ಬೆಂಗಳೂರು: ರಾಜ್ಯದಲ್ಲಿ ದಿನೇದಿನೆ ಕೊರೊನಾ ಎರಡನೇ ಅಲೆ ಆತಂಕ ಹೆಚ್ಚಾಗ್ತಿದೆ. ಕಳೆದ ಒಂದು ವಾರದಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ರುದ್ರನರ್ತನ ಮಾಡ್ತಿದೆ. ಸದ್ಯ ರಾಜ್ಯದಲ್ಲಿ 6 ರಿಂದ 10ನೇ ತರಗತಿಗಳು ಆರಂಭವಾಗಿದ್ದು, ಬೆಂಗಳೂರು ಮತ್ತು ಕೇರಳ ಗಡಿ ಭಾಗದಲ್ಲಿ 8 ರಿಂದ 10ನೇ ತರಗತಿವರೆಗೆ ಮಾತ್ರ ಆರಂಭವಾಗಿದೆ. ಆದ್ರೆ, ಡೆಡ್ಲಿ ಕೊರೊನಾ ಮತ್ತೆ ಆರ್ಭಟಿಸ್ತಿರೋದ್ರಿಂದ ಮಕ್ಕಳಿಗೆ, ಆಫ್ಲೈನ್ ಪರೀಕ್ಷೆ ನಡೆಸಿದ್ರೆ ಕಂಟಕ ಎದುರಾಗಲಿದೆ. ಹೀಗಾಗಿ ಆನ್ಲೈನ್ ಪರೀಕ್ಷೆ ನಡೆಸಿ ಅಂತಾ ಪೋಷಕರು ಒತ್ತಾಯಿಸ್ತಿದ್ದಾರೆ.
ಈಗಾಗ್ಲೇ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಶಾಲಾ-ಕಾಲೇಜುಗಳನ್ನ ನಿನ್ನೆಯಿಂದಲೇ ಬಂದ್ ಮಾಡಲಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆಯನ್ನೂ ತಮಿಳುನಾಡು ಸರ್ಕಾರ ರದ್ದುಗೊಳಿಸಿದೆ. ಬೆಂಗಳೂರಿನಲ್ಲಿ ಕೊರೊನಾ ಕೇಸ್ಗಳು ಪ್ರತಿದಿನ ಸಾವಿರದ ಗಡಿ ದಾಟುತ್ತಿದ್ದು, ಮುಂದಿನ 2 ವಾರ ಡೇಂಜರ್ ಅಂತಾ ಹೇಳಿದ್ದು, ಎಚ್ಚರ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ನಿನ್ನೆಯೂ ಬೆಂಗಳೂರಿನಲ್ಲಿ ಸಾವಿರಕ್ಕೂ ಹೆಚ್ಚು ಹೊಸ ಕೊರೊನಾ ಕೇಸ್ಗಳು ಪತ್ತೆಯಾಗಿವೆ. ಇದು ಪೋಷಕರು ಮತ್ತು ವಿದ್ಯಾರ್ಥಿಗಳನ್ನ ಆತಂಕಕ್ಕೆ ದೂಡಿದೆ. ಶಾಲೆಗಳಲ್ಲೇ ಎಷ್ಟೇ ಸುರಕ್ಷತೆ ತೆಗೆದುಕೊಂಡ್ರೂ, ಭಯ ಇದ್ದೇ ಇದೆ. ಹೀಗಾಗಿ ಆನ್ಲೈನ್ ಪರೀಕ್ಷೆ ನಡೆಸಿ ಅಂತಾ ಪೋಷಕರು ಮನವಿ ಮಾಡಿದ್ದಾರೆ.
ಒಟ್ನಲ್ಲಿ ದಿನೇದಿನೆ ಹೆಚ್ಚಾಗುತ್ತಿರೋ ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಆನ್ಲೈನ್ ಕ್ಲಾಸ್ ಹಾಗೂ ಆನ್ಲೈನ್ ಪರೀಕ್ಷೆ ನಡೆಸಲು ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಸರ್ಕಾರ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ, ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.
ಇದನ್ನೂ ಓದಿ: ಕಾಲೇಜುಗಳಿಗೆ ಕಂಟಕವಾದ ಕೊರೊನಾ.. ಕಿಟ್ ಧರಿಸಿ ಮಹಾರಾಣಿ ಕಾಲೇಜಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು