ರಾಮನಗರ: ತನ್ನ ವೈಭವ ಭರಿತ ಜೀವನ ಹಾಗೂ ವಿವಾದಗಳಿಂದಲೇ ನಿತ್ಯಾನಂದ ದೇಶಾದ್ಯಂತ ಫುಲ್ ಫೇಮಸ್ ಆಗಿದ್ದ. ರಾಮನಗರದ ಬಿಡದಿಯಲ್ಲಿ ಧ್ಯಾನಪೀಠ ಮಾಡ್ಕೊಂಡಿದ್ದ ನಿತ್ಯಾನಂದ ಆಗೊಮ್ಮೆ, ಈಗೊಮ್ಮೆ ತೆರೆಮೇಲೆ ಪ್ರತ್ಯಕ್ಷನಾಗಿ ಮತ್ತೆ ಮರೆಯಾಗ್ತಿದ್ದಾನೆ. ಆದರೆ ನಾಪತ್ತೆಯಾಗಿರುವ ನಿತ್ಯಾನಂದ ಎಲ್ಲಿದ್ದಾನೆ ಎಂಬ ಪಕ್ಕಾ ಮಾಹಿತಿ ಇನ್ನೂ ಸಿಕ್ಕಿಲ್ಲ. ಇದು ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ.
ನಿತ್ಯಾನಂದ ಈಗ ಎಲ್ಲಿದ್ದಾನೆ..? ಏನು ಮಾಡ್ತಿದ್ದಾನೆ..?
ಅಂದಹಾಗೆ ನಿತ್ಯಾನಂದನ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದಂಥ ಗಂಭೀರ ಆರೋಪಗಳು ಕೂಡ ಇವೆ. ಪ್ರಕರಣ ರಾಮನಗರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿದೆ. ನಿತ್ಯಾನಂದ 3 ವರ್ಷದಿಂದ ಕೋರ್ಟ್ಗೂ ಹಾಜರಾಗಿಲ್ಲ. ಹೀಗಾಗಿ ನಿತ್ಯಾನಂದನ ವಿರುದ್ಧ ಓಪನ್ ಇಂಡೆಂಟ್ ವಾರೆಂಟ್’ ಕೂಡ ಜಾರಿಯಾಗಿದೆ. ಆದ್ರೆ ಈಗ ನಿತ್ಯಾನಂದ ಎಲ್ಲಿದ್ದಾನೆ, ಏನು ಮಾಡ್ತಿದ್ದಾನೆ ಅನ್ನೋದು ಯಾರಿಗೂ ಗೊತ್ತಿಲ್ಲ. ಆಗಾಗ ವಿಡಿಯೋ ಮಾಡಿ, ಇಂಟರ್ನೆಟ್ನಲ್ಲಿ ಹರಿಬಿಡುವ ನಿತ್ಯಾನಂದನ ಸುಳಿವು ಇದುವರೆಗೂ ಪತ್ತೆಯಾಗಿಲ್ಲ. ನಿತ್ಯಾನಂದನ ವಿರುದ್ಧ ವಾರಂಟ್ ಜಾರಿಯಾಗಿದ್ದರೂ ಆತನನ್ನ ಹುಡುಕಿ, ಕೋರ್ಟ್ ಮುಂದೆ ಹಾಜರುಪಡಿಸುವ ಕೆಲಸವನ್ನ ಅಧಿಕಾರಿಗಳು ಮಾಡಿಲ್ಲ.
ಅಂದಹಾಗೆ ನಿತ್ಯಾನಂದ ಪದೇಪದೆ ಕೋರ್ಟ್ಗೆ ಹಾಜರಾಗದ ಹಿನ್ನೆಲೆ ಆತನ ವಿರುದ್ಧ ‘ಓಪನ್ ಇಂಡೆಂಟ್ ವಾರೆಂಟ್’’ ಜಾರಿಯಾಗಿದೆ. ಅಲ್ದೆ ನಿತ್ಯಾನಂದನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ನಿಟ್ಟಿನಲ್ಲಿ, ನಿತ್ಯಾನಂದನ ಆಸ್ತಿಯ ಬಗ್ಗೆ ಮಾಹಿತಿ ನೀಡುವಂತೆ ಕೋರ್ಟ್ ಆದೇಶಿಸಿದೆ. ಆದ್ರೆ ಈಗಾಗಲೇ ಬಿಡದಿಯ ಧ್ಯಾನಪೀಠವನ್ನ ತನ್ನ ತಾಯಿಯ ಹೆಸರಿಗೆ ವರ್ಗಾವಣೆ ಮಾಡಿದ್ದಾನೆ ನಿತ್ಯಾನಂದ. ಹೀಗಾಗಿ ಉಳಿದಿರುವ ಆಸ್ತಿಯನ್ನ ಪತ್ತೆ ಹಚ್ಚೋಕೆ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಗಂಭೀರ ಆರೋಪ ಎದುರಿಸಿ, ಕೋರ್ಟ್ಗೆ ಹಾಜರಾಗದೆ, ವಾರಂಟ್ ಜಾರಿಯಾಗಿದ್ರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೂ ಕಾರಣವಾಗಿದೆ.
ಒಟ್ನಲ್ಲಿ ನಿತ್ಯಾನಂದನ ಕೇಸ್ ಕಗ್ಗಂಟಾಗಿದೆ. ಕೋರ್ಟ್ ಆದೇಶಕ್ಕೂ ತಲೆಬಾಗದೆ ಎಸ್ಕೇಪ್ ಆಗಿರುವ ಆಸಾಮಿ ನಿತ್ಯಾನಂದನ ಜಾಡು ಹಿಡಿಯಲು ಅಧಿಕಾರಿಗಳು ಮುಂದಾಗ್ತಿಲ್ಲ. ಈಗಲಾದ್ರೂ ಆ ಕೆಲಸ ಆಗಬೇಕಿದೆ.
Published On - 7:16 am, Fri, 5 February 21