ನಾಳೆ ಪಂಚಮಸಾಲಿ ಸ್ವಾಮೀಜಿಗಳ ಪಾದಯಾತ್ರೆ ಕ್ಯಾನ್ಸಲ್; ನೇರವಾಗಿ ಸಮಾವೇಶದಲ್ಲಿ ಭಾಗಿಯಾಗಲು ವಚನಾನಂದಶ್ರೀಗಳಿಂದ ಮನವಿ
Panchamasali Community: ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾವೇಶ ಸ್ಥಳಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದ ಪಂಚಮಸಾಲಿ ಮಠಾಧೀಶರು ವಿನಾಕಾರಣ ಟ್ರಾಫಿಕ್ ಜಾಮ್ ಆಗಬಾರದೆಂದು ಕ್ಯಾನ್ಸಲ್ ಮಾಡಿದ್ದಾರೆ.
ಬೆಂಗಳೂರು: ನಾಳೆ ಪಂಚಮಸಾಲಿ ಸ್ವಾಮೀಜಿಗಳ ಪಾದಯಾತ್ರೆ ರದ್ದುಪಡಿಸಲಾಗಿದೆ. ಫ್ರೀಡಂಪಾರ್ಕ್ನಿಂದ ಅರಮನೆ ಮೈದಾನದವರೆಗೆ ನಡೆಯಬೇಕಿದ್ದ ಪಾದಯಾತ್ರೆಯನ್ನು ರದ್ದುಪಡಿಸಲಾಗಿದೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾವೇಶ ಸ್ಥಳಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದ ಪಂಚಮಸಾಲಿ ಮಠಾಧೀಶರು ವಿನಾಕಾರಣ ಟ್ರಾಫಿಕ್ ಜಾಮ್ ಆಗಬಾರದೆಂದು ಕ್ಯಾನ್ಸಲ್ ಮಾಡಿದ್ದಾರೆ. ಜೊತೆಗೆ, ನೇರವಾಗಿ ಸಮಾವೇಶದಲ್ಲಿ ಭಕ್ತ ಸಮೂಹ ಭಾಗಿಯಾಗಲು ಮನವಿ ಮಾಡಿದ್ದರೆ. ಈ ಕುರಿತು ಟಿವಿ9ಗೆ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ವಚನಾನಂದ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ನಾಳೆ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯುವ ಹಿನ್ನೆಲೆಯಲ್ಲಿ ಹೆಚ್ಚು ವಾಹನಗಳು ಆಗಮಿಸುವ ಸಾಧ್ಯತೆಯಿದೆ. ಹಾಗಾಗಿ, ನಗರದಲ್ಲಿ ಸಂಚಾರ ದಟ್ಟಣೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಟ್ರಾಫಿಕ್ ಪೊಲೀಸರು 8 ಪ್ರಮುಖ ರಸ್ತೆ ಬದಲಾವಣೆ ಮಾಡಿದ್ದಾರೆ. ಬೈಕ್, ಕಾರಲ್ಲಿ ಬರುವರಿಗೆ ತ್ರಿಪುರವಾಸಿನಿ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದ್ದು ವಿಐಪಿ ವಾಹನಗಳಿಗೆ ಕೃಷ್ಣ ವಿಹಾರ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ಅರಮನೆ ಮೈದಾನದಲ್ಲಿ ನಾಳೆ ಪಂಚಮಸಾಲಿ ಬೃಹತ್ ಸಮಾವೇಶ: ಸಂಚಾರ ದಟ್ಟಣೆ ತಗ್ಗಿಸಲು 8 ಪ್ರಮುಖ ಮಾರ್ಗ ಬದಲಾವಣೆ