ನವದೆಹಲಿ: ಭಾರತ ಸರ್ಕಾರವು ಇಸ್ರೇಲ್ ಮೂಲದ ತಂತ್ರಜ್ಞಾನ ಬಳಸಿ ಹಲವಾರು ಗಣ್ಯ ವ್ಯಕ್ತಿಗಳ ಟೆಲಿಫೋನ್ಗಳನ್ನು ಟ್ಯಾಪ್ ಮಾಡುತ್ತಿದೆ. ಪೆಗಾಸಿಸ್ ಗೂಢಚರ್ಯೆ ನಡೆಸುತ್ತಿದೆ ಎಂಬ ಆರೋಪಗಳು ನಿನ್ನೆಯಿಂದ ದಟ್ಟವಾಗಿ ಹರಡತೊಡಗಿದೆ. ಇದರ ವಿರುದ್ಧ ಪ್ರತಿಪಕ್ಷಗಳ ನಾಯಕರು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
ಈ ಮಧ್ಯೆ ಜೆಡಿಎಸ್ ನಾಯಕ, ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರು ನವದೆಹಲಿಗೆ ಬಂದಿದ್ದು, ಪೆಗಾಸಿಸ್ ಟೆಲಿಫೋನ್ ಗೂಢಚರ್ಯೆ ಬಗ್ಗೆ ಗಮನ ಸೆಳೆದು, ಸುದ್ದಿಗಾರರು ಪ್ರತಿಕ್ರಿಯೆ ಬಯಸಿದಾಗ ರೇವಣ್ಣ ಅವರು ಯಾವ್ ಟ್ಯಾಪು.. ಅದೇನು ನನಗೆ ಗೊತ್ತಿಲ್ಲ ಸರ್. ನನ್ನ ಹತ್ರ ಇರೋದು ಡಬ್ಬ ಮೊಬೈಲ್. ನಮ್ಮನ್ನು ಯಾರ್ ಟ್ಯಾಪ್ ಮಾಡ್ತಾರೆ ಎಂದು ನಗೆಯಾಡಿದ್ದಾರೆ.
ಇನ್ನು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಹೆಚ್ಡಿ ಕುಮಾರಸ್ವಾಮಿ ಅವರ ಆಪ್ತರ ಟೆಲಿಪೋನ್ಗಳ ಟ್ಯಾಪ್ ವಿಚಾರವಾಗಿ ಕೇಳಿದಾಗ ಡೊಡ್ಡವರ ಫೊನ್ ಟ್ಯಾಪ್ ಬಗ್ಗೆ ನನಗೆ ಗೊತ್ತಿಲ್ಲ. ಅವರೇ ಹೇಳಬೇಕು, ನಮಗೇನು ಗೊತ್ತಿಲ್ಲ. ಅದು ದೊಡ್ಡವರ ವಿಚಾರ, ಪ್ರತಿಕ್ರಿಯೆ ನೀಡಲು ನಾನು ಆ ಮಟ್ಟಕ್ಕೆ ಬೆಳೆದಿಲ್ಲ. ದೇವೇಗೌಡರು, ಕುಮಾರಸ್ವಾಮಿ ಫೊನ್ ಟ್ಯಾಪ್ ಆಗಿರುವ ಬಗ್ಗೆ ಅವರ ಹತ್ತಿರವೇ ಕೇಳಿ ತಿಳಿದುಕೊಳ್ಳಿ ಎಂದು ಮಾರ್ಮಿಕವಾಗಿ ಹೇಳಿದರು. ಶ್ರೀರಂಗಪಟ್ಟಣ – ಪಾಂಡವಪುರ ರಸ್ತೆಯಲ್ಲಿ ಅಂಡರ್ ಪಾಸ್ ನಿರ್ಮಾಣದ ಚರ್ಚೆಗಾಗಿ ದೆಹಲಿಗೆ ಬಂದಿದ್ದೇವೆ ಎಂದು ಹೆಚ್ಡಿ ರೇವಣ್ಣ ಇದೇ ವೇಳೆ ತಮ್ಮ ದೆಹಲಿ ಭೇಟಿ ಬಗ್ಗೆ ಹೇಳಿದರು.
Also Read:
ಜನರ ವೈಯಕ್ತಿಕ ಬದುಕಿನಲ್ಲಿ ಬಿಜೆಪಿ ಇಣುಕಬಹುದು: ಮಾಜಿ ಸಿಎಂ ಕುಮಾರಸ್ವಾಮಿ ಎಚ್ಚರಿಕೆ
(Pegasus Spyware HD Revanna on pegasus spy telephone tapping )
Published On - 11:00 am, Wed, 21 July 21