಾರಿಗೊಳಿಸಿದೆ. ಪ್ರಯಾಣಿಕರ ವಿಷ್ಯದಲ್ಲಿ ಇಲಾಖೆ ಮತ್ತೊಂದು ತೀರ್ಮಾನ ಕೈಗೊಂಡಿದ್ದು, ಅದು ಚರ್ಚೆ ಹುಟ್ಟುಹಾಕಿದೆ.

ಪಾಸ್​​​​ ಇದ್ದವರಿಗೆ ಮಾತ್ರ ಬಸ್​​​!
ಬಿಎಂಟಿಸಿ ಬಸ್​​ನಲ್ಲಿ, ದುಡ್ಡು ಕೊಟ್ಟು ಟಿಕೆಟ್ ಪಡೆಯುವುದಕ್ಕೆ ಅವಕಾಶ ಇರಲ್ಲ. ದಿನದ ಪಾಸ್, ಮಾಸಿಕ ಪಾಸ್ ಅಥವಾ ತಿಂಗಳ ಪಾಸ್ ಇದ್ದವರು ಮಾತ್ರ ಪ್ರಯಾಣ ಮಾಡ್ಬಹುದು. ತಿಂಗಳ ಪಾಸ್‌ಗಳನ್ನು ಕೌಂಟರ್‌ನಲ್ಲಿ ಖರೀದಿ ಮಾಡಬೇಕು.

ದಿನದ ಪಾಸ್‌ಗೆ ₹70, ವಾರದ ಪಾಸ್‌ಗೆ 300 ರೂಪಾಯಿ. ಹೀಗಾಗಿ, ಬಸ್​ನಲ್ಲಿ ಹೋಗ್ಬೇಕು ಅಂದ್ರೆ ಮಿನಿಮಮ್​ 70 ರೂಪಾಯಿ ಕೊಟ್ಟು ದಿನದ ಪಾಸ್ ಖರೀದಿಸಬೇಕು. ಇದಲ್ಲದೆ, ಹಿರಿಯ ನಾಗರೀಕರು, ಗರ್ಭಿಣಿಯರು, 10 ವರ್ಷದ ಮಕ್ಕಳಿಗೂ ಬಸ್​​ನಲ್ಲಿ ಪ್ರವೇಶವಿಲ್ಲ ಅಂತ ನಿಗಮ ತಿಳಿಸಿದೆ. ಅಲ್ಲಿಗೆ, ಒಂದು ಸಲ, ಒಂದು ಸ್ಥಳಕ್ಕೆ ಬಸ್​​ನಲ್ಲಿ ಹೋಗ್ಬೇಕು ಅಂದ್ರೆ, 70 ರೂಪಾಯಿ ಕೊಟ್ಟು ಪಾಸ್​ ಖರೀದಿ ಮಾಡ್ಲೇಬೇಕು.

 

Published On - 7:20 am, Tue, 19 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us