AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೈಸೂರಿನಲ್ಲಿದೆ ಕೌಟಿಲ್ಯನ ಅರ್ಥಶಾಸ್ತ್ರದ ಮೂಲ ಗ್ರಂಥ; ಇದರ ಬಗ್ಗೆ ನಿಮಗೆಷ್ಟು ಗೊತ್ತು?

Kautilya's Arthashastra: ಮೈಸೂರಿನಲ್ಲಿರುವ ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಗಮನಾರ್ಹವಾದ ನಿಧಿಗೆ ನೆಲೆಯಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರದ ಮೂಲ ಗ್ರಂಥ ರಾಜಕೀಯ, ಅರ್ಥಶಾಸ್ತ್ರ ಮತ್ತು ಮಿಲಿಟರಿ ತಂತ್ರಗಳ ಕುರಿತಾದ ಪ್ರಾಚೀನ ಭಾರತೀಯ ಪಠ್ಯ. ಚಾಣಕ್ಯ ಎಂದೂ ಕರೆಯಲ್ಪಡುವ ಕೌಟಿಲ್ಯ ಈ ಮಹತ್ವದ ಕೃತಿಯ ಕರ್ತೃ ಎಂದು ನಂಬಲಾಗಿದೆ. ಇದು ಮೌರ್ಯ ಸಾಮ್ರಾಜ್ಯದ ಸಮಕಾಲೀನ ಗ್ರಂಥ. ಕೌಟಿಲ್ಯನ ಅರ್ಥಶಾಸ್ತ್ರ ಆಡಳಿತ ಮತ್ತು ನಾಯಕತ್ವದ ಅತ್ಯಂತ ಹಳೆಯ ಪುಸ್ತಕಗಳಲ್ಲಿ ಒಂದಾಗಿದೆ.

ನಮ್ಮ ಮೈಸೂರಿನಲ್ಲಿದೆ ಕೌಟಿಲ್ಯನ ಅರ್ಥಶಾಸ್ತ್ರದ ಮೂಲ ಗ್ರಂಥ; ಇದರ ಬಗ್ಗೆ ನಿಮಗೆಷ್ಟು ಗೊತ್ತು?
ಕೌಟಿಲ್ಯ ಅರ್ಥಶಾಸ್ತ್ರ
ನಯನಾ ಎಸ್​ಪಿ
| Edited By: |

Updated on:Oct 28, 2023 | 5:46 PM

Share

ನಾವೆಲ್ಲರೂ ಕೌಟಿಲ್ಯನ ಅರ್ಥಶಾಸ್ತ್ರದ (Kautilya’s Arthashastra) ಬಗ್ಗೆ ಕೇಳಿದ್ದೇವೆ, ಇಂದಿಗೂ ಅನೇಕ ನಾಯಕರು ಮತ್ತು ವಿದ್ವಾಂಸರು ಚಾಣಕ್ಯ (Chanakya) ನೀತಿಯಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ. ಆದರೆ ಕೌಟಿಲ್ಯನ ಅರ್ಥಶಾಸ್ತ್ರದ ಮೂಲ ಪ್ರತಿಯನ್ನು ನಮ್ಮ ರಾಜ್ಯದಲ್ಲಿ ಇರಿಸಲಾಗಿದೆ ಎಂದು ನಿಮಗೆ ಗೊತ್ತಿದೆಯಾ?  ಹೌದು, ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾ ಸಂಸ್ಥೆಯು (Oriental Research Institute) 1905 ರಿಂದ ಕೌಟಿಲ್ಯನ ಅರ್ಥಶಾಸ್ತ್ರದ ಮೂಲ ಗ್ರಂಥವನ್ನು ಉಳಿಸಿಕೊಂಡು ಬಂದಿದೆ.

ಮೈಸೂರಿನಲ್ಲಿರುವ ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಗಮನಾರ್ಹವಾದ ನಿಧಿಗೆ ನೆಲೆಯಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರದ ಮೂಲ ಗ್ರಂಥ ರಾಜಕೀಯ, ಅರ್ಥಶಾಸ್ತ್ರ ಮತ್ತು ಮಿಲಿಟರಿ ತಂತ್ರಗಳ ಕುರಿತಾದ ಪ್ರಾಚೀನ ಭಾರತೀಯ ಪಠ್ಯ. ಚಾಣಕ್ಯ ಎಂದೂ ಕರೆಯಲ್ಪಡುವ ಕೌಟಿಲ್ಯ ಈ ಮಹತ್ವದ ಕೃತಿಯ ಕರ್ತೃ ಎಂದು ನಂಬಲಾಗಿದೆ. ಇದು ಮೌರ್ಯ ಸಾಮ್ರಾಜ್ಯದ ಸಮಕಾಲೀನ ಗ್ರಂಥ. ಕೌಟಿಲ್ಯನ ಅರ್ಥಶಾಸ್ತ್ರ ಆಡಳಿತ ಮತ್ತು ನಾಯಕತ್ವದ ಅತ್ಯಂತ ಹಳೆಯ ಪುಸ್ತಕಗಳಲ್ಲಿ ಒಂದಾಗಿದೆ.

Arthashastra

ಅರ್ಥಶಾಸ್ತ್ರ

1905 ರ ವರೆಗೂ ಈ ಮಹಾ ಗ್ರಂಥದ ಬಗ್ಗೆ ಎಲ್ಲರು ಕೇಳಿದ್ದರು ಆದರೆ ಯಾರ ಬಳಿಯೂ ಈ ಗ್ರಂಥವಿರಲಿಲ್ಲ. ಆದರೆ 1905 ರಲ್ಲಿ ಕಳೆದುಹೋದ ಈ ಪುರಾತನ ಗ್ರಂಥ ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ ಸಿಕ್ಕಿತು. ಆ ವ್ಯಕ್ತಿ ಗ್ರಂಥವನ್ನು ಓರಿಯಂಟಲ್ ರಿಸರ್ಚ್ ಲೈಬ್ರರಿ ಗ್ರಂಥಪಾಲಕ​ ಮತ್ತು ಸಂಸ್ಕೃತ ವಿದ್ವಾಂಸ ರುದ್ರಪಟ್ಟಣ ಶಾಮಶಾಸ್ತ್ರಿ ಅವರಿಗೆ ಹಸ್ತಾಂತರಿಸಿದರು. ಈ ಸಂಸ್ಥೆಯು 1891 ರಲ್ಲಿ ಮೈಸೂರಿನ ಒಡೆಯರ್ ರಾಜರಿಂದ ಸ್ಥಾಪಿಸಲ್ಪಟ್ಟಾಗಿನಿಂದ ಅಪರೂಪದ ಹಸ್ತಪ್ರತಿಗಳನ್ನು ಸಂರಕ್ಷಿಸುತ್ತಿತ್ತು.

ಶಾಮಶಾಸ್ತ್ರಿ ಅವರು ಅರ್ಥಶಾಸ್ತ್ರವನ್ನು ಹೊಸ ತಾಳೆ ಗರಿಗಳ ಮೇಲೆ ಲಿಪ್ಯಂತರ ಮಾಡಿದರು ಮತ್ತು ಅದನ್ನು 1909 ರಲ್ಲಿ ಪ್ರಕಟಿಸಿದರು. ನಂತರ ಅವರು ಅದನ್ನು 1915 ರಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದರು. ಅವರ ಈ ಕೊಡುಗೆಯಿಂದಾಗಿ ಭಾರತದ ಪ್ರಾಚೀನ ಗ್ರಂಥವಾದ ಕೌಟಿಲ್ಯನ ಅರ್ಥಶಾಸ್ತ್ರ ದೇಶ-ವಿದೇಶಗಳಿಗೆ ತಲುಪಿತು.

Shama Shastri

ಶಾಮ ಶಾಸ್ತ್ರಿ

ಶಾಮಶಾಸ್ತ್ರಿ ಕುರಿತು ಮಾತನಾಡಿದ ಒಆರ್‌ಐ ನಿರ್ದೇಶಕ ಮಧುಸೂಧನ್ ಆಚಾರ್ ಟಿವಿ9 ಜೊತೆ ಒಂದು ಕಥೆಯನ್ನು ಹಂಚಿಕೊಂಡಿದ್ದಾರೆ. “90ರ ದಶಕದಲ್ಲಿ ಮೈಸೂರಿನ ಮಹಾರಾಜರು ಜರ್ಮನಿಗೆ ಪ್ರಯಾಣ ಬೆಳೆಸಿದಾಗ ಅಲ್ಲಿನ ಜರ್ಮನಿ ರಾಜರನ್ನು ಭೇಟಿಯಾದರು. ಆ ಸಮಯದಲ್ಲಿ ರಾಜರು ತಾವು ಮೈಸೂರಿನವರು ಎಂದು ಹೇಳಿದಾಗ, ಜರ್ಮನಿಯ ರಾಜ ನೀವು ಶಾಮಶಾಸ್ತ್ರಿಗಳ ನಾಡಿನಿಂದ ಬಂದಿದ್ದೀರ ಎಂದು ಕೇಳಿದ್ದರಂತೆ. ಈ ಮೂಲಕ ನಾವು ಆ ಕಾಲದಲ್ಲೇ ಶಾಮಾಶಾಸ್ತ್ರಿಯವರು ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಖ್ಯಾತಿಯನ್ನು ಪಡೆದಿದ್ದರು ಎಂಬುದನ್ನು ತಿಳಿಯಬಹುದು.” ಎಂದು ಮಧುಸೂಧನ್ ಅವರು ಹೇಳಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಹಿಂಗಾರಿನ ಅಬ್ಬರ; ನಾಳೆಯಿಂದ ವ್ಯಾಪಕ ಮಳೆ

ಅರ್ಥಶಾಸ್ತ್ರವು ಭಾರತಕ್ಕೆ ಮಾತ್ರವಲ್ಲದೆ ಜಾಗತಿಕವಾಗಿಯೂ ಮಹತ್ವದ್ದಾಗಿದೆ. ಇದು ಆಡಳಿತ ಮತ್ತು ಮಿಲಿಟರಿ ಕಾರ್ಯತಂತ್ರದ ಬಗ್ಗೆ ಭಾರತದ ಶ್ರೀಮಂತ ವಿಚಾರಗಳನ್ನು ಬಹಿರಂಗಪಡಿಸುತ್ತದೆ. ಈ ಪರಿಕಲ್ಪನೆಗಳನ್ನು ಭಾರತೀಯರು ಗ್ರೀಕರಿಂದ ಎರವಲು ಪಡೆದಿದ್ದಾರೆ ಎಂದು ಬ್ರಿಟಿಷರ ನಂಬಿದ್ದರು. ಆದರೆ ಈ ಗ್ರಂಥ ನಮ್ಮ ಭಾರತದ ಶ್ರೀಮಂತ ಇತಿಹಾಸ ಮತ್ತು ಅದ್ಬುತ ಪರಿಕಲ್ಪನೆಗಳನ್ನು ಸಾಬೀತುಪಡಿಸಿದೆ. ಕೌಟಿಲ್ಯನ ಅರ್ಥಶಾಸ್ತ್ರ ನಿಕೊಲೊ ಮ್ಯಾಕಿಯಾವೆಲ್ಲಿಯ “ದಿ ಪ್ರಿನ್ಸ್” ಗಿಂತ ಹಿಂದಿನದು, ಇದು ರಾಜಕೀಯ ತತ್ತ್ವಶಾಸ್ತ್ರದ ಪ್ರಪಂಚದ ಅತ್ಯಂತ ಹಳೆಯ ಗ್ರಂಥವಾಗಿದೆ.

1891 ರಲ್ಲಿ ಮೈಸೂರು ರಾಜರಿಂದ ಸ್ಥಾಪಿಸಲ್ಪಟ್ಟ ಓರಿಯಂಟಲ್ ರಿಸರ್ಚ್ ಲೈಬ್ರರಿ, ನಂತರ ಸರ್ಕಾರದ ನೆರವಿನಿಂದ ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಗಿ ಬದಲಾಯಿತು. ಈ ಸಂಸ್ಥೆ 70,000ಕ್ಕೂ ಹೆಚ್ಚು ಅಪರೂಪದ ಹಸ್ತಪ್ರತಿಗಳ ಸಂಗ್ರಹವನ್ನು ಹೊಂದಿದೆ. ವೈದಿಕ ಔಷಧ, ಅರ್ಥಶಾಸ್ತ್ರ ಮತ್ತು ರಾಜಕೀಯ ಹೀಗೆ ಹಲವು ವಿಷಯಗಳ ಕುರಿತು ಪ್ರಾಚೀನ ಪಠ್ಯಗಳನ್ನು ORI ಹೊಂದಿದೆ. ಇದನ್ನು ಅಧ್ಯಯನ ಮಾಡಲು ಆಸಕ್ತಿ ಹೊಂದಿರುವ ವಿದ್ವಾಂಸರು ಮತ್ತು ವಿದ್ಯಾರ್ಥಿಗಳಿಗೆ ಬೆಂಬಲ ನೀಡುವುದನ್ನು ಇನ್‌ಸ್ಟಿಟ್ಯೂಟ್ ಮುಂದುವರೆಸಿದೆ. ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಮನ್ನಣೆ ಗಳಿಸಿದ ಜ್ಞಾನದ ನಿಧಿಯಾಗಿದೆ.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:01 am, Sat, 28 October 23

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು