ಅತಿ ಹೆಚ್ಚು ಮತ ಪಡೆದರೂ ನಲಪಾಡ್ಗೆ ಮುಖಭಂಗ: ರಕ್ಷಾ ರಾಮಯ್ಯಗೆ ಅಧ್ಯಕ್ಷ ಸ್ಥಾನ
ಈ ಚುನಾವಣೆಯಲ್ಲಿ ನಲಪಾಡ್ ಅತಿ ಹೆಚ್ಚು ಅಂದರೆ, 64,203 ಮತಗಳನ್ನು ಪಡೆದಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಅವರನ್ನು ಅನರ್ಹ ಎಂದು ಘೋಷಣೆ ಮಾಡಲಾಗಿದೆ.
ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಘಟಕಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ರಕ್ಷಾ ರಾಮಯ್ಯ ಅವರು ಕರ್ನಾಟಕ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೊಹಮ್ಮದ್ ನಲಪಾಡ್ ಅತಿ ಹೆಚ್ಚು ಮತ ಗಳಿಸಿದ್ದರೂ ಅವರನ್ನು ಅನರ್ಹ ಮಾಡಿದ್ದರಿಂದ ಅಧ್ಯಕ್ಷ ಸ್ಥಾನ ಕೈತಪ್ಪಿದೆ.
ರಕ್ಷಾ ರಾಮಯ್ಯ ಅವರಿಗೆ 57,271 ಮತಗಳು ಬಿದ್ದಿವೆ. 18,137 ಮತಗಳನ್ನು ಪಡೆದು ಮಂಜುನಾಥ್ ಎಚ್.ಎಸ್ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 7 ಜನರು ಸ್ಪರ್ಧೆ ಮಾಡಿದ್ದರು. ಕೊನೆಯ ಕ್ಷಣದಲ್ಲಿ ಮಿಥುನ್ ರೈ ಕಣದಿಂದ ಹಿಂದೆ ಸರಿದಿದ್ದರು. ಹೀಗಾಗಿ, ಸ್ಪರ್ಧೆಯಲ್ಲಿ ಆರು ಜನರಿದ್ದರು.
ಈ ಚುನಾವಣೆಯಲ್ಲಿ ನಲಪಾಡ್ ಅತಿ ಹೆಚ್ಚು ಅಂದರೆ ,64,203 ಮತಗಳನ್ನು ಪಡೆದಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಅವರನ್ನು ಅನರ್ಹ ಎಂದು ಘೋಷಣೆ ಮಾಡಲಾಗಿದೆ. ಹೀಗಾಗಿ, ಅವರಿಗೆ ಅಧ್ಯಕ್ಷ ಸ್ಥಾನ ದೊರೆತಿಲ್ಲ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಮಾಡಿ ಹಾಕಿರುವ ನಲಪಾಡ್, ಅತಿ ಹೆಚ್ಚು ಮತಗಳನ್ನು ಪಡೆದಿದ್ದು ನಾನೇ. ಕಾಂಗ್ರೆಸ್ ಕಾರ್ಯಕರ್ತನಾಗಿ ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
View this post on Instagram
ಚುನಾವಣೆ ನಿರೀಕ್ಷಣಾ ಸಂಸ್ಥೆಯಾದ FAME (Foundation for advanced Management of Elections) ಚುನಾವಣೆ ನಡೆಸಿತ್ತು. ತಿಂಗಳ ಹಿಂದೆ ಅಧ್ಯಕ್ಷ ಸ್ಥಾನ ಆಕಾಂಕಿಕ್ಷಗಳ ಸಂದರ್ಶನ ನಡೆಸಿತ್ತು. ಅದರಲ್ಲಿ ಏಳು ಜನರು ಆಯ್ಕೆ ಆಗಿದ್ದರು. ಅಂದು ನಲಪಾಡ್ ಅವರನ್ನು ಅರ್ಹ ಎಂದು ಘೋಷಣೆ ಮಾಡಿ, ಈಗ ಅನರ್ಹ ಎಂದು ಹೇಳಿದ್ದೇಕೆ ಎನ್ನುವ ಪ್ರಶ್ನೆ ಕಾಡಿದೆ.
ರಾಜಕೀಯ ವಿಶ್ಲೇಷಣೆ | ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಯಾರಿಗೆ ಹೂವು? ಯಾರಿಗೆ ಮುಳ್ಳು?