ಕಲಾಪ ಅಡ್ಡಿಪಡಿಸುವುದು, ನಂತರ ಸುಳ್ಳು ಹೇಳುವುದು -ಇಷ್ಟೇ ಕಾಂಗ್ರೆಸ್ ಅಜೆಂಡಾ: ಪ್ರಲ್ಹಾದ್ ಜೋಶಿ ಟೀಕಾಪ್ರಹಾರ
Pralhad Joshi: ಸಂಸತ್ ನಲ್ಲಿ ಚರ್ಚೆ ನಡೆಯದಂತೆ ಅಡ್ಡಿಪಡಿಸುವುದು ನಂತರ ಹೊರಗೆ ಬಂದು ಸುಳ್ಳು ಹೇಳುವುದೇ ಕಾಂಗ್ರೆಸ್ ನ ಸಿಂಗಲ್ ಪಾಯಿಂಟ್ ಅಜೆಂಡಾ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಪ್ರತಿಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಸಂಸತ್ ನಲ್ಲಿ ಚರ್ಚೆ ನಡೆಯದಂತೆ ಅಡ್ಡಿಪಡಿಸುವುದು ನಂತರ ಹೊರಗೆ ಬಂದು ಸುಳ್ಳು ಹೇಳುವುದೇ ಕಾಂಗ್ರೆಸ್ ನ ಸಿಂಗಲ್ ಪಾಯಿಂಟ್ ಅಜೆಂಡಾ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Parliamentary Affairs Minister Pralhad Joshi) ಪ್ರತಿಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಜೈರಾಂ ರಮೇಶ್ ಟ್ವೀಟು : ಜೋಶಿ ತಿರುಗೇಟು
ರಾಜ್ಯಸಭೆ ಕಲಾಪದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ ಎಂದು ಟ್ವೀಟ್ ಮಾಡಿದ ಕಾಂಗ್ರೆಸ್ ಪಕ್ಷದ ರಾಜ್ಯಸಭೆ ಸದಸ್ಯ, ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್, ಆಹಾರ ಪದಾರ್ಥಗಳ ಮೇಲಿನ ಜಿಎಸ್ ಟಿ ದರ ಹೆಚ್ಚಳ ಒಮ್ಮತದ ನಿರ್ಧಾರವಲ್ಲ ಅಂತ ಟ್ವಿಟರ್ ನಲ್ಲಿ ಟೀಕಿಸಿದ್ದಾರೆ. ಈ ಬಗ್ಗೆ ಸುಧೀರ್ಘ ಟ್ವೀಟ್ ಮಾಡಿರುವ ಜೈರಾಂ ರಮೇಶ್, ಜಿಎಸ್.ಟಿ ಕೌನ್ಸಿಲ್‌ನಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಇದು ಸರ್ವಸಮ್ಮತದ ನಿರ್ಧಾರವಲ್ಲ. ಕೇಂದ್ರ ಹಣಕಾಸು ಸಚಿವರು ರಾಜ್ಯಗಳ ಹಣಕಾಸು ಸಚಿವರ ಜೊತೆ ಚರ್ಚೆ ನಡೆಸಿಲ್ಲ ಎಂದು ಆಪಾದಿಸಿದ್ದಾರೆ.
ಜೈರಾಮ್ ರಮೇಶ್ ಅವರಿಗೆ ಸದನದ ಪದ್ದತಿ ಗೊತ್ತಿಲ್ವಾ..? – ಪ್ರಹ್ಲಾದ ಜೋಶಿ ತಿರುಗೇಟು
ಸರಣಿ ಟ್ವೀಟ್ ಮಾಡಿದ ಜೈರಾಮ್ ರಮೇಶ್ ಗೆ ಟ್ವಿಟರ್ ನಲ್ಲೇ ತಿರುಗೇಟು ನೀಡಿದ ಕೇಂದ್ರ ಸಚಿವ ಪ್ತಲ್ಹಾದ್ ಜೋಶಿಯವರು, ಚರ್ಚೆಗೆ ನಾವು ಸಿದ್ಧ, ಸದನದಲ್ಲಿ ಯಾವುದೇ ವಿಷಯಗಳ ಚರ್ಚೆಗೆ ಸದನದ ನೀತಿ ನಿಯಮಾವಳಿಗಳಿವೆ. ಪ್ರತಿಪಕ್ಷಗಳು ಸಭಾಧ್ಯಕ್ಷರಿಗೆ ನೋಟಿಸ್ ಕೊಟ್ಟು ಚರ್ಚೆಗೆ ಅವಕಾಶ ಕೋರಬೇಕು. ಆ ಬಳಿಕ ಅದು ಕಲಾಪ ಸಲಹಾ ಸಮಿತಿಯಲ್ಲಿ ಚರ್ಚೆಯಾಗಿ ಸಮಯ ನಿಗದಿಯಾಗಬೇಕು. ಆದರೆ ಕಾಂಗ್ರೆಸ್ ಗೆ ಚರ್ಚಿಸುವುದು ಬೇಕಿಲ್ಲ, ಸದನದೊಳಗೆ ಕಲಾಪಕ್ಕೆ ಅಡ್ಡಿಪಡಿಸುವುದು, ಸದನದ ಹೊರಗೆ ಬಂದು ಸುಳ್ಳು ಹೇಳುವುದೇ ಕಾಂಗ್ರೆಸ್ ಕೆಲಸ ಅಂತ ಕಿಡಿ ಕಾರಿದ್ದಾರೆ.
ಪ್ರತಿಯೊಬ್ಬ ಸಂಸದರಿಗೂ ಪ್ರಶ್ನೋತ್ತರ ಅವಧಿ ಬಹಳ ಮುಖ್ಯ. ಆದರೆ ಪ್ರತಿಪಕ್ಷ ಕಾಂಗ್ರೆಸ್ ಪ್ರಶ್ನೋತ್ತರ ಅವಧಿಯನ್ನೇ ನಡೆಸಲು ಅವಕಾಶವಾಗದಂತೆ ಸದನದ ಕಲಾಪಕ್ಕೆ ಅಡ್ಡಿ ಮಾಡುತ್ತಿದೆ ಎಂದು ಪ್ರಲ್ಹಾದ ಜೋಶಿ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
“ಆಹಾರ ಪದಾರ್ಥಗಳ ಮೇಲಿನ ಜಿಎಸ್ ಟಿ ದರಗಳ ಕುರಿತು ಮುಕ್ತ ಮನಸ್ಸಿನಿಂದ ಚರ್ಚಿಸಲು ನಾವು ತಯಾರಿದ್ದೇವೆ. ಆದರೆ ಕೇಂದ್ರ ವಿತ್ತ ಸಚಿವರು ಕೋವಿಡ್ ಗೆ ತುತ್ತಾಗಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಚೇತರಿಸಿಕೊಂಡ ತಕ್ಷಣ ಮತ್ತು ಸಂಸದೀಯ ಕಲಾಪ ಸಲಹಾ ಸಮಿತಿ ನಿರ್ಧರಿಸಿದ ತಕ್ಷಣ ವಿತ್ತ ಸಚಿವರು ಉತ್ತರಿಸುತ್ತಾರೆ. ಇಂದು ರಾಜ್ಯಸಭೆಯ ಗೌರವಾನ್ವಿತ ಸಭಾಧ್ಯಕ್ಷರು ಚರ್ಚೆಗೂ ಅವಕಾಶ ನೀಡೋದಾಗಿ ಹೇಳಿದರು. ಸದನದ ವಿಷಯ ಪಟ್ಟಿಯಂತೆ ಚರ್ಚೆಯ ಪ್ರಕ್ರಿಯೆಗಳು ಆರಂಭವಾಗಬೇಕು, ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರಿಗೆ ಸದನದ ಪದ್ದತಿ ಗೊತ್ತಿಲ್ಲವೇ..? ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
“ಕಾಂಗ್ರೆಸ್ ಪಕ್ಷದ ಉದ್ದೇಶ ಸಂಸತ್ತಿನ ಕಲಾಪ ಅಡ್ಡಿಪಡಿಸೋದು ಮಾತ್ರ, ಚರ್ಚೆ ನಡೆಸೋದಲ್ಲ. ವಾಸ್ತವವನ್ನು ಎದುರಿಸಲು ಸಾಧ್ಯವಾಗದ ಕಾರಣ ಸರ್ಕಾರದ ಉದ್ದೇಶದ ಬಗ್ಗೆ ಕಾಂಗ್ರೆಸ್ ಮುಖಂಡರು ಸುಳ್ಳು ಹೇಳುತ್ತಿದ್ದಾರೆ. ಕಲಾಪ ಅಡ್ಡಿಪಡಿಸುವುದು ಮತ್ತು ಪ್ರಪಂಚದ ಮುಂದೆ ಸುಳ್ಳು ಹೇಳುವುದು ಇದು ಕಾಂಗ್ರೆಸ್ ನೀತಿ” ಎಂದು ಪ್ರಲ್ಹಾದ ಜೋಶಿ ತಿರುಗೇಟು ನೀಡಿದ್ದಾರೆ.
“ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳಲ್ಲಿ ಹಣದುಬ್ಬರ ಎಲ್ಲಿಗೆ ತಲುಪಿದೆ ಎನ್ನುವುದು ಕಾಂಗ್ರೆಸ್ ಗೂ ಗೊತ್ತಿದೆ. ಭಾರತ ಹಣದುಬ್ಬರವನ್ನು ಕಂಟ್ರೋಲ್ ಮಾಡುವಲ್ಲಿ ದಿಟ್ಟ ಹೆಜ್ಜೆಗಳನ್ನ ತೆಗೆದುಕೊಂಡಿದೆ. ಹೀಗಾಗಿ ಸದನದಲ್ಲಿ ಕಾಂಗ್ರೆಸ್ ಚರ್ಚಿಸಲು ತಯಾರಿಲ್ಲ” ಎಂದು ಕಾಂಗ್ರೆಸ್ ವಿರುದ್ಧ ಪ್ರಲ್ಹಾದ ಜೋಶಿ ಟೀಕಾ ಪ್ರಹಾರ ನಡೆಸಿದ್ದಾರೆ.
I would like to counter @Jairam_Ramesh's statement, the Govt. is ready for discussion.
Minister of Finance and Corporate Affairs @NSitharaman ji is down with Covid, and as soon as she recovers and comes back the discussion will be held on the floor and on the price rise issue. pic.twitter.com/DQ416HIEEo
— Pralhad Joshi (@JoshiPralhad) July 20, 2022