ಕೋಮಾದಲ್ಲಿದ್ದ ಪುತ್ರನ ಅಂಗಾಂಗ ದಾನ ಮಾಡಿದ ಪೋಷಕರು

ಬೆಂಗಳೂರು:ಬ್ರೈನ್ ಹೆಮರೇಜ್​​ನಿಂದಾಗಿ ಕೋಮಾಗೆ ತಲುಪಿದ್ದ ಪುತ್ರನ ಅಂಗಾಂಗಗಳನ್ನು ಪೋಷಕರು ದಾನ ಮಾಡಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ಹೊಸಹಳ್ಳಿ ಗ್ರಾಮದ ಪುಟ್ಟಸ್ವಾಮಿಗೌಡ ಹಾಗೂ ದಿ.ಶಶಿಕಲಾ ಅವರ ಪುತ್ರ ವಿಕಾಸ್ ಕೋಮಾಗೆ ತಲುಪಿದ್ದ ಈತನ ಮೆದುಳು ನಿಷ್ಕ್ರಿಯವಾಗಿತ್ತು. ಪೋಷಕರು ಕಳೆದ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪುತ್ರನ​​​​​ ಅಂಗಾಂಗ ದಾನ ಮಾಡಿದ್ದಾರೆ. ಈ ಮೂಲಕ 30 ವರ್ಷದ ಯುವಕ ವಿಕಾಸ್ ಮೃತಪಟ್ಟರೂ ಆರು ಜನರಿಗೆ ಜೀವ ನೀಡಿದ್ದಾರೆ. ಅಂಗಾಂಗಗಳನ್ನು ಸ್ಪರ್ಶ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ […]

ಕೋಮಾದಲ್ಲಿದ್ದ ಪುತ್ರನ ಅಂಗಾಂಗ ದಾನ ಮಾಡಿದ ಪೋಷಕರು

Updated on: Dec 14, 2019 | 7:02 AM

ಬೆಂಗಳೂರು:ಬ್ರೈನ್ ಹೆಮರೇಜ್​​ನಿಂದಾಗಿ ಕೋಮಾಗೆ ತಲುಪಿದ್ದ ಪುತ್ರನ ಅಂಗಾಂಗಗಳನ್ನು ಪೋಷಕರು ದಾನ ಮಾಡಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ಹೊಸಹಳ್ಳಿ ಗ್ರಾಮದ ಪುಟ್ಟಸ್ವಾಮಿಗೌಡ ಹಾಗೂ ದಿ.ಶಶಿಕಲಾ ಅವರ ಪುತ್ರ ವಿಕಾಸ್ ಕೋಮಾಗೆ ತಲುಪಿದ್ದ ಈತನ ಮೆದುಳು ನಿಷ್ಕ್ರಿಯವಾಗಿತ್ತು.

ಪೋಷಕರು ಕಳೆದ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪುತ್ರನ​​​​​ ಅಂಗಾಂಗ ದಾನ ಮಾಡಿದ್ದಾರೆ. ಈ ಮೂಲಕ 30 ವರ್ಷದ ಯುವಕ ವಿಕಾಸ್ ಮೃತಪಟ್ಟರೂ ಆರು ಜನರಿಗೆ ಜೀವ ನೀಡಿದ್ದಾರೆ. ಅಂಗಾಂಗಗಳನ್ನು ಸ್ಪರ್ಶ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ, ‘ಜೀವ ಸಾರ್ಥಕತೆ’ ಅಧಿಕಾರಿಗಳು ಪಡೆದುಕೊಂಡಿದ್ದಾರೆ.