ರೈತರ ಆರ್ಥಿಕ ಸ್ಥಿತಿ ಬುಡಮೇಲಾಗಿದೆ: ಬೆಂಗಳೂರು ರೈತ ಸಮಾವೇಶದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ

ಸರ್ಕಾರ ಹಗಲು ದರೋಡೆ ನೀತಿ ರೂಪಿಸುತ್ತಿದೆ. ಈ ದೇಶದ ಎಲ್ಲಾ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಖಾಸಗಿ ಕಂಪನಿಗಳ ಕೈಗೆ ಹೋಗಬೇಕೆಂದು ಅವರ ಉದ್ದೇಶ. ಕೃಷಿಕರು ಹಳ್ಳಿಗಳಲ್ಲಿ ಉಳಿಯಲು ಸಾಧ್ಯವಾಗುತ್ತಿಲ್ಲ ಎಂದು ಸಮಾವೇಶದಲ್ಲಿ ರೈತ ಮುಖಂಡ ಕೋಡಿಹಳ್ಳಿ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರೈತರ ಆರ್ಥಿಕ ಸ್ಥಿತಿ ಬುಡಮೇಲಾಗಿದೆ: ಬೆಂಗಳೂರು ರೈತ ಸಮಾವೇಶದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ
ಕೋಡಿಹಳ್ಳಿ ಚಂದ್ರಶೇಖರ್​ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Apr 06, 2022 | 6:51 PM

ಬೆಂಗಳೂರು: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯ ರಾಜಧಾನಿಯಲ್ಲೂ ಸಮಾವೇಶ ನಡೆಸಲಾಗಿದೆ. ಇಂದು (ಮಾರ್ಚ್ 22) ಫ್ರೀಡಂಪಾರ್ಕ್ ಬಳಿ ರೈತರು ಸಮಾವೇಶ ಸೇರಿದ್ದಾರೆ. ಈಗ ರೈತರ ಆರ್ಥಿಕ ನೀತಿ ಬುಡಮೇಲು ಆಗಿದೆ. ಮೊದಲು ಇಂಪಿರಿಯಲ್ ಬ್ಯಾಂಕ್ ಇತ್ತು, ಇದರಿಂದ ಕೃಷಿ ಉತ್ಪನ್ನಗಳ ಬೆಲೆ ಸಮಾನವಾಗಿತ್ತು. ಇವತ್ತು ಆರ್​ಬಿಐ ಬಂದು ಎಲ್ಲಾ ತಲೆಕೆಳಗಾಗಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಸರ್ಕಾರ ಹಗಲು ದರೋಡೆ ನೀತಿ ರೂಪಿಸುತ್ತಿದೆ. ಈ ದೇಶದ ಎಲ್ಲಾ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಖಾಸಗಿ ಕಂಪನಿಗಳ ಕೈಗೆ ಹೋಗಬೇಕೆಂದು ಅವರ ಉದ್ದೇಶ. ಕೃಷಿಕರು ಹಳ್ಳಿಗಳಲ್ಲಿ ಉಳಿಯಲು ಸಾಧ್ಯವಾಗುತ್ತಿಲ್ಲ ಎಂದು ಸಮಾವೇಶದಲ್ಲಿ ರೈತ ಮುಖಂಡ ಕೋಡಿಹಳ್ಳಿ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರೈತರಿಂದ ಮನವಿ ಸ್ವೀಕರಿಸಿದ ಸಚಿವ ಬಿ.ಸಿ.ಪಾಟೀಲ್ ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಫ್ರೀಡಂಪಾರ್ಕ್ ಪಕ್ಕದ ಕಾಳಿದಾಸ ರಸ್ತೆಯಲ್ಲಿ ಸಮಾವೇಶ ನಡೆಯಿತು. ಈ ವೇಳೆ, ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತ ಮುಖಂಡರಿಂದ ಮನವಿ ಸ್ವೀಕರಿಸಿದರು. ರೈತರ ಬೇಡಿಕೆಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗಮನಕ್ಕೆ ತರುತ್ತೇನೆ. ಈಗಲೇ ವಿಧಾನಸೌಧಕ್ಕೆ ತೆರಳಿ ನಿಮ್ಮ ಮನವಿ ಸಲ್ಲಿಸುತ್ತೇನೆ. ನಿಮ್ಮ ಮನವಿಯ ಬಗ್ಗೆ ಸಿಎಂ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಪಾಟೀಲ್ ಹೇಳಿದರು. ರೈತರ ಮನವಿ ಸ್ವೀಕರಿಸಿ ಅವರು ವೇದಿಕೆಯಿಂದ ತೆರಳಿದರು.

ರಾಜ್ಯ ರೈತ ನಾಯಕರು ಮತ್ತು ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ಎಲ್ಲಾ ವಿಷಯಗಳನ್ನು ಹೇಳಿದ್ದಾರೆ. ಸಿಎಂ ಆದೇಶದಂತೆ ರೈತರಿಂದ ಮನವಿ ಪತ್ರ ಪಡೆದಿದ್ದೇನೆ. ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಮುಂದಿನ ಕ್ರಮ ಏನು ಅನ್ನೋದು ಮುಖ್ಯಮಂತ್ರಿಗಳ ವಿವೇಚನೆ ಬಿಟ್ಟಿದ್ದು ಎಂದು ರೈತರಿಂದ ಮನವಿ ಪತ್ರ ಪಡೆದ ಬಳಿಕ ಕೃಷಿ ಸಚಿವ ಬಿ.ಸಿ.ಪಾಟಿಲ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಹಸಿವಿನ ವ್ಯಾಪಾರದ ವಿರುದ್ಧ ನಾವು ಹೋರಾಡುತ್ತಿದ್ದೇವೆ, ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ; ಕೇಂದ್ರದ ವಿರುದ್ಧ ರಾಕೇಶ್ ಟಿಕಾಯತ್, ಯುದ್ವೀರ್ ಸಿಂಗ್ ವಾಗ್ದಾಳಿ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್, ಯದುವೀರ್ ಸಿಂಗ್​ಗೆ ಸ್ವಾಗತ

Published On - 11:10 pm, Mon, 22 March 21