AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ-ಖಾತೆಯ ನೆಪದಲ್ಲಿ ಅಧಿಕಾರಿಗಳಿಂದ ಕೋಟ್ಯಾಂತರ ರೂಪಾಯಿ ಅಕ್ರಮ.. ದೂರು ನೀಡಿದ್ರೂ ದಾಖಲಾಗಿಲ್ಲ ಎಫ್​ಐಆರ್

ಆ ನಗರಸಭೆಯಲ್ಲಿ ಅಧಿಕಾರಿಗಳದ್ದೇ ದರ್ಬಾರ್. ನಗರಸಭೆ ಕಣ್ಣಿಗೆ ಮಣ್ಣೆರಚಿ ಈ-ಖಾತೆಯ ನೆಪದಲ್ಲಿ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಅಕ್ರಮ ನಡೆಸಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಎಫ್​ಐಆರ್ ದಾಖಲಿಸಿಲ್ವಂತೆ.

ಈ-ಖಾತೆಯ ನೆಪದಲ್ಲಿ ಅಧಿಕಾರಿಗಳಿಂದ ಕೋಟ್ಯಾಂತರ ರೂಪಾಯಿ ಅಕ್ರಮ.. ದೂರು ನೀಡಿದ್ರೂ ದಾಖಲಾಗಿಲ್ಲ ಎಫ್​ಐಆರ್
ರಾಯಚೂರು ನಗರಸಭೆ
ಆಯೇಷಾ ಬಾನು
|

Updated on: Mar 23, 2021 | 8:12 AM

Share

ರಾಯಚೂರು ನಗರಸಭೆಯಲ್ಲಿ ಅಧಿಕಾರಿಗಳು ಆಡಿದ್ದೇ ಆಟ ಎಂಬಂತಾಗಿದೆ. ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ರಾಯಚೂರು ನಗರಸಭೆಗೆ ಬರೋಬ್ಬರಿ 30 ಕೋಟಿಗೂ ಹೆಚ್ಚು ಹಣ ಮೋಸವಾಗಿದೆ ಎಂಬ ಆರೋಪ ಕೇಳಿಬಂದಿದೆ. ನಗರಸಭೆ ವ್ಯಾಪ್ತಿಯ ಆಸ್ತಿಗಳಿಗೆ ಈ ಖಾತೆ ಮಾಡಿಕೊಡುವ ನೆಪದಲ್ಲಿ ನಗರದ ವಿವಿಧೆಡೆ ಸರ್ಕಾರಿ ಭೂಮಿಯಲ್ಲಿ ಗುಡಿಸಲು, ಶೆಡ್ ಹಾಕೊಂಡಿದ್ದವರಿಗೂ ಈ ಖಾತೆ ಕೊಟ್ಟು ಅಕ್ರಮ ಎಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಇನ್ನು ರಾಯಚೂರು ಜಿಲ್ಲಾ ನಗರಾಭಿವೃದ್ಧಿ ಕೋಶ ನಡೆಸಿರುವ ತನಿಖೆಯಲ್ಲಿ ಅಕ್ರಮ ಬಯಲಾಗಿತ್ತು. ಹೀಗಾಗಿ ಅಕ್ರಮದಲ್ಲಿ ಶಾಮೀಲಾದ ಹಿಂದಿನ ಪೌರಾಯುಕ್ತ ಮತ್ತು ನಗರಸಭೆ ಸಿಬ್ಬಂದಿ ವಿರುದ್ಧ ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿಗಳು ರಾಯಚೂರಿನ ಸದರಬಜಾರ್ ಠಾಣೆಗೆ ದೂರನ್ನು ಕೂಡ ಸಲ್ಲಿಸಿದ್ದರು. ಆದ್ರೆ ದೂರು ಸಲ್ಲಿಸಿ ತಿಂಗಳಾದ್ರೂ ಎಫ್ಐಆರ್ ದಾಖಲಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಈ ಬಗ್ಗೆ ರಾಯಚೂರು ಎಸ್​ಪಿರನ್ನ ಕೇಳಿದ್ರೆ, ಈ ದೂರಿಗೆ ಸಂಬಂಧಪಟ್ಟಂತೆ ದಾಖಲೆಗಳು, ಅಡಿಟ್ ವರದಿ ನೀಡಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತೆ ಅಂತಿದ್ದಾರೆ. ಒಟ್ನಲ್ಲಿ ಕೋಟಿ ಕೋಟಿ ಅಕ್ರಮದ ಆರೋಪ ಕೇಳಿ ಬಂದಿರೋ ಹಿನ್ನೆಲೆಯಲ್ಲಿ ಈಗಲಾದ್ರೂ ಸಂಬಂಧಪಟ್ಟವ್ರು ಅಲರ್ಟ್ ಆಗಬೇಕಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.

ಇದನ್ನೂ ಓದಿ: ರಾಯಚೂರು ನಗರಸಭೆ ಚುನಾವಣೆಯಲ್ಲಿ ಕುರುಡು ಕಾಂಚಾಣ, ವಿನಯ್‌ ಕುಮಾರ್ ವಿರುದ್ಧ ಆರೋಪ

Follow Us
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ