ಕರ್ನಾಟಕದಲ್ಲಿ (Karnataka Assembly Election) ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುತ್ತಿದ್ದಂತೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಎಲ್ಲರೂ ಸೇರಿ ಇಂದು ಕೆಲಸ ಮಾಡಿರುವುದಕ್ಕೆ ಕಾಂಗ್ರೆಸ್ಗೆ (Congress) ಈ ಜಯ ಸಿಕ್ಕಿದೆ. ಇದಕ್ಕೆ ರಾಜ್ಯದ ಜನತೆ ಕಾರಣ ಎಂದು ಹೇಳಿದ್ದಾರೆ.ಅದೊಂದು ದೊಡ್ಡ ಗೆಲುವು. ಈ ಮೂಲಕ ಇಡೀ ರಾಷ್ಟ್ರದಲ್ಲಿ ಹೊಸ ಶಕ್ತಿ ಹೊರಹೊಮ್ಮಿತು. ‘ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ’ ಎಂದು ಬಿಜೆಪಿ ನಮ್ಮನ್ನು ಹೀಯಾಳಿಸುತ್ತಿತ್ತು. ಬಿಜೆಪಿ ಮುಕ್ತ ದಕ್ಷಿಣ ಭಾರತ ಎಂಬುದು ಈಗ ಸತ್ಯ ಎಂದಿದ್ದಾರೆ ಖರ್ಗೆ. ಅಹಂಕಾರ ಹೆಚ್ಚು ಕಾಲ ಉಳಿಯುವುದಿಲ್ಲ. ಇದು ಪ್ರಜಾಪ್ರಭುತ್ವ. ನಾವು ಜನರ ಮಾತನ್ನು ಕೇಳಬೇಕು. ನಮಗೆ ಸರಿಯಾದ ಮಾರ್ಗವನ್ನು ತೋರಿಸುವ ಜನರ ಮುಂದೆ ತಲೆಬಾಗಬೇಕು. ಇದು ಯಾರ ಜಯವಲ್ಲ, ರಾಜ್ಯದ ಜನತೆಯ ಗೆಲುವು. ಅವರು ನಿರ್ಧರಿಸಿದರು ಮತ್ತು ಆಯ್ಕೆ ಮಾಡಿದರು. ಅದಕ್ಕಾಗಿಯೇ ನಮಗೆ 136 ಸ್ಥಾನಗಳು ಬಂದಿವೆ. 36 ವರ್ಷಗಳ ನಂತರ ಭರ್ಜರಿ ಗೆಲುವು ನಮ್ಮದಾಗಿದೆ ಎಂದಿದ್ದಾರೆ ಖರ್ಗೆ.
LIVE: Interaction with the media.
In Karnataka, our priority is to implement our 5 guarantees and work for the welfare of the people. https://t.co/V4WpWg6fiN
— Mallikarjun Kharge (@kharge) May 13, 2023
ನೀವೆಲ್ಲರೂ ಒಗ್ಗಟ್ಟಾಗಿರಬೇಕು ಅಂದಾಗ ಮಾತ್ರ ನಾವು ಯುದ್ಧವನ್ನು ಗೆಲ್ಲಬಹುದು. ಆಗ ಮಾತ್ರ ದೇಶವನ್ನು ಉಳಿಸಬಹುದು. ನಿಮಗೆ ಎಲ್ಲೆಡೆ ಪ್ರಜಾಪ್ರಭುತ್ವದ ಆಡಳಿತ ಬೇಕಾದರೆ ಮುಂಬರುವ ಚುನಾವಣೆಯಲ್ಲಿ ನಾವು ದೊಡ್ಡ ಹೋರಾಟ ಮಾಡಬೇಕಾಗಿದೆ.
ನಾವು ಮೇಕೆದಾಟು (ಪಾದಯಾತ್ರೆ) ಯಿಂದ ಪ್ರಾರಂಭಿಸಿದ್ದೇವೆ. ನಂತರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ನಡೆಯಿತು. ರಾಹುಲ್ ಗಾಂಧಿ ನಡೆದು ಬಂದ ಹಾದಿಯಲ್ಲಿ ನಾವು ಸುಮಾರು ಶೇ 99 ಸ್ಥಾನಗಳನ್ನು ಗೆದ್ದಿದ್ದೇವೆ. ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಚುನಾವಣೆ ಫಲಿತಾಂಶ ಲೈವ್ ಅಪ್ಡೇಟ್ ಇಲ್ಲಿ ಕ್ಲಿಕ್ ಮಾಡಿ
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:46 pm, Sat, 13 May 23