ಪಾದರಾಯನಪುರ ಗೂಂಡಾಗಿರಿ: ಶಾಸಕ ಜಮೀರ್ ಪಾತ್ರ ತನಿಖೆಯಾಗಲಿ -ಸಿಟಿ ರವಿ

|

Updated on: Apr 20, 2020 | 11:18 AM

ಬೆಂಗಳೂರು: ಪಾದರಾಯನಪುರದಲ್ಲಿ ಗೂಂಡಾಗಿರಿ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮದ್ ಪಾತ್ರ ಇದ್ರೂ ತನಿಖೆಯಾಗಬೇಕು. ಬೇರೆಯವರ ರೋಲ್ ಇದ್ರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವ ಸಿ.ಟಿ.ರವಿ ಆಗ್ರಹಿಸಿದ್ದಾರೆ. ಇದಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ದನಿ ಗೂಡಿಸಿದ್ದಾರೆ. ತಪ್ಪು ಮಾಡಿದವರ ಬಗ್ಗೆ ಕನಿಕರ ಅಗತ್ಯವಿಲ್ಲ: ಪಾದರಾಯನಪುರದಲ್ಲಿ ಗಲಭೆಕೋರರು ಪುಂಡಾಟ ಮಾಡಿದ್ದಾರೆ. ಅವರ ಮೇಲೆ ಕನಿಕರ ತೋರಿಸುವ ಅಗತ್ಯ ಇಲ್ಲ, ಕಠಿಣ ಕ್ರಮ ಕೈಗೊಳ್ಳಬೇಕು. ಗಲಭೆಕೋರರ ಆಸ್ತಿ ಜಪ್ತಿ ಮಾಡಬೇಕು, ಆಗಿರುವ ನಷ್ಟವನ್ನು ಅವರಿಂದಲೇ […]

ಪಾದರಾಯನಪುರ ಗೂಂಡಾಗಿರಿ: ಶಾಸಕ ಜಮೀರ್ ಪಾತ್ರ ತನಿಖೆಯಾಗಲಿ -ಸಿಟಿ ರವಿ
ಸಿ.ಟಿ.ರವಿ
Follow us on

ಬೆಂಗಳೂರು: ಪಾದರಾಯನಪುರದಲ್ಲಿ ಗೂಂಡಾಗಿರಿ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮದ್ ಪಾತ್ರ ಇದ್ರೂ ತನಿಖೆಯಾಗಬೇಕು. ಬೇರೆಯವರ ರೋಲ್ ಇದ್ರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವ ಸಿ.ಟಿ.ರವಿ ಆಗ್ರಹಿಸಿದ್ದಾರೆ. ಇದಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ದನಿ ಗೂಡಿಸಿದ್ದಾರೆ.

ತಪ್ಪು ಮಾಡಿದವರ ಬಗ್ಗೆ ಕನಿಕರ ಅಗತ್ಯವಿಲ್ಲ:
ಪಾದರಾಯನಪುರದಲ್ಲಿ ಗಲಭೆಕೋರರು ಪುಂಡಾಟ ಮಾಡಿದ್ದಾರೆ. ಅವರ ಮೇಲೆ ಕನಿಕರ ತೋರಿಸುವ ಅಗತ್ಯ ಇಲ್ಲ, ಕಠಿಣ ಕ್ರಮ ಕೈಗೊಳ್ಳಬೇಕು. ಗಲಭೆಕೋರರ ಆಸ್ತಿ ಜಪ್ತಿ ಮಾಡಬೇಕು, ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಬೇಕು. ದುಷ್ಕರ್ಮಿಗಳಿಗೆ ಪ್ರಚೋದನೆ ಕೊಟ್ಟವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು. ದೇಶದಲ್ಲಿ ಶೇ.30 ರಷ್ಟು ಕೊರೊನಾ ಸೋಂಕು ತಬ್ಲೀಗ್‌ಗಳಿಂದಲೇ ಅಂಟಿದೆ ಎಂದು ಕೆಂಡಕಾರಿದರು.

ಗಲಭೆ ಹಿಂದೆ ಯಾರ ಪ್ರಚೋದನೆ ಇದೆ?
ನಮ್ಮನ್ನು ನಿರ್ವೀರ್ಯರು ಎಂದು ಬೇರೆಯವರು ಹೇಳುವ ಮೊದಲೇ ನಾವು ಇದನ್ನೆಲ್ಲಾ ಮಟ್ಟಹಾಕಿ‌ ಸಾಧಿಸಿ ತೋರಿಸಬೇಕಿದೆ‌. ಒಂದೇ ಸಮಯದಾಯ ಯಾಕೆ ಹೀಗೆ ಆಡ್ತಿದೆ? ಇವರ ಹಿಂದೆ ಯಾರ ಪ್ರಚೋದನೆ ಇದೆ? ಕೆಲವು ಸಂಶಯಗಳು ಕಾಡುತ್ತಿವೆ. ಕೊರೊನಾ ವೈರಸ್ ಬಗ್ಗೆ ಯಾಕೆ ಇವ್ರಿಗೆ ಗೊತ್ತಾಗ್ತಿಲ್ಲ. ಗಲಭೆಕೋರರ ವಿರುದ್ಧ ಕ್ರಮಕ್ಕೆ ಉತ್ತರ ಪ್ರದೇಶ ಮಾದರಿ ಅನುಸರಿಸಬೇಕು ಅಥವಾ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಸಿ.ಟಿ.ರವಿ ಒತ್ತಾಯಿಸಿದರು.

Published On - 11:14 am, Mon, 20 April 20